AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೋದಲ್ಲಿರೋ ವ್ಯಕ್ತಿ ಈಗ ಸ್ಟಾರ್ ನಟ, 1650 ಕೋಟಿ ರೂಪಾಯಿ ಒಡೆಯ

ಈ ಚಿತ್ರದಲ್ಲಿರುವ ನಟ ಯಾರೆಂದು ಗುರುತಿಸಬಲ್ಲಿರಾ? ಈ ಚಿತ್ರದಲ್ಲಿರುವ ನಟ ಈಗ ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ಅಮಿತಾಬ್ ಬಚ್ಚನ್​ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು.

ಈ ಫೋಟೋದಲ್ಲಿರೋ ವ್ಯಕ್ತಿ ಈಗ ಸ್ಟಾರ್ ನಟ, 1650 ಕೋಟಿ ರೂಪಾಯಿ ಒಡೆಯ
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Oct 27, 2024 | 3:19 PM

Share

ಬಾಲ್ಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇರುತ್ತವೆ. ‘ಇವರನ್ನು ಗುರುತಿಸಿ’ ಎನ್ನುವ ಕ್ಯಾಪ್ಶನ್ ಮೂಲಕ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಫೋಟೋಗಳನ್ನು ಫ್ಯಾನ್ಸ್ ಸಾಕಷ್ಟು ಇಷ್ಟಪಡುತ್ತಾರೆ. ಈಗ ಟಾಲಿವುಡ್ನ ಸ್ಟಾರ್ ಹೀರೋನ ಫೋಟೋಗಳು ವೈರಲ್ ಆಗಿದೆ. ಈ ಫೋಟೋದಲ್ಲಿರೋದು ತೆಲುಗಿನ ಖ್ಯಾತ ಹೀರೋ. ಅವರು ಯಾರು ಎಂದು ಗುರುತಿಸುತ್ತಿರಾ? ಅವರು ಬೇರೆ ಯಾರೂ ಅಲ್ಲ ನಟ ಚಿರಂಜೀವಿ ಅವರು.

ಚಿರಂಜೀವಿ ಅವರು ಚಿತ್ರರಂಗಕ್ಕೆ ಬಂದು ನಾಲ್ಕೂವರೆ ದಶಕಗಳು ಕಳೆದಿವೆ. ಹೌದು, ಚಿರಂಜೀವಿ ಅವರು ಮೊದಲು ನಟಿಸಿದ ಸಿನಿಮಾ ‘ಪ್ರಾಣಂ ಖರೀದು’. ಇದು ರಿಲೀಸ್ ಆಗಿದ್ದು 46 ವರ್ಷಗಳ ಹಿಂದೆ. ಅಂದರೆ, 1978ರಲ್ಲಿ. ಈ ಸಿನಿಮಾ ಬಳಿಕ ಚಿರಂಜೀವಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟರು. ಟಾಲಿವುಡ್ನ ಬೇಡಿಕೆಯ ಹೀರೋ ಎನಿಸಿಕೊಂಡರು.

ಚಿರಂಜೀವಿ ಅವರ ಮೊದಲ ಹೆಸರು ಕೊನಿಡೆಲಾ ಶಿವಶಂಕರ ವರಪ್ರಸಾದ್ ಎಂಬುದಾಗಿ. ಆಗಸ್ಟ್ 22ರ 1955ರಲ್ಲಿ ಜನಿಸಿದರು. ಕಾಲೇಜಿನಲ್ಲಿ ಅವರಿಗೆ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿತ್ತು. ಬಿ.ಕಾಮ್ ಎರಡನೇ ವರ್ಷದಲ್ಲಿ ಓದುವಾಗ ಚಿರಂಜೀವಿ ಅವರಿಗೆ ಈ ಅವಾರ್ಡ್ ಸಿಕ್ಕಿತ್ತು ಅನ್ನೋದು ವಿಶೇಷ.

ಇದನ್ನೂ ಓದಿ:‘ಚಿರಂಜೀವಿ ಸಿನಿಮಾದ ಆ ಸೀನ್​ನಿಂದ ವೈದ್ಯರ ನೆಮ್ಮದಿ ಹಾಳಾಗಿದೆ’

ವೈಎಎನ್ಎಂ ಕಾಲೇಜಿನ ನರಸಾಪುರದಲ್ಲಿ. ರಂಗಸ್ಥಳದ ಮೊದಲ ನಾಟಕ. ಕೋನ ಗೋವಿಂದ ರಾವ್ ಬರೆದಿದ್ದರು. ನಟನಾಗಿ ಮೊದಲ ಮನ್ನಣೆ ಸಿಕ್ಕಿತ್ತು. ಅತ್ಯುತ್ತಮ ನಟನಾಗಿರುವುದು ಅಪಾರ ಪ್ರೋತ್ಸಾಹ ಸಿಕ್ಕಿದೆ. 1974ರಿಂದ 2024. 50 ವರ್ಷಗಳ ನಟನೆ. ಅನಂತ ಆನಂದ’ ಎಂದು ಚಿರಂಜೀವಿ ಅವರು ಬರೆದುಕೊಂಡಿದ್ದಾರೆ. ಇದಾಗಿ ಸರಿಯಾದ ನಾಲ್ಕು ವರ್ಷಕ್ಕೆ ಅವರು ಹೀರೋ ಆದರು.

ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಚಿರಂಜೀವಿ ಅವರಿಗೆ ನಟನೆ ಬಗ್ಗೆ ಆಸಕ್ತಿ ಇತ್ತು. ಆರಂಭದ ದಿನಗಳಲ್ಲೇ ಅವರಿಗೆ ಮನ್ನಣೆ ಸಿಕ್ಕಿದ್ದರಿಂದ ಅವರು ಚಿತ್ರರಂಗದಲ್ಲಿ ಬೆಳೆಯಲು ಸಹಕಾರಿ ಆಯಿತು.

2023ರಲ್ಲಿ ‘ಭೋಲಾ ಶಂಕರ್’ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಶಸ್ಸು ಕಾಣಲೇ ಇಲ್ಲ. ‘ವಿಶ್ವಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು 200 ಕೋಟಿ ರೂಪಾಯಿ ಚಿತ್ರವಾಗಿದೆ. ಈ ಚಿತ್ರದಲ್ಲಿ ತ್ರಿಷಾ ಮೊದಲಾದವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಹುಲಿ ದಾಳಿ ಮಾಡದಂತೆ ಮಾನವ ಮುಖವಾಡದ ಮಾಸ್ಕ್: ಹೇಗೆ ವರ್ಕ್ ಆಗುತ್ತೆ?
ಹುಲಿ ದಾಳಿ ಮಾಡದಂತೆ ಮಾನವ ಮುಖವಾಡದ ಮಾಸ್ಕ್: ಹೇಗೆ ವರ್ಕ್ ಆಗುತ್ತೆ?
ಪ್ಲ್ಯಾಸ್ಟಿಕ್ ಬಳಕೆ ಮಾಡುವ ಅಂಗಡಿಗಳನ್ನು ಮುಚ್ಚುತ್ತೇವೆ: ರಾಮಲಿಂಗಾ ರೆಡ್ಡಿ
ಪ್ಲ್ಯಾಸ್ಟಿಕ್ ಬಳಕೆ ಮಾಡುವ ಅಂಗಡಿಗಳನ್ನು ಮುಚ್ಚುತ್ತೇವೆ: ರಾಮಲಿಂಗಾ ರೆಡ್ಡಿ