AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bombay Jayashree: ಗಾಯಕಿ ಬಾಂಬೆ ಜಯಶ್ರೀ ಆರೋಗ್ಯ ಏರು-ಪೇರು

ಬ್ರಿಟನ್​ನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ತೆರಳಿದ್ದ ಗಾಯಕಿ ಬಾಂಬೆ ಜಯಶ್ರೀ ಆರೋಗ್ಯದಲ್ಲಿ ಏರು-ಪೇರಾಗಿದ್ದು, ಅವರಿಗೆ ಅಲ್ಲಿಯೇ ಅಗತ್ಯ ಶಸ್ತಚಿಕಿತ್ಸೆ ಮಾಡಲಾಗಿದೆ.

Bombay Jayashree: ಗಾಯಕಿ ಬಾಂಬೆ ಜಯಶ್ರೀ ಆರೋಗ್ಯ ಏರು-ಪೇರು
ಬಾಂಬೆ ಜಯಶ್ರೀ
ಮಂಜುನಾಥ ಸಿ.
|

Updated on: Mar 24, 2023 | 8:42 PM

Share

ಬ್ರಿಟನ್ ಪ್ರವಾಸದಲ್ಲಿರುವ ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Bombay Jayashri) ಆರೋಗ್ಯದಲ್ಲಿ ಏರು-ಪೇರಾಗಿದ್ದು, ಅವರಿಗೆ ಅಲ್ಲಿಯೇ ಶಸ್ತಚಿಕಿತ್ಸೆ ಮಾಡಲಾಗಿದೆ. ವೈದ್ಯರ ಮಾಹಿತಿಯಂತೆ ಈಗ ಆರೋಗ್ಯ ಸ್ಥಿರವಾಗಿದೆ. ಬಾಂಬೆ ಜಯಶ್ರೀ ಅವರು ಬ್ರಿಟನ್​ನಲ್ಲಿ ಕಾರ್ಯಕ್ರಮ ನೀಡಲು ತೆರಳಿದ್ದರು ಅಲ್ಲಿ ಅವರಿಗೆ ಆನ್ಯುರಿಸಮ್ (Aneurysm) ಸಮಸ್ಯೆ ಉಲ್ಬಣವಾಗಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯಶ್ರೀ ಅವರಿಗೆ ಅಗತ್ಯವಿದ್ದ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.

ರಕ್ತನಾಳಕ್ಕೆ ಹಾನಿ ಉಂಟಾಗಿ ರಕ್ತನಾಳಗಳ ಗೋಡೆಯು ದುರ್ಬಲಗೊಳ್ಳುವುದರಿಂದ ಹೃದಯದ ಕವಾಟದಲ್ಲಿ ಊತ ಕಾಣಿಸಿಕೊಳ್ಳುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಆನ್ಯುರಿಸಮ್ ಎನ್ನಲಾಗುತ್ತಿದೆ. ಇದೇ ಸಮಸ್ಯೆಯನ್ನು ಗಾಯಕಿ ಬಾಂಬೆ ಜಯಶ್ರೀ ಅವರು ಎದುರಿಸಿದ್ದರು.

ಗಾಯಕಿಯ ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಕುಟುಂಬ ಸದಸ್ಯರು ಮಾಹಿತಿ ಹಂಚಿಕೊಂಡಿದ್ದು, ಜಯಶ್ರೀ ಅವರ ಜೊತೆಗಿದ್ದ ಕಲಾವಿದರಿಂದ ಹಾಗೂ ಎನ್​ಎಚ್​ಎಸ್ ಆಸ್ಪತ್ರೆಯ ಸಮರ್ಥ ಸಿಬ್ಬಂದಿಗಳಿಂದಾಗಿ ಸಮಯೋಚಿತ ವೈದ್ಯಕೀಯ ಚಿಕಿತ್ಸೆಯನ್ನು ಜಯಶ್ರೀ ಪಡೆದುಕೊಂಡಿದ್ದಾರೆ. ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ಒಂದೆರಡು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ತಾವುಗಳೇ ಅವರ ಆರೋಗ್ಯ ಮಾಹಿತಿಯನ್ನು ಕಾಲದಿಂದ ಕಾಲಕ್ಕೆ ಹಂಚಿಕೊಳ್ಳಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳನ್ನು ನಂಬಬೇಡಿರೆಂದು ಮನವಿ ಮಾಡಿದ್ದಾರೆ.

ಬ್ರಿಟನ್​ನಲ್ಲಿ ಮ್ಯೂಸಿಕ್​ ಟೂರ್ ನಲ್ಲಿ ಗಾಯಕಿ ಬಾಂಬೆ ಜಯಶ್ರೀ ಪಾಲ್ಗೊಂಡಿದ್ದಾರೆ. ಬ್ರಿಟನ್​ನ ಹಲವು ನಗರಗಳಲ್ಲಿ ಜಯಶ್ರೀ ಕರ್ನಾಟಿಕ್ ಸಂಗೀತ ಹಾಗೂ ಇತರೆ ಹಾಡುಗಳನ್ನು ಹಾಡುತ್ತಿದ್ದಾರೆ. ಶುಕ್ರವಾರ ಅವರು ಲಿವರ್​ಪುಲ್​ನ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಆರೋಗ್ಯ ಏರುಪೇರಾದ ಕಾರಣ ಶೋ ಅನ್ನು ರದ್ದು ಮಾಡಲಾಯಿತು.

ಬಾಂಬೆ ಜಯಶ್ರೀ ಅವರು ಖ್ಯಾತ ಕರ್ನಾಟಿಕ್ ಸಂಗೀತ ಗಾಯಕಿ ಆಗಿರುವ ಜೊತೆಗೆ ಹಲವು ದಶಕಗಳಿಂದಲೂ ಸಿನಿಮಾ ಹಾಡುಗಳನ್ನು ಸಹ ಹಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರೀತ್ಸೆ ಅಂತ ಪ್ರಾಣಾ ತಿನ್ನೊ, ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ ಹಾಗೂ ಇನ್ನೂ ಕೆಲವು ಹಾಡುಗಳನ್ನು ಹಾಡಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಜಯಶ್ರೀ ಹಾಡಿದ್ದಾರೆ. ಹಿಂದಿಯಲ್ಲಿ ಅವರು ಹಾಡಿರುವ ಜರಾ ಜರಾ ಬೆಹಕತಾ ಹೈ ಹಾಡು ಬಹಳ ಜನಪ್ರಿಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ