Pathaan Beats KGF 2: ಹಿಂದಿಯಲ್ಲಿ ‘ಕೆಜಿಎಫ್​ 2’ ಚಿತ್ರದ ದಾಖಲೆ ಮುರಿದ ‘ಪಠಾಣ್​’; ಇನ್ನೂ ತಗ್ಗಿಲ್ಲ ಶಾರುಖ್​ ಸಿನಿಮಾ ಹವಾ

|

Updated on: Feb 08, 2023 | 8:59 PM

Shah Rukh Khan | Pathaan Total Collection: ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಹಿಂದಿ ವರ್ಷನ್​ ಗಳಿಕೆಯನ್ನು ‘ಪಠಾಣ್​’ ಸಿನಿಮಾ ಬೀಟ್​ ಮಾಡಿದೆ. ಬಿಡುಗಡೆಯಾಗಿ 15 ದಿನ ಕಳೆದರೂ ಈ ಚಿತ್ರದ ಹವಾ ಕಡಿಮೆ ಆಗಿಲ್ಲ.

Pathaan Beats KGF 2: ಹಿಂದಿಯಲ್ಲಿ ‘ಕೆಜಿಎಫ್​ 2’ ಚಿತ್ರದ ದಾಖಲೆ ಮುರಿದ ‘ಪಠಾಣ್​’; ಇನ್ನೂ ತಗ್ಗಿಲ್ಲ ಶಾರುಖ್​ ಸಿನಿಮಾ ಹವಾ
ಶಾರುಖ್​ ಖಾನ್​, ಯಶ್​
Follow us on

ನಟ ಶಾರುಖ್​ ಖಾನ್​ (Shah Rukh Khan) ಅಭಿನಯದ ‘ಪಠಾಣ್​’ ಸಿನಿಮಾ ಗೆಲ್ಲಲಿ ಎಂಬುದು ಅಭಿಮಾನಿಗಳ ಬಯಕೆ ಮತ್ತು ಹಾರೈಕೆ ಆಗಿತ್ತು. ಈ ಸಿನಿಮಾ ಗೆದ್ದಿರುವುದು ಮಾತ್ರವಲ್ಲದೇ ಅನೇಕ ದಾಖಲೆಗಳನ್ನು ಕೂಡ ಬರೆಯುತ್ತಿದೆ. ಹಿಂದಿಯಲ್ಲಿ ಯಶ್​ ನಟನೆಯ ‘ಕೆಜಿಎಫ್​ 2’ ಸಿನಿಮಾ ಮಾಡಿದ್ದ ದಾಖಲೆಯನ್ನು ಕೂಡ ‘ಪಠಾಣ್​’ (Pathaan Movie) ಚಿತ್ರ ಮುರಿದಿದೆ. ಆ ಮೂಲಕ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿಗೆ ‘ಪಠಾಣ್’ ಚಿತ್ರ ಪಾತ್ರವಾಗಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ (ಹಿಂದಿ ಡಬ್ಬಿಂಗ್​​) ಸಿನಿಮಾ ಇದೆ. ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಸಿನಿಮಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಪ್ರಶಾಂತ್ ನೀಲ್​ ನಿರ್ದೇಶನದ ‘ಕೆಜಿಎಫ್​ 2’ ಸಿನಿಮಾ 2022ರ ಏಪ್ರಿಲ್​ 14ರಂದು ಬಿಡುಗಡೆ ಆಯಿತು. ಹಿಂದಿಗೆ ಡಬ್​ ಆಗಿದ್ದ ಆ ಚಿತ್ರ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ ಒಟ್ಟು ಹಣ 434.70 ಕೋಟಿ ರೂಪಾಯಿ. ಈ ದಾಖಲೆಯನ್ನು ಮುರಿಯುವಲ್ಲಿ ‘ಪಠಾಣ್​’ ಸಿನಿಮಾ ಯಶಸ್ವಿ ಆಗಿದೆ. ಮಂಗಳವಾರವೇ (ಫೆ.7) ಈ ಸಿನಿಮಾದ ಗಳಿಕೆ 430.25 ಕೋಟಿ ರೂಪಾಯಿ ಆಗಿತ್ತು. ಬುಧವಾರ ಕೂಡ ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿರುವುದರಿಂದ ಅನಾಯಾಸವಾಗಿ ‘ಕೆಜಿಎಫ್​ 2’ ಚಿತ್ರವನ್ನು ಇದು ಹಿಂದಿಕ್ಕಿದೆ ಎಂದು ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಜನವರಿ 25ರಂದು ‘ಪಠಾಣ್​’ ಸಿನಿಮಾ ಬಿಡುಗಡೆ ಆಯಿತು. 15 ದಿನ ಕಳೆದಿದ್ದರೂ ಕೂಡ ಈ ಚಿತ್ರದ ಅಬ್ಬರ ಮುಗಿದಿಲ್ಲ. ಇಂದಿಗೂ ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ 740 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ. ಅಂತಿಮವಾಗಿ ‘ಪಠಾಣ್​’ ಎಷ್ಟು ಹಣ ಬಾಚಿಕೊಳ್ಳಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

Pathaan Movie: ಪಾಕಿಸ್ತಾನದಲ್ಲಿ ‘ಪಠಾಣ್​’ ಚಿತ್ರದ ಅಕ್ರಮ ಪ್ರದರ್ಶನ; ಕಾನೂನು ಕ್ರಮ ಕೈಗೊಂಡ ಸೆನ್ಸಾರ್​ ಮಂಡಳಿ

ಟಿಕೆಟ್​ ಬೆಲೆ ತಗ್ಗಿಸಿದ ‘ಪಠಾಣ್​’ ನಿರ್ಮಾಪಕರು:

ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಜೋಡಿಯಾಗಿ ನಟಿಸಿರುವ ‘ಪಠಾಣ್​’ ಚಿತ್ರಕ್ಕೆ ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ವಾರಾಂತ್ಯದ ಶೋಗಳನ್ನು ಹೊರತುಪಡಿಸಿ, ಇನ್ನುಳಿದ ದಿನಗಳಲ್ಲಿ ಟಿಕೆಟ್​ ಬೆಲೆ ತಗ್ಗಿಸಲಾಗಿದೆ. ಇದರಿಂದ ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ‘ಪಠಾಣ್​’ ಕಲೆಕ್ಷನ್​ ಹೆಚ್ಚಲು ಇದು ಕೂಡ ಸಹಕಾರಿ ಆಗಿದೆ. ಈ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಅವರ ಚಾರ್ಮ್​ ಕೂಡ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.