ವಿದ್ಯಾ ಬಾಲನ್ ಬೋಲ್ಡ್ ಅವತಾರ; 46ನೇ ವಯಸ್ಸಿನಲ್ಲಿ ಕಣ್ಣು ಕುಕ್ಕಿದ ನಟಿ

ಖ್ಯಾತ ನಟಿ ವಿದ್ಯಾ ಬಾಲನ್ ಅವರು ಹೊಸ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಬೋಲ್ಡ್ ಗೆಟಪ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಆದರೆ ಕೆಲವರು ಟೀಕೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾ ಬಾಲನ್ ಅವರ ಈ ಹೊಸ ಫೋಟೋಗಳು ವೈರಲ್ ಆಗಿವೆ.

ವಿದ್ಯಾ ಬಾಲನ್ ಬೋಲ್ಡ್ ಅವತಾರ; 46ನೇ ವಯಸ್ಸಿನಲ್ಲಿ ಕಣ್ಣು ಕುಕ್ಕಿದ ನಟಿ
Vidya Balan (Photo Credit: The Peacock Magazine)

Updated on: Jul 15, 2025 | 6:25 PM

ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ಅವರಿಗೆ ಈಗ 46 ವರ್ಷ ವಯಸ್ಸು. ಸಿನಿಮಾಗಳ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ತಮಗೆ ಒಪ್ಪುವಂತಹ ಪಾತ್ರಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುವಾಗ ಹೆಚ್ಚಾಗಿ ಅವರು ಸೀರೆ ಧರಿಸಿ ಕಾಣಿಸಿಕೊಳ್ಳುತ್ತಾರೆ. ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದರೆ ಈಗ ಅವರು ಹೊಸ ಫೋಟೋಶೂಟ್​ನಲ್ಲಿ ಬೋಲ್ಡ್ ಅವತಾರ ತಾಳಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಪ್ರತಿಷ್ಠಿತ ‘ದಿ ಪಿಕಾಕ್ ಮ್ಯಾಗಜಿನ್’ ಮುಖಪುಟಕ್ಕಾಗಿ ವಿದ್ಯಾ ಬಾಲನ್ ಅವರು ಈ ರೀತಿ ಪೋಸ್ ನೀಡಿದ್ದಾರೆ. ಎರಡು ಕಾಸ್ಟ್ಯೂಮ್​ಗಳನ್ನು ಧರಿಸಿ ಅವರು ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಗೌನ್​ನಲ್ಲಿ ವಿದ್ಯಾ ಬಾಲನ್ ತುಂಬ ಗ್ಲಾಮರಸ್ ಆಗಿ ಕಣ್ಣು ಕುಕ್ಕಿದ್ದಾರೆ. ಅವರ ಅಭಿಮಾನಿಗಳು ಈ ಫೋಟೋಗಳನ್ನು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಟೀಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

‘ಇದು ವಿದ್ಯಾ ಬಾಲನ್ ಅಂತ ನಂಬಲು ಸಾಧ್ಯವೇ ಆಗಲಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ನೆಪೋ ಕಿಡ್​ಗಳು ವಿದ್ಯಾ ಬಾಲನ್ ಅವರನ್ನು ನೋಡಿ ಫ್ಯಾಷನ್ ಬಗ್ಗೆ ಕಲಿಯಬೇಕು’ ಎಂದು ಕೂಡ ವಿದ್ಯಾ ಬಾಲನ್ ಫ್ಯಾನ್ಸ್ ಹೊಗಳಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಮೂಲಕ ವಿದ್ಯಾ ಬಾಲನ್ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.

ಹಲವು ವರ್ಷಗಳ ಹಿಂದೆ ವಿದ್ಯಾ ಬಾಲನ್ ಅವರು ಒಂದು ಹೇಳಿಕೆ ನೀಡಿದ್ದರು. ‘ಮಹಿಳೆಯರು ಹೆಚ್ಚು ತೂಕ ಕಡಿಮೆ ಮಾಡಿಕೊಂಡರೆ ಪುರುಷರ ರೀತಿ ಕಾಣುತ್ತಾರೆ. ಅದು ನನಗೆ ಆಕರ್ಷಕ ಎನಿಸುವುದಿಲ್ಲ’ ಎಂದು ಹೇಳಿದ್ದರು. ಆದರೆ ಈಗ ಸ್ವತಃ ವಿದ್ಯಾ ಬಾಲನ್ ಅವರೇ ಸ್ಲಿಮ್ ಆಗಿರುವುದನ್ನು ಕಂಡು ಅನೇಕರು ಟೀಕೆ ಮಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಆ ವ್ಯಕ್ತಿ ನೋಡಿ ವಿದ್ಯಾ ಬಾಲನ್​ಗೆ ಆಗಿತ್ತು ‘ಲಸ್ಟ್ ಎಟ್ ಫಸ್ಟ್​ ಸೈಟ್’; ಅವರನ್ನೇ ಮದುವೆ ಆದರು

2003ರಿಂದಲೂ ವಿದ್ಯಾ ಬಾಲನ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಮೊದಲು ನಟಿಸಿದ್ದು ಬೆಂಗಾಲಿ ಸಿನಿಮಾದಲ್ಲಿ. ಬಳಿಕ ಅವರ ಹಿಂದಿ ಸಿನಿಮಾ ‘ಪರಿಣೀತ’ 2005ರಲ್ಲಿ ಬಿಡುಗಡೆ ಆಯಿತು. ‘ನೋ ಒನ್ ಕಿಲ್ಡ್ ಜಸಿಕಾ’, ‘ಕಹಾನಿ’ ಮುಂತಾದ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಿ ಕೂಡ ಅವರು ಸೈ ಎನಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.