ತಮ್ಮ ದೇಹದ ಬಗ್ಗೆ ಕೀಳಾಗಿ ಮಾತನಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟಿಯರಿವರು..

ಹಲವು ಸಂದರ್ಭದಲ್ಲಿ ಸೆಲೆಬ್ರಿಟಿಗಳು ಬಾಡಿ ಶೇಮಿಂಗ್ ಎದುರಿಸಿದ ಉದಾಹರಣೆ ಇದೆ. ಎಲ್ಲಾ ನಟಿಯರು ಈ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲವು ಸೆಲೆಬ್ರಿಟಿಗಳು ಖಡಕ್ ಉತ್ತರ ನೀಡುತ್ತಾರೆ. ಟೀಕಾಕಾರರಿಗೆ ಖಡಕ್ ಎಚ್ಚರಿಕೆ ನೀಡುತ್ತಾರೆ. ಈ ರೀತಿಯ ಸಾಲಿನಲ್ಲಿ ಮೃಣಾಲ್ ಠಾಕೂರ್, ಐಶ್ವರ್ಯಾ ರೈ ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ತಮ್ಮ ದೇಹದ ಬಗ್ಗೆ ಕೀಳಾಗಿ ಮಾತನಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟಿಯರಿವರು..
ತಮ್ಮ ದೇಹದ ಬಗ್ಗೆ ಕೀಳಾಗಿ ಮಾತನಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟಿಯರಿವರು..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 21, 2024 | 8:15 AM

ನಟಿಯರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅವರು ಏನೇ ಮಾಡಿದರೂ ಸುದ್ದಿ ಆಗುತ್ತದೆ. ಹಲವು ಸಂದರ್ಭದಲ್ಲಿ ಸೆಲೆಬ್ರಿಟಿಗಳು ಬಾಡಿ ಶೇಮಿಂಗ್ ಎದುರಿಸಿದ ಉದಾಹರಣೆ ಇದೆ. ಎಲ್ಲಾ ನಟಿಯರು ಈ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲವು ಸೆಲೆಬ್ರಿಟಿಗಳು ಖಡಕ್ ಉತ್ತರ ನೀಡುತ್ತಾರೆ. ಟೀಕಾಕಾರರಿಗೆ ಖಡಕ್ ಎಚ್ಚರಿಕೆ ನೀಡುತ್ತಾರೆ. ಈ ರೀತಿಯ ಸಾಲಿನಲ್ಲಿ ಮೃಣಾಲ್ ಠಾಕೂರ್, ಐಶ್ವರ್ಯಾ ರೈ (Aishwarya Rai) ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಆಯೇಷಾ ಟಾಕಿಯಾ

ಆಯೇಷಾ ಟಾಕಿಯಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಓಪನ್ ಲೆಟರ್ ಬರೆದಿದ್ದರು. ತಮ್ಮನ್ನು ಟೀಕೆ ಮಾಡಿದ ಅನೇಕರಿಗೆ ಅವರು ಖಡಕ್ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ದೇಹ ಹೇಗೆ ಇದೆಯೋ ಅದನ್ನು ಹಾಗೆಯೇ ಸ್ವೀಕರಿಸಿದ್ದಾರೆ. ತಮ್ಮ ಬಾಡಿಯನ್ನು ಇಟ್ಟುಕೊಂಡು ಟ್ರೋಲ್ ಮಾಡಿದವರಿಗೆ ನೇರವಾಗಿ ಉತ್ತರಿಸಿದ್ದರು. ಅವರು ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರು ಮೊದಲಿನಷ್ಟು ಗ್ಲಾಮರ್ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ಅವರು ‘ಸೀರಾ ರಾಮಂ’ ಸಿನಿಮಾ ಮೂಲಕ ಫೇಮಸ್ ಆಗಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಹಾಯ್ ನಾನ್ನ’ ಯಶಸ್ಸು ಕಂಡಿದೆ. ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಟ್ಟೆ ಬಗ್ಗೆ, ಅವರ ದೇಹದ ಬಗ್ಗೆ ಅನೇಕರು ಟೀಕೆ ಮಾಡಿದ್ದಿದೆ. ಇದಕ್ಕೆಲ್ಲ ಅವರು ಶಾರ್ಪ್ ಆಗಿ ಉತ್ತರ ನೀಡಿದ್ದರು.

ಇಲಿಯಾನಾ ಡಿಕ್ರೂಜ್

ನಟಿ ಇಲಿಯಾನಾ ಡಿಕ್ರೂಜ್ ಅವರು ಸದ್ಯ ಕುಟುಂಬದ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ದೊಡ್ಡ ಬ್ಯಾಕ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಟೀಕೆ ಮಾಡಲಾಗಿತ್ತು. ಈ ರೀತಿಯ ಟೀಕೆ ಮಾಡಿದವರಿಗೆ ಅವರು ಖಡಕ್ ಆಗಿ ಉತ್ತರ ನೀಡಿದ್ದರು. ‘ಜನರ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ’ ಎಂದಿದ್ದರು ಅವರು.

ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್ ಒಂದು ಕಾಲದಲ್ಲಿ ಬೇಡಿಕೆಯ ನಟಿ ಆಗಿದ್ದರು. ಈಗಲೂ ಅವರಿಗೆ ಬೇಡಿಕೆ ಇದೆ. ಆದರೆ, ಅವರು ಸಿನಿಮಾ ಮಾಡಲು ಹೆಚ್ಚು ಉತ್ಸಾಹ ತೋರಿಸುತ್ತಿಲ್ಲ. ಅವರು ಪ್ರೆಗ್ನೆಂಟ್ ಆದ ಸಂದರ್ಭದಲ್ಲಿ ಅವರ ದೇಹದ ತೂಕ ಹೆಚ್ಚಿತ್ತು. ಈ ವೇಳೆ ಅವರು ಟ್ರೋಲ್ ಆಗಿದ್ದರು. ‘ನಾನು ಈ ಟ್ರೋಲ್​ಗೆಲ್ಲ ಕೇರ್ ಮಾಡಲ್ಲ’ ಎಂದು ಹೇಳಿದ್ದರು. ಐಶ್ವರ್ಯಾ ರೈ ಬ್ಯೂಟಿಗೆ ಈಗಲೂ ಫ್ಯಾನ್ಸ್ ಇದ್ದಾರೆ.

ನೇಹಾ ಧೂಪಿಯಾ

ನೇಹಾ ದೂಫಿಯಾ ಅವರಿಗೆ ಈ ಮೊದಲು ತಮ್ಮ ದೇಹದ ಬಗ್ಗೆ ಇನ್​ಸೆಕ್ಯೂರಿಟಿ ಇತ್ತಂತೆ. ಆದರೆ, ಅದು ಈಗ ಬದಲಾಗಿದೆ. ಅವರು ತಮ್ಮನ್ನು ತಾವು ಒಪ್ಪಿಕೊಂಡಿದ್ದಾರೆ. ತಮ್ಮ ದೇಹ ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನೇಹಾ ನಟಿಸಿದ್ದಾರೆ.

ಇದನ್ನೂ ಓದಿ: ‘ಭೂಲ್ ಭುಲಯ್ಯ 3’ಗೆ ವಿದ್ಯಾ ಬಾಲನ್ ಎಂಟ್ರಿ; ಮಂಜುಲಿಕಾನ ಸ್ವಾಗತಿಸಿದ ಕಾರ್ತಿಕ್ ಆರ್ಯನ್

ವಿದ್ಯಾ ಬಾಲನ್

ವಿದ್ಯಾ ಬಾಲನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇತ್ತೀಚೆಗೆ ಅವರು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಬೇರೆಯದೇ ರೀತಿಯ ಪಾತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ವಿದ್ಯಾ ಬಾಲನ್ ಅವರನ್ನು ಅನೇಕರು ಟಾರ್ಗೆಟ್ ಮಾಡಿ ಟ್ರೋಲ್ ಮಾಡಿದ್ದರು. ಅವರು ಶೇಪ್ ಕಳೆದುಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದರು. ಆದರೆ, ಅವರು ತಮ್ಮ ದೇಹದ ತೂಕದ ಬಗ್ಗೆ ಹಾಗೂ ಟ್ರೋಲ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.

ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಅವರು ಮೊದಲು ಸಾಕಷ್ಟು ದಪ್ಪ ಇದ್ದರು. ನಂತರ ಜಿಮ್ ಮಾಡಿ ಅವರು ತೆಳ್ಳಗಾದರು. ಅವರು ಜಿಮ್ ಮಾಡೋದು ಬಿಟ್ಟರೆ ಮತ್ತೆ ದಪ್ಪ ಆಗುತ್ತಾರೆ. ‘ಸೋನಾಕ್ಷಿ ಶೇಪ್​ನಲ್ಲಿ ಇಲ್ಲ’ ಎಂದು ಅನೇಕರು ಟೀಕೆ ಮಾಡಿದ್ದರು. ಇದಕ್ಕೆ ಅವರು ಖಡಕ್ ಉತ್ತರ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ