ಇತಿಹಾಸದಲ್ಲಿ ಇದೇ ಮೊದಲು; ಬ್ರಿಟಿಷ್ ಸರ್ಕಾರದಿಂದ ಜೀವಮಾನ ಸಾಧನೆ ಅವಾರ್ಡ್ ಪಡೆದ ಚಿರಂಜೀವಿ
ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಬ್ರಿಟಿಷ್ ಸರ್ಕಾರವು ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಮಾರ್ಚ್ 19 ರಂದು ಲಂಡನ್ನಿನ ಪಾರ್ಲಿಮೆಂಟ್‍ನಲ್ಲಿ ಈ ಗೌರವವನ್ನು ನೀಡಲಾಯಿತು. ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಚಿರಂಜೀವಿ ಅವರ ಈ ಸಾಧನೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳು ಹರಿದುಬರುತ್ತಿವೆ.

ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಟಾಲಿವುಡ್ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಈಗ ಬ್ರಿಟಿಷ್ ಸರ್ಕಾರದಿಂದ ‘ಜೀವಮಾನ ಸಾಧನೆ ಪ್ರಶಸ್ತಿ’ ಸಿಕ್ಕಿದೆ. ಈ ಗೌರವವನ್ನು ಅವರು ಸ್ವೀಕರಿಸಿದ್ದಾರೆ. ಮಾರ್ಚ್ 19ರಂದು ಇಂಗ್ಲೆಂಡ್ನ ಪಾರ್ಲಿಮೆಂಟ್‍ನಲ್ಲಿ (England Parliment) ಇದನ್ನು ನೀಡಿ ಗೌರವಿಸಲಾಗಿದೆ. ಇದರಿಂದ ಚಿರಂಜೀವಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಅಭಿನಂದನೆ ಬರುತ್ತಿದೆ.
ಚಿತ್ರರಂಗಕ್ಕೆ ಚಿರಂಜೀವಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇದರ ಜೊತೆಗೆ ಅವರ ಕಡೆಯಿಂದ ಅನೇಕ ಸಾಮಾಜಿಕ ಕೆಲಸಗಳು ಕೂಡ ಆಗುತ್ತಿವೆ. ಇದೆಲ್ಲವನ್ನೂ ಗಮನಿಸಿದ ಬ್ರಿಟಿಷ್ ಸರ್ಕಾರ ಅವರಿಗೆ ಜೀವಮಾನ ಸಾಧನೆ ಅವಾರ್ಡ್ ನೀಡಿದೆ.
ಚಿರಂಜೀವಿ ಅವರು ಸದ್ಯ ಲಂಡನ್ನಲ್ಲಿ ಇದ್ದಾರೆ. ಅಲ್ಲಿನ ಸಂಸತ್ತಿನಲ್ಲಿ ಈ ಗೌರವವನ್ನು ನೀಡಲಾಗಿದೆ. ಇದು ಭಾರತದ ಚಿತ್ರರಂಗದ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು, ಸರ್ಕಾರಿ ಅಧಿಕಾರಿಗಳು ಭಾಗಿ ಆಗಿದ್ದರು. ಈ ರೀತಿ ಅವಾರ್ಡ್ ಪಡೆದ ಮೊದಲ ಭಾರತೀಯ ಎಂಬ ಹೆಮ್ಮೆಗೆ ಅವರು ಪಾತ್ರರಾಗಿದ್ದಾರೆ.
యునైటెడ్ కింగ్ డం పార్లమెంట్ అందించనున్న జీవిత సాఫల్య పురస్కారం అన్నయ్య @KChiruTweets గారి కీర్తిని మరింత పెంచనుంది
సాధారణ మధ్యతరగతి ఎక్సైజ్ కానిస్టేబుల్ కొడుకుగా జీవితం మొదలుపెట్టి, స్వశక్తితో, కళామతల్లి దీవెనలతో, చిత్ర రంగంలో మెగాస్టార్ గా ఎదిగి, నాలుగున్నర దశాబ్దాలుగా… pic.twitter.com/aIk6wxCk2q
— Pawan Kalyan (@PawanKalyan) March 20, 2025
ಈ ಬಗ್ಗೆ ಸಂತಸ ವ್ಯಕ್ತಪಡಿಸಿರೋ ಅವರ ಸಹೋದರ ಪವನ್ ಕಲ್ಯಾಣ್ ಅವರು, ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಅದೇ ರೀತಿ ಇನ್ನೂ ಅನೇಕರು ಚಿರಂಜೀವಿ ಅವರಿಗೆ ಅಭಿನಂದನೆ ತಿಳಿಸಿ ಪೋಸ್ಟ್ ಮಾಡುತ್ತಾ ಇದ್ದಾರೆ.
ಇದನ್ನೂ ಓದಿ: ಮೆಗಾ ಸ್ಟಾರ್ ಚಿರಂಜೀವಿಗೆ ಯುಕೆ ಪಾರ್ಲಿಮೆಂಟ್‍ನಲ್ಲಿ ಸಿಗಲಿದೆ ವಿಶೇಷ ಗೌರವ
ಚಿರಂಜೀವಿ ಅವರ ಹೆಸರಲ್ಲಿ ಅನೇಕ ದಾಖಲೆಗಳು ಇವೆ. ಅವರಿಗೆ ಈ ಮೊದಲು ಪದ್ಮ ವಿಭೂಷಣ ನೀಡಿ ಗೌರವಿಸಲಾಗಿದೆ. ಅಲ್ಲದೆ, 24 ಸಾವಿರ ಡ್ಯಾನ್ಸ್ ಸ್ಟೆಪ್ ಮಾಡಿದ ಖ್ಯಾತಿ ಪಡೆದು, ಅವರ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್ಗೆ ಸೇರ್ಪಡೆ ಆಯಿತು. ಎಎನ್ಆರ್ ನ್ಯಾಷನಲ್ ಅವಾರ್ಡ್ ಕೂಡ ಅವರಿಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.