ಪಾರ್ಕಿಂಗ್ ವಿಚಾರಕ್ಕೆ ಹುಮಾ ಖುರೇಷಿ ಸಹೋದರನ ಹತ್ಯೆ; ಯಾರು ಈ ನಟಿ?
ದೆಹಲಿಯ ನಿಜಾಮುದ್ದೀನ್‌ನಲ್ಲಿ ಪಾರ್ಕಿಂಗ್ ವಿವಾದದಿಂದ ಉಂಟಾದ ಜಗಳದಲ್ಲಿ ಹಿಂದಿ ನಟಿ ಹುಮಾ ಖುರೇಷಿ ಅವರ ಸಹೋದರ ಆಸಿಫ್ ಖುರೇಷಿ ಕೊಲೆಯಾಗಿದ್ದಾರೆ. ಸ್ಕೂಟರ್ ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವರೊಂದಿಗೆ ಜಗಳವಾಡಿ, ಹಲ್ಲೆಗೊಳಗಾಗಿ ಆಸಿಫ್ ಮೃತಪಟ್ಟಿದ್ದಾರೆ. ಪೊಲೀಸರು ಎರಡು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ತನಿಖೆ ಮುಂದುವರೆದಿದೆ.

ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ಹಿಂದಿ ನಟಿ ಹುಮಾ ಖುರೇಷಿ (Huma Qureshi) ಸಹೋದರ ಆಸಿಫ್ ಖುರೇಷಿ ಕೊಲೆಯಾಗಿದೆ. ಸ್ಕೂಟಿ ಪಾರ್ಕಿಂಗ್ ವಿಚಾರದಲ್ಲಿ ಜಗಳ ನಡೆದಿದ್ದು, ಅವರನ್ನು ಕೊಲೆ ಮಾಡಲಾಗಿದೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹುಮಾ ಅವರ ಸಹೋದರ ಆಸಿಫ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ನಂತರ, ಪೊಲೀಸರು ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಅಲ್ಪಾವಧಿಯಲ್ಲಿಯೇ ಬಂಧಿಸಿದ್ದಾರೆ.
ಗುರುವಾರ (ಆಗಸ್ಟ್ 7) ನಿಜಾಮುದ್ದೀನ್‌ನ ಜಂಗ್‌ಪುರ ಭೋಗಲ್ ಬಜಾರ್ ಲೇನ್ ರಾತ್ರಿ 11 ಗಂಟೆ ವೇಳೆಗೆ ಘಟನೆ ನಡೆದಿದೆ. ಮನೆಯ ಗೇಟ್‌ನಿಂದ ಸ್ಕೂಟಿಯನ್ನು ತೆಗೆದು ಪಕ್ಕದಲ್ಲಿ ಇಡುವಂತೆ ಆಸಿಫ್ ಕೇಳಿಕೊಂಡರು. ಈ ವಿಚಾರಕ್ಕೆ ಆರಂಭ ಜಗಳ ಆರಂಭ ಆಯಿತು. ಆರೋಪಿಗಳು ನಟಿಯ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಆಸಿಫ್ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಮತ್ತು ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಹುಮಾ ಖುರೇಷಿ ಕುಟುಂಬದವರು ಹೇಳುವ ಪ್ರಕಾರ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಈ ಮೊದಲು ಕೂಡ ಆಸಿಫ್ ಹಾಗೂ ನೆರೆಹೊರೆಯವರ ನಡುವೆ ಜಗಳವಾಗಿತ್ತಂತೆ. ಈಗ ಅದು ಬೇರೆ ಹಂತಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ಬೇಸರದ ವಿಚಾರ.
‘ನನ್ನ ಪತಿ ಕಚೇರಿಯಿಂದ ಮನೆಗೆ ಬಂದಿದ್ದರು. ನೆರೆ ಮನೆಯವರ ಸ್ಕೂಟರ್ ನಮ್ಮ ಮನೆಯ ಮುಂದೆ ನಿಂತಿತ್ತು. ಈ ಸಮಯದಲ್ಲಿ, ಅವರು ಸ್ಕೂಟರ್‌ಗಳನ್ನು ಸ್ಥಳದಿಂದ ತೆಗೆದು ಬೇರೆಡೆ ನಿಲ್ಲಿಸಲು ಕೇಳಿಕೊಂಡರು. ಪಕ್ಕದ ಮನೆಯವರು ಸುಮ್ಮನಾಗಲಿಲ್ಲ ಮತ್ತು ನನ್ನ ಗಂಡನ ಮೇಲೆ ನಿಂದಿಸಲು ಪ್ರಾರಂಭಿಸಿದರು. ಆ ನಂತರ, ಜಗಳವು ಅವರ ಮೇಲೆ ನೇರವಾಗಿ ಹಲ್ಲೆ ನಡೆಸುವ ಹಂತಕ್ಕೆ ಹೋಯಿತು. ದಾಳಿಯಲ್ಲಿ ನನ್ನ ಪತಿ ಗಂಭೀರವಾಗಿ ಗಾಯಗೊಂಡಿದ್ದರು. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಆದರೆ ಅವರು ಮೃತಪಟ್ಟರು’ ಎಂದು ಆಸಿಫ್ ಪತ್ನಿ ಹೇಳಿದ್ದಾರೆ.
ಇದನ್ನೂ ಓದಿ: ‘ನಾನೂ ಅನಿಮಲ್ ರೀತಿಯ ಸಿನಿಮಾ ಮಾಡ್ಬೇಕು’: ಹುಮಾ ಖುರೇಷಿ
ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದರು. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸಿಫ್ ಖುರೇಷಿ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ. ಹುಮಾ ಅವರು ಹಿಂದಿ ಸಿನಿಮಾ ಮತ್ತು ವೆಬ್ ಸೀರಿಸ್ನ ಭಾಗ ಆಗಿದ್ದಾರೆ. 2012ರ ಫೇಮಸ್ ಸಿನಿಮಾ ‘ಗ್ಯಾಂಗ್ ಆಫ್ ವಸೇಪುರ್’ನಲ್ಲಿ ಅವರು ಮೊದಲು ನಟಿಸಿದರು. ‘ಬದ್ಲಾಪುರ್’, ‘ಹೈವೇ’ ರೀತಿಯ ಸಿನಿಮಾಗಳನ್ನು ಅವರು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







