ಧನುಷ್​​-ಐಶ್ವರ್ಯಾ ರಜನಿಕಾಂತ್​ ವಿಚ್ಛೇದನ ಕ್ಯಾನ್ಸಲ್​? ಮಾಜಿ ದಂಪತಿ ಬಗ್ಗೆ ಬಿಗ್​ ನ್ಯೂಸ್​

Dhanush | Aishwaryaa Rajinikanth: ಧನುಷ್​​ ಹಾಗೂ ಐಶ್ವರ್ಯಾ ಮತ್ತೆ ಒಂದಾಗುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.

ಧನುಷ್​​-ಐಶ್ವರ್ಯಾ ರಜನಿಕಾಂತ್​ ವಿಚ್ಛೇದನ ಕ್ಯಾನ್ಸಲ್​? ಮಾಜಿ ದಂಪತಿ ಬಗ್ಗೆ ಬಿಗ್​ ನ್ಯೂಸ್​
ಐಶ್ವರ್ಯಾ- ಧನುಷ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 06, 2022 | 3:44 PM

ಖ್ಯಾತ ನಟ ಧನುಷ್​​ (Dhanush) ಅವರ ದಾಂಪತ್ಯ ಜೀವನದ ಬಗ್ಗೆ ಮತ್ತೆ ಸುದ್ದಿ ಕೇಳಿಬಂದಿದೆ. ಒಂಬತ್ತು ತಿಂಗಳ ಹಿಂದೆ ಐಶ್ವರ್ಯಾ ರಜನಿಕಾಂತ್​ ಮತ್ತು ಧನುಷ್​ ಪರಸ್ಪರ ಬೇರೆ ಆಗುತ್ತಿರುವುದಾಗಿ ಘೋಷಿಸಿದ್ದರು. ಈಗ ಅವರಿಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟ ಆಗಿಲ್ಲ. ಹಾಗಿದ್ದರೂ ಕೂಡ ಕಾಲಿವುಡ್​ ಅಂಗಳದಲ್ಲಿ ಗುಸುಗುಸು ಕೇಳಿಬಂದಿದೆ. ಐಶ್ವರ್ಯಾ ರಜನಿಕಾಂತ್​ (Aishwaryaa Rajinikanth) ಮತ್ತು ಧನುಷ್​ ಅವರು ಮದುವೆ ಆಗಿದ್ದು 2004ರಲ್ಲಿ. ಸುಖವಾಗಿ ಸಂಸಾರ ನಡೆಸುತ್ತಿದ್ದ ಅವರ ದಾಂಪತ್ಯದಲ್ಲಿ ಬಿರುಗಾಳಿ ಏಳುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. 18 ವರ್ಷಗಳ ಕಾಲ ಜೊತೆಗಿದ್ದ ಈ ದಂಪತಿ 2022ರ ಜನವರಿಯಲ್ಲಿ ಬ್ಯಾಡ್​ ನ್ಯೂಸ್​ ನೀಡಿದ್ದರು. ಅದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

‘18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಇಬ್ಬರೂ ಬೆಳೆದೆವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಇಬ್ಬರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವೆವು’ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಈಗ ಅವರಿಬ್ಬರು ಒಂದಾಗುತ್ತಾರೆ ಎಂಬ ವಿಷಯ ಕೇಳಿ ಫ್ಯಾನ್ಸ್​ ಖುಷಿಯಾಗಿದ್ದಾರೆ.

ದಾಂಪತ್ಯ ಅಂತ್ಯ ಆಗುವ ಬಗ್ಗೆ ತಿಳಿಸಲು ಧನುಷ್​ ಮಾಡಿದ ಟ್ವೀಟ್​ನಲ್ಲಿ ಡಿವೋರ್ಸ್​ ಎಂಬ ಪದವನ್ನು ಬಳಸಿರಲಿಲ್ಲ. ಅದಕ್ಕೆ ಪೂರಕ ಎಂಬಂತೆ ಅವರ ತಂದೆ ಕಸ್ತೂರಿ ರಾಜ ಕೂಡ ಒಂದು ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿತ್ತು. ಮಗ-ಸೊಸೆಯ ಡಿವೋರ್ಸ್​ ಸುದ್ದಿಯನ್ನು ಕಸ್ತೂರಿ ರಾಜ ತಳ್ಳಿ ಹಾಕಿದ್ದರು. ‘ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲ ಸಹಜ. ಇದು ಡಿವೋರ್ಸ್​ ಅಲ್ಲ. ಅವರಿಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್​​ನಲ್ಲಿ ಇದ್ದಾರೆ. ಅವರಿಗೆ ನಾನು ಒಂದಷ್ಟು ಸಲಹೆ ನೀಡಿದ್ದೇನೆ’ ಎಂದು ಕಸ್ತೂರಿ ರಾಜ ಹೇಳಿದ್ದರು.

ಇದನ್ನೂ ಓದಿ
Image
ಧನುಷ್ ತಮ್ಮ ಮಗನೆಂದು ಹೇಳಿಕೊಂಡಿದ್ದ ದಂಪತಿಗೆ ಸಂಕಷ್ಟ; 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ನಟ
Image
Dhanush: ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ; ಮದ್ರಾಸ್ ಹೈಕೋರ್ಟ್​​ನಿಂದ ನಟನಿಗೆ ಸಮನ್ಸ್- ಏನಿದು ಪ್ರಕರಣ?
Image
ವಿಚ್ಛೇದನ ಬಳಿಕ ಮೊದಲ ಬಾರಿಗೆ ಮಾಜಿ ಪತ್ನಿ ಐಶ್ವರ್ಯಾಗೆ ಶುಭಾಶಯ ತಿಳಿಸಿದ ಧನುಷ್
Image
ಧನುಷ್​​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ

ಐಶ್ವರ್ಯಾ ​ಮತ್ತು ಧನುಷ್​ ಅವರಿಗೆ ಯಾತ್ರ ರಾಜ್​ ಮತ್ತು ಲಿಂಗ ರಾಜ್​ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಾಜಿ ದಂಪತಿ ಒಂದಾಗುತ್ತಿರುವ ವಿಷಯದ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ