ಹಣವಲ್ಲ, ಶಾರುಖ್ ಖಾನ್ ಈ ಸೂತ್ರ ನಿಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಲೈಫ್ ಖುಷ್
ಶಾರುಖ್ ಖಾನ್ ಜೀವನದ ಕಷ್ಟಗಳ ನಡುವೆಯೂ ಸಂತೋಷದಿಂದ ಇರಲು ಒಂದು ವಿಶಿಷ್ಟ ಸೂತ್ರವನ್ನು ಹಂಚಿಕೊಂಡಿದ್ದಾರೆ. 99.999% ಜನರ ಬಗ್ಗೆ ಯೋಚಿಸದೆ, ಕೇವಲ ಕುಟುಂಬ ಮತ್ತು ಆತ್ಮೀಯ ಗೆಳೆಯರ ಮೇಲೆ ಗಮನ ಹರಿಸುವುದು ಅವರ ಮಂತ್ರ. ಈ ಸರಳ ತಂತ್ರವನ್ನು ಅಳವಡಿಸಿಕೊಂಡರೆ ಯಾರಾದರೂ ಖುಷಿಯಿಂದ ಇರಬಹುದು ಎಂದು SRK ಹೇಳುತ್ತಾರೆ.

ಶಾರುಖ್ ಖಾನ್ (Shah Rukh Khan) ಅವರು ಹಲವು ಏರುಪೇರುಗಳನ್ನು ಕಂಡವರು. ಅವರು ಈಗ ದೊಡ್ಡ ಹಂತಕ್ಕೆ ಬಂದು ತಲುಪಿದ್ದಾರೆ. ಅವರು ಜೀವನದಲ್ಲಿ ಕಷ್ಟಗಳನ್ನು ನೋಡಿದ್ದಾರೆ. ಅವರು ತಮ್ಮ ಅನುಭವದಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದಾರೆ. ಇದನ್ನು ಅನೇಕ ಬಾರಿ ಹೇಳಿದ್ದಾರೆ. ಈ ಪೈಕಿ ಹೆಚ್ಚು ಗಮನ ಸೆಳೆದು ವಿಡಿಯೋ ಒಂದಿದೆ. ಅವರು ತಮ್ಮ ಜೀವನ ಖುಷಿಯಿಂದ ಇರಲು ಒಂದು ಕಾರಣ ವಿವರಿಸಿದ್ದರು. ಅದನ್ನು ಎಲ್ಲರೂ ಅಳವಡಿಸಿಕೊಂಡರೆ ಜೀವನ ಸಖತ್ ಖುಷಿಯಿಂದ ಇರಲಿದೆ.
ಶಾರುಖ್ ಖಾನ್ ಬಳಿ ಹಣ ಇದೆ. ಹಾಗಂತ ಹಣ ಇದ್ದವರೆಲ್ಲ ಖುಷಿಯಾಗಿ ಇರೋಕೆ ಸಾಧ್ಯವಿಲ್ಲ. ಎಷ್ಟೋ ಮಂದಿ ಹಣ ಇದ್ದ ಹೊರತಾಗಿಯೂ ಖುಷಿಯಿಂದ ಇರಲು ಸಾಧ್ಯವಾಗಿಲ್ಲ. ಇದಕ್ಕೆ ಶಾರುಖ್ ಖಾನ್ ಅವರು ಒಂದು ಸುಲಭ ಟೆಕ್ನಿಕ್ ಹೇಳಿಕೊಟ್ಟಿದ್ದಾರೆ. ಹಳೆಯ ವಿಡಿಯೋ ಒಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು.
‘ನನ್ನ ಫ್ರೆಂಡ್ ಒಬ್ಬರು ಇದ್ದಾರೆ, ದೊಡ್ಡ ನಿರ್ದೇಶಕ ಹಾಗೂ ನಿರ್ಮಾಪಕ. ನಾನು ಅವರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಅವರು ಕರೆ ಮಾಡಿ, ನಿಮ್ಮ ಸಿನಿಮಾ ಬಂದರೆ ನನ್ನ ಸಿನಿಮಾ ಬರ್ಬಾದ್ ಆಗುತ್ತದೆ ಎಂದರು. ಏನು ಬೇಕು ಎಂದು ಕೇಳಿದೆ. ನನ್ನ ಸಿನಿಮಾ ರಿಲೀಸ್ ಟೈಮ್ಗೆ ನಿನ್ನ ಸಿನಿಮಾ ರಿಲೀಸ್ ಮಾಡಬೇಡ ಎಂದರು. ನಾನು ಓಕೆ ಎಂದೆ. ಇದನ್ನು ಹೇಳಲು ಏಕೆ ಇಷ್ಟು ವಿಚಲಿತಗೊಂಡಿದ್ದೀರಿ ಎಂದು ಕೇಳಿದೆ’ ಎಂದಿದ್ದರು ಶಾರುಖ್.
‘ನೀನು ನನ್ನ ಹೇಟ್ ಮಾಡ್ತೀಯಾ ಎಂದರು. ನಾನು ಅವರಿಗೆ ನೇರವಾಗಿ ಹೇಳಿದೆ. ನಿಮಗೆ ನಾನು ಒಳ್ಳೆಯದನ್ನೂ ಯೋಚನೆ ಮಾಡಲ್ಲ, ಕೆಟ್ಟದನ್ನೂ ಯೋಚಿಸಲ್ಲ. ನಾನು ನಿಮ್ಮ ಬಗ್ಗೆ ಯೋಚಿಸೋದೇ ಇಲ್ಲ. 99.999 ಪರ್ಸೆಂಟ್ ಜನರ ಬಗ್ಗೆ ನಾನು ಯೋಚಿಸೋದಿಲ್ಲ. ನನ್ನ ಕುಟುಂಬ, ಗೆಳೆಯರ ಬಗ್ಗೆ ಮಾತ್ರ ಯೋಚಿಸೋದು. ಎಲ್ಲರೂ ಹೀಗೆ ಮಾಡಿದರೆ ಜೀವನ ಚೆನ್ನಾಗಿರುತ್ತದೆ’ ಎಂದಿದ್ದರು ಶಾರುಖ್ ಖಾನ್. ಈ ಸೂತ್ರ ಅನೇಕರಿಗೆ ಹೌದು ಎನಿಸಿದೆ.
ಇದನ್ನೂ ಓದಿ: ಎಲ್ಲವೂ ಶಾರುಖ್ ಖಾನ್ ಅವರಂತೆ; ಆರ್ಯನ್ಗೆ ತಂದೆಯ ಎಷ್ಟೆಲ್ಲ ವಿಚಾರ ಹೋಲುತ್ತೆ ನೋಡಿ
ಶಾರುಖ್ ಖಾನ್ ಅವರು ಸದ್ಯ ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅವರ ಮಗ ಆರ್ಯನ್ ಖಾನ್ ಅವರು ‘ಬ್ಯಾಡ್ ಆಫ್ ಬಾಲಿವುಡ್’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದು, ಗೆಲುವು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Sat, 4 October 25







