AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಲೀಕ್ ಆದ ಹೊರತಾಗಿಯೂ ದಾಖಲೆ ಬರೆಯಲು ಸಜ್ಜಾದ ‘ಜನ ನಾಯಗನ್’

ತಮಿಳುನಾಡು ಸಿಎಂ ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾ ಜುಲೈ 23ಕ್ಕೆ ರಿಲೀಸ್ ಆಗಲಿದೆ. ಯಾವುದೇ ಪ್ರಚಾರವಿಲ್ಲದಿದ್ದರೂ ಮುಂಗಡ ಬುಕಿಂಗ್‌ನಲ್ಲಿ ಚಿತ್ರ ದಾಖಲೆ ಬರೆದಿದ್ದು, ಕೇವಲ ಒಂದು ಗಂಟೆಯಲ್ಲಿ 15 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಇದು ವಿಜಯ್ ಖ್ಯಾತಿಗೆ ಹಿಡಿದ ಕೈಗನ್ನಡಿ.

ಸಿನಿಮಾ ಲೀಕ್ ಆದ ಹೊರತಾಗಿಯೂ ದಾಖಲೆ ಬರೆಯಲು ಸಜ್ಜಾದ ‘ಜನ ನಾಯಗನ್’
ಜನ ನಾಯಗನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 22, 2026 | 12:23 PM

Share

ಮುಖ್ಯಾಂಶಗಳು

  • ಜುಲೈ 23ಕ್ಕೆ ದಳಪತಿ ವಿಜಯ್ ‘ಜನ ನಾಯಕನ್’ ಅದ್ದೂರಿ ರಿಲೀಸ್
  • ಮುಂಗಡ ಬುಕಿಂಗ್‌ನಲ್ಲಿ ಹೊಸ ದಾಖಲೆ
  • ವಿಳಂಬದ ನಡುವೆಯೂ ಧೂಳೆಬ್ಬಿಸಿದ ತಮಿಳುನಾಡು ಸಿಎಂ ಸಿನಿಮಾ

ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಇದು ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ರಾಜಕೀಯ ಪಿತೂರಿ, ಸೆನ್ಸಾರ್ ಮಂಡಳಿ ವಿಳಂಬ ಮತ್ತು ಸಿನಿಮಾ ಲೀಕ್ ನಡುವೆಯೂ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ಆರಂಭವಾಗಿದೆ. ಬುಕ್ ಮೈ ಶೋ ಆಪ್‌ನಲ್ಲಿ ಕೇವಲ ಒಂದು ಗಂಟೆಯಲ್ಲಿ 15 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನ ಬಾಕಿ ಇರುವಾಗಲೇ ಈ ಮಟ್ಟದ ರೆಕಾರ್ಡ್ ಸೃಷ್ಟಿಯಾಗಿದೆ. ವಿಜಯ್ ಅವರು ಈ ಚಿತ್ರಕ್ಕೆ ಯಾವುದೇ ಪ್ರಚಾರ ಮಾಡಿಲ್ಲ. ಆದರೂ ಮುಂಗಡ ಬುಕಿಂಗ್ ಟ್ರೆಂಡ್ ಕಂಡು ಬಾಕ್ಸ್ ಆಫೀಸ್ ತಜ್ಞರೇ ಆಶ್ಚರ್ಯಪಟ್ಟಿದ್ದಾರೆ.

ಮುಂದಿನ ಮೂರು ದಿನಗಳ ಕಾಲ ಇದೇ ವೇಗ ಮುಂದುವರಿದರೆ ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವುದು ಗ್ಯಾರಂಟಿ. ತಮಿಳುನಾಡಿನಲ್ಲಿ ಮೊದಲ ದಿನವೇ ಈ ಚಿತ್ರ ದಾಖಲೆ ಮಟ್ಟದ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ವಿಜಯ್ ಅವರ ಕ್ರೇಜ್ ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕ, ಆಂಧ್ರ, ತೆಲಂಗಾಣದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ಈ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಸಾವಿರ ರೂಪಾಯಿ ಟಿಕೆಟ್ ಇಟ್ಟರೂ ಅದು ಮಾರಾಟ ಆಗಿ ದಾಖಲೆ ಬರೆದಿದೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಮೊದಲ ಬಾರಿ ಮಾತನಾಡಿದ ಪುತ್ರ ಸಂಜಯ್

ಯಾವುದೇ ಪ್ರಚಾರವಿಲ್ಲದಿದ್ದರೂ ಕೇವಲ ವಿಜಯ್ ಅವರ ಸ್ಟಾರ್ ಪವರ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರಂಭ ಪಡೆಯಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:57 am, Mon, 20 July 26

Follow Us