ಸುನಿಲ್ ಗ್ರೋವರ್ ಮೊದಲ ಸಂಭಾವನೆ 500 ರೂಪಾಯಿ; ಈಗ ಶ್ರೀಮಂತ ಹಾಸ್ಯ ನಟ
ಸುನಿಲ್ ಗ್ರೋವರ್ ಅವರಿಗೆ ಇಂದು (ಆಗಸ್ಟ್ 8) ಜನ್ಮದಿನ. ಕೇವಲ 500 ರೂಪಾಯಿಗಳಿಂದ ಆರಂಭಿಸಿ, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ 21 ಕೋಟಿ ರೂಪಾಯಿಗಳಷ್ಟು ಆಸ್ತಿಯನ್ನು ಗಳಿಸಿದ್ದಾರೆ. ಡಾಕ್ಟರ್ ಮಶೂರ್ ಗುಲಾಟಿ ರೀತಿಯ ಪಾತ್ರಗಳ ಮೂಲಕ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಹಿಂದಿಯ ಹಾಸ್ಯ ಕಲಾವಿದರ ಹೆಸರನ್ನು ಹೇಳಬೇಕು ಎಂದಾಗ ಮೊದಲಿಗೆ ನೆನಪಿಗೆ ಬರೋದು ಸುನಿಲ್ ಗ್ರೋವರ್ ಹೆಸರು. ಅವರು ಖ್ಯಾತ ಕಾಮಿಡಿಯನ್. ಜೊತೆಗೆ ಶ್ರೀಮಂತ ಹಾಸ್ಯ ನಟ ಕೂಡ ಹೌದು. ಹರಿಯಾಣದ ಸಣ್ಣ ನಗರದಲ್ಲಿ ಜನಿಸಿದ ಸುನಿಲ್ ಇದು ವಿಶ್ವ ಪ್ರಸಿದ್ಧರಾಗಿದ್ದಾರೆ. ಅವರು ಸಾಕಷ್ಟು ಖ್ಯಾತಿ ಗಳಿಸಲು ಅವರು ಶ್ರಮ ಕೂಡ ಕಾರಣ. ಇಂದು (ಆಗಸ್ಟ್ 8) ಅವರ ಜನ್ಮದಿನ. ಈ ವೇಳೆ ಅವರ ವೃತ್ತಿ ಜೀವನದ ಬಗ್ಗೆ ತಿಳಿದುಕೊಳ್ಳೋಣ.
ಚಂಡೀಗಢದ ಪಂಜಾಬ್ ವಿಶ್ವ ವಿದ್ಯಾನಿಲಯದಲ್ಲಿ ಸುನಿಲ್ ಅವರು ಮಾಸ್ಟರ್ ಡಿಗ್ರಿ ಪಡೆದರು. ಆ ಬಳಿಕ ನಟನೆಗೆ ಬರಬೇಕು ಎಂದು ಮಾಡಿದರು. ಬಾಲಿವುಡ್ನಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು. ಸುನಿಲ್ ಅವರು ನಟನೆಗಾಗಿ ಮುಂಬೈಗೆ ಬಂದರು. ಕೆಲವು ತಿಂಗಳು ಅವರು ಕೇವಲ 500 ರೂಪಾಯಿ ಗಳಿಸಿದ ಉದಾಹರಣೆಯೂ ಇದೆ.
ಸುನಿಲ್ ಗ್ರೋವರ್ ಅವರಿಗೆ ಸಾಕಷ್ಟು ಕಷ್ಟದ ದಿನಗಳು ಎದುರಾದವು. ಅವುಗಳನ್ನು ಧೈರ್ಯದಿಂದ ಎದುರಿಸಿದರು ಸುನಿಲ್. ‘ಏನೇ ಆದರೂ ಪ್ಯಾಷನ್ ಬಿಡಬಾರದು’ ಎಂದು ತಂದೆ ಹೇಳಿದ ಮಾತು ಅವರಿಗೆ ನೆನಪಿಗೆ ಬರುತ್ತಿತ್ತು. ಅದನ್ನೇ ಮುಂದುವರಿಸಿದರು.
ಸುನಿಲ್ ಅವರು ಮಿಮಿಕ್ರಿ ಹಾಗೂ ಸ್ಟ್ತಾಂಡಅಪ್ ಕಾಮಿಡಿ ಮೂಲಕ ಗಮನ ಸೆಳೆದರು. ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಶೋನಲ್ಲಿ ‘ಗುತ್ತಿ’ ಪಾತ್ರದ ಮೂಲಕ ಫೇಮಸ್ ಆದರು. ನಂತರ ‘ಡಾಕ್ಟರ್ ಮಶೂರ್ ಗುಲಾಟಿ’ ಪಾತ್ರ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಅವರು ನಟ ಕೂಡ ಹೌದು. ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಬಗ್ಗೆ ಸುನಿಲ್ ಗ್ರೋವರ್ ಮಿಮಿಕ್ರಿ; ಸಿಟ್ಟಾದ್ರಾ ಸಲ್ಲು?
ಕೆಲವು ವರದಿಯ ಪ್ರಕಾರ, ಸುನಿಲ್ ಗ್ರೋವರ್ ಸುಮಾರು 21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕಳೆದ 5 ವರ್ಷಗಳಲ್ಲಿ ಅವರ ಸಂಪತ್ತು ಸಾಕಷ್ಟು ಹೆಚ್ಚಾಗಿದೆ. ಒಂದು ಕಾಲದಲ್ಲಿ, ಈ ನಟ ತಿಂಗಳಿಗೆ ಕೇವಲ 500 ರೂಪಾಯಿ ಸಂಬಳ ಪಡೆಯುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ನಟ ಸುನಿಲ್ ಗ್ರೋವರ್ ಒಂದು ಬ್ರ್ಯಾಂಡ್‌ಗಾಗಿ ಕೆಲಸ ಮಾಡಲು 50-60 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಗಳಿಕೆಯ ವಿಷಯದಲ್ಲಿ ಟಾಪ್ನಲ್ಲಿರುವ ಸುನಿಲ್ ಗ್ರೋವರ್ ಸಾಮಾಜಿಕ ಕಾರ್ಯಗಳನ್ನು ಮಾಡುವುದರಿಂದ ಹಿಂದೆ ಸರಿಯುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:01 am, Fri, 8 August 25







