AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ: 67ನೇ ವಯಸ್ಸಿನಲ್ಲಿ ಆಸೆ ತಿಳಿಸಿದ ‘ಶಕ್ತಿಮಾನ್’ ನಟ ಮುಕೇಶ್ ಖನ್ನಾ

ಹಣ, ಯಶಸ್ಸು, ಜನಪ್ರಿಯತೆ ಇದ್ದರೂ ಕೂಡ ಮುಖೇಶ್ ಖನ್ನಾ ಈವರೆಗೂ ಮದುವೆ ಆಗಿಲ್ಲ. ಆದರೆ ಈಗ ಅವರು ಮದುವೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 67ನೇ ವಯಸ್ಸಿನಲ್ಲಿ ಕೂಡ ಅವರಿಗೆ ವಿವಾಹದ ಮೇಲೆ ನಂಬಿಕೆ ಇದೆ. ಆ ಬಗ್ಗೆ ಇತ್ತೀಚಿಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ: 67ನೇ ವಯಸ್ಸಿನಲ್ಲಿ ಆಸೆ ತಿಳಿಸಿದ ‘ಶಕ್ತಿಮಾನ್’ ನಟ ಮುಕೇಶ್ ಖನ್ನಾ
Mukesh Khanna
ಮದನ್​ ಕುಮಾರ್​
|

Updated on:May 04, 2026 | 8:45 PM

Share

ಭಾರತೀಯ ಕಿರುತೆರೆಯ ಐಕಾನಿಕ್ ಸೂಪರ್ ಹೀರೋ ‘ಶಕ್ತಿಮಾನ್’ (Shaktimaan) ಖ್ಯಾತಿಯ ಹಿರಿಯ ನಟ ಮುಖೇಶ್ ಖನ್ನಾ ಅವರಿಗೆ ಈಗ 67 ವರ್ಷ. ಈ ವಯಸ್ಸಿನಲ್ಲೂ ಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆ, ಸಂಬಂಧಗಳು ಮತ್ತು ಜೀವನದ ಬಗ್ಗೆ ಮುಖೇಶ್ ಖನ್ನಾ (Mukesh Khanna) ಅವರು ಅತ್ಯಂತ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಣೆಯಲ್ಲಿ ಬರೆದಿರುವ ಹುಡುಗಿ ಸಿಕ್ಕಿರೆ ಮದುವೆ (Marriage) ಆಗುವುದಾಗಿ ಮುಖೇಶ್ ಖನ್ನಾ ಅವರು ಹೇಳಿದ್ದಾರೆ.

‘ದಿ ಫಿಲ್ಮಿ ಚರ್ಚಾ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮುಖೇಶ್ ಖನ್ನಾ ಅವರು, ತಾವು ಇಂದಿಗೂ ಮದುವೆಗೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ. ‘ನಾನು ಮದುವೆಯಾಗಿಲ್ಲ ಎಂದ ಮಾತ್ರಕ್ಕೆ ನನಗೆ ವಿವಾಹದ ಮೇಲೆ ನಂಬಿಕೆ ಇಲ್ಲ ಎಂದರ್ಥವಲ್ಲ. ವಾಸ್ತವವಾಗಿ, ನಾನು ಉಳಿದವರಿಗಿಂತ ಹೆಚ್ಚಾಗಿ ಮದುವೆಯನ್ನು ನಂಬುತ್ತೇನೆ. ಪತ್ನಿ ಎಂಬವಳು ಸುಮ್ಮನೆ ಬರುವುದಿಲ್ಲ, ಅವಳು ವಿಧಿಯಲ್ಲಿ ಬರೆಯಲ್ಪಟ್ಟಿರುತ್ತಾಳೆ. ನನಗಾಗಿ ಜನಿಸಿದ ಸಂಗಾತಿ ಎಲ್ಲೋ ಇದ್ದಾಳೆ, ವಿಧಿ ನಮ್ಮನ್ನು ಒಟ್ಟುಗೂಡಿಸಿದಾಗ ಮದುವೆ ಖಂಡಿತ ನಡೆಯುತ್ತದೆ’ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.

ಮದುವೆಯ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನ ಹೊಂದಿರುವ ಮುಖೇಶ್ ಖನ್ನಾ ಅವರು, ‘ಶಾಸ್ತ್ರಗಳ ಪ್ರಕಾರ, ಪತ್ನಿ ಎನ್ನುವವಳು ಹಿಂದಿನ ಜನ್ಮದ ಪ್ರಾರಬ್ಧ ಕರ್ಮ. ನಿಮ್ಮ ಕರ್ಮಗಳನ್ನು ಸರಿಪಡಿಸಲು ಅವಳು ನಿಮ್ಮ ಜೀವನಕ್ಕೆ ಬರುತ್ತಾಳೆ. ಜೀವನದಲ್ಲಿ ಹಲವು ಅಫೇರ್‌ಗಳಿರಬಹುದು, ಆದರೆ ಪತ್ನಿ ಮಾತ್ರ ಒಬ್ಬಳೇ. ಮದುವೆ ಎನ್ನುವುದು ಎರಡು ಆತ್ಮಗಳ ಪವಿತ್ರ ಮಿಲನ’ ಎಂದು ವಿವರಿಸಿದ್ದಾರೆ.

ಪ್ರೀತಿ ಎನ್ನುವುದು ಜೀವನದಲ್ಲಿ ಒಮ್ಮೆ ಮಾತ್ರ ಎಂಬುದು ಅವರ ನಂಬಿಕೆ. ನಿಜವಾದ ಪ್ರೀತಿ ಮತ್ತು ಆಕರ್ಷಣೆಯ ನಡುವಿನ ವ್ಯತ್ಯಾಸವನ್ನು ತಿಳಿಸಿದ ಅವರು, ‘ನನ್ನ ಪ್ರಕಾರ ಪ್ರೀತಿ ಎನ್ನುವುದು ಜೀವನದಲ್ಲಿ ಒಮ್ಮೆ ಮಾತ್ರ ಆಗುತ್ತದೆ. ಉಳಿದೆಲ್ಲವೂ ಕೇವಲ ಆಕರ್ಷಣೆ ಅಥವಾ ಬಯಕೆ ಅಷ್ಟೆ. ಒಬ್ಬರಿಗೆ ಐ ಲವ್ ಯೂ ಎಂದು ಹೇಳಿ, ನಂತರ ಮತ್ತೊಬ್ಬರ ಬಳಿ ಹೋದರೆ ಅದು ವಂಚನೆ ಆಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು?

ಹಲವು ಪ್ರೇಮ ಸಂಬಂಧಗಳನ್ನು ಹೊಂದುವುದೇ ಗಂಡಸ್ತನದ ಲಕ್ಷಣ ಎಂಬ ಮಾತನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ‘ಗಂಡಸ್ತನವನ್ನು ಸಾಬೀತುಪಡಿಸಲು ಹತ್ತಾರು ಸಂಬಂಧಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇರೆ ಅರ್ಥಪೂರ್ಣ ದಾರಿಗಳಿವೆ. ಮಹಿಳೆಯರ ಮೇಲೆ ನನಗೆ ಅಪಾರ ಗೌರವವಿದೆ’ ಎಂದು ಖಡಕ್ ಆಗಿ ಹೇಳುವ ಮೂಲಕ ತಮ್ಮ ಜೀವನದ ತತ್ವಗಳನ್ನು ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:27 pm, Mon, 4 May 26

Follow Us
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ
ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ
ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ; ಸುವೇಂದು ಅಧಿಕಾರಿ
ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ; ಸುವೇಂದು ಅಧಿಕಾರಿ
ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್
ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್
ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ?
ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ?
ಸಿಕ್ಕ ಸಿಕ್ಕ ಗೋಡೆ ನೋಡಿ ಮೂತ್ರ ವಿಸರ್ಜನೆ ಮಾಡ್ತೀರಾ? ಹುಷಾರ್
ಸಿಕ್ಕ ಸಿಕ್ಕ ಗೋಡೆ ನೋಡಿ ಮೂತ್ರ ವಿಸರ್ಜನೆ ಮಾಡ್ತೀರಾ? ಹುಷಾರ್
ಬಡ್ತಿ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆ
ಬಡ್ತಿ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆ
ಡಾಬಸ್ ಪೇಟೆ ಬಳಿ ಸರಣಿ ಅಪಘಾತ: ಇಬ್ಬರ ಸ್ಥಿತಿ ಗಂಭೀರ
ಡಾಬಸ್ ಪೇಟೆ ಬಳಿ ಸರಣಿ ಅಪಘಾತ: ಇಬ್ಬರ ಸ್ಥಿತಿ ಗಂಭೀರ
ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿದ್ದ ವಿಜಯ್‌ಗೆ ಬಿಗ್‌ ಶಾಕ್‌
ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿದ್ದ ವಿಜಯ್‌ಗೆ ಬಿಗ್‌ ಶಾಕ್‌
ದಾವಣಗೆರೆ: ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಹೇಳಿದ್ದಿಷ್ಟು
ದಾವಣಗೆರೆ: ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಹೇಳಿದ್ದಿಷ್ಟು