ಕರ್ನಾಟಕದಲ್ಲಿ ‘ಕೆಜಿಎಫ್ 2’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಮಾಡುತ್ತಾ ‘ಪುಷ್ಪ 2’?

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಸೃಷ್ಟಿ ಆಗುತ್ತಿದೆ. ‘ಪುಷ್ಪ’ ಸೂಪರ್​ ಹಿಟ್ ಆಗಿದ್ದರಿಂದ ‘ಪುಷ್ಪ 2’ ಸಿನಿಮಾ ಹೈಪ್​ ಕ್ರಿಯೇಟ್ ಮಾಡಿದೆ. ಡಿಸೆಂಬರ್​ 5ರಂದು ಈ ಸಿನಿಮಾ ತೆರೆಕಾಣಲಿದೆ. ಕರ್ನಾಟಕದಲ್ಲಿ ಈ ಚಿತ್ರ ದಾಖಲೆ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲಿದೆ ಎಂದು ವಿತರಕರು ನಿರೀಕ್ಷಿಸಿದ್ದಾರೆ.

ಕರ್ನಾಟಕದಲ್ಲಿ ‘ಕೆಜಿಎಫ್ 2’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಮಾಡುತ್ತಾ ‘ಪುಷ್ಪ 2’?
ಅಲ್ಲು ಅರ್ಜುನ್, ಯಶ್
Follow us
ಮದನ್​ ಕುಮಾರ್​
|

Updated on: Oct 27, 2024 | 5:06 PM

‘ಪುಷ್ಪ’ ಮತ್ತು ‘ಕೆಜಿಎಫ್​’ ಸಿನಿಮಾಗಳ ನಡುವೆ ಮೊದಲಿನಿಂದಲೂ ಪರೋಕ್ಷವಾದ ಪೈಪೋಟಿ ಇದೆ. ಈಗ ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹಾಗಾದರೆ ಈ ಸಿನಿಮಾ ‘ಕೆಜಿಎಫ್​ 2’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡುತ್ತಾ ಎಂಬ ಕೌತುಕ ಎಲ್ಲರಲ್ಲೂ ಇದೆ. ಈ ಬಗ್ಗೆ ವಿತರಕರು ಮಾತನಾಡಿದ್ದಾರೆ. ಇತ್ತೀಚೆಗೆ ಹೈದರಾಬಾದ್​ನಲ್ಲಿ ‘ಪುಷ್ಪ 2’ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಈ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಲಿರುವ ಲಕ್ಷ್ಮಿಕಾಂತ ರೆಡ್ಡಿ ಅವರ ಕೆಲವು ವಿಷಯಗಳನ್ನು ಹಂಚಿಕೊಂಡರು.

‘ಎನ್​ ಸಿನಿಮಾಸ್​’ ಮೂಲಕ ಲಕ್ಷ್ಮಿಕಾಂತ ರೆಡ್ಡಿ ಅವರು ಕರ್ನಾಟಕದಾದ್ಯಂತ ‘ಪುಷ್ಪ 2’ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ. ಈ ಮೊದಲು ತೆಲುಗಿನ ಹಲವು ಸೂಪರ್​ ಹಿಟ್ ಸಿನಿಮಾಗಳನ್ನು ಅವರು ಕರ್ನಾಟಕದಲ್ಲಿ ರಿಲೀಸ್ ಮಾಡಿದ್ದರು. ಆ ಎಲ್ಲ ಚಿತ್ರಗಳಿಗಿಂತಲೂ ‘ಪುಷ್ಪ 2’ ಸಿನಿಮಾ ಅತಿ ಹೆಚ್ಚು ಬಿಸ್ನೆಸ್​ ಮಾಡಲಿದೆ ಎಂದು ಲಕ್ಷ್ಮಿಕಾಂತ ರೆಡ್ಡಿ ಅವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ 420 ಕೋಟಿ ರೂಪಾಯಿ ಗಳಿಸಿದ ‘ಪುಷ್ಪ 2’ ಸಿನಿಮಾ

‘ಕರ್ನಾಟಕದಲ್ಲಿ ಈ ಸಿನಿಮಾ ಅತಿ ಹೆಚ್ಚು ಕಲೆಕ್ಷನ್ ಮಾಡಲಿದೆ. ಈವರೆಗೂ ಕರ್ನಾಟಕದಲ್ಲಿ 90ರಿಂದ 95 ಕೋಟಿ ರೂಪಾಯಿ ಕಲೆಕ್ಷನ್ ಆದ ಉದಾಹರಣೆ ಇದೆ. ಈಗ ‘ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್​ ಅವರ ವೃತ್ತಿ ಜೀವನದ ಮೈಲಿಗಲ್ಲಿನ ಸಿನಿಮಾ ಆಗಲಿದೆ. ಈ ಮೊದಲು ಕೆಜಿಎಫ್ ಸಿನಿಮಾವನ್ನು 350 ಸಿಂಗಲ್ ಸ್ಕ್ರೀನ್ ಹಾಗೂ 80 ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ನಾವು ಈಗ ಅದಕ್ಕಿಂತಲೂ ಹೆಚ್ಚು, ಅಂದರೆ 500 ಪರದೆಗಳಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದ ಲಕ್ಷ್ಮಿಕಾಂತ ರೆಡ್ಡಿ ಹೇಳಿದ್ದಾರೆ.

View this post on Instagram

A post shared by Pushpa (@pushpamovie)

‘ಕೆಜಿಎಫ್​ ಸಿನಿಮಾ ಮೊದಲ ದಿನ 28ರಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ ‘ಪುಷ್ಪ 2’ ಸಿನಿಮಾ ಅದನ್ನು ಮೀರಿಸಲಿದೆ. ಅಲ್ಲು ಅರ್ಜುನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ’ ಎಂದಿದ್ದಾರೆ ಲಕ್ಷ್ಮಿಕಾಂತ ರೆಡ್ಡಿ. ಆದರೆ ಅವರ ಈ ಮಾತುಗಳನ್ನು ಕರ್ನಾಟಕದಲ್ಲಿ ಕೆಲವರು ಟೀಕಿಸಿದ್ದಾರೆ. ‘ಕೆಜಿಎಫ್​ 2’ ದಾಖಲೆಯನ್ನು ‘ಪುಷ್ಪ 2’ ಮುರಿಯಲು ಸಾಧ್ಯವಿಲ್ಲ ಎಂದು ಕೆಲವು ನೆಟ್ಟಗರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.