AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿತ್ತಾಡಿಕೊಂಡು ದೂರಾಗಿದ್ದ ಸ್ಟಾರ್ ನಟರು 18 ವರ್ಷಗಳ ಬಳಿಕ ಒಂದು

ದಶಕಗಳಿಂದಲೂ ಪರಸ್ಪರ ಕಿತ್ತಾಡಿಕೊಂಡಿದ್ದ ದಳಪತಿ ವಿಜಯ್ ಮತ್ತು ಅಜಿತ್ ಇತ್ತೀಚೆಗಷ್ಟೆ ವಿದೇಶಿ ನೆಲದಲ್ಲಿ ಪರಸ್ಪರ ತಬ್ಬಿಕೊಂಡು ಒಂದಾದರು. ಅಂದಹಾಗೆ ಅವರು ಮಾತ್ರವೇ ಅಲ್ಲ, ತಮಿಳಿನ ಮತ್ತೊಂದು ತಾರಾ ಜೋಡಿ ಸಹ ಬರೋಬ್ಬರಿ 18 ವರ್ಷದ ಬಳಿಕ ಒಂದಾಗಿದ್ದಾರೆ. ಅವರೇ ಸ್ಟಾರ್ ನಟರಾದ ಧನುಶ್ ಮತ್ತು ಸ್ಟಾರ್ ಕಮಿಡಿಯನ್ ವಡಿವೇಲು.

ಕಿತ್ತಾಡಿಕೊಂಡು ದೂರಾಗಿದ್ದ ಸ್ಟಾರ್ ನಟರು 18 ವರ್ಷಗಳ ಬಳಿಕ ಒಂದು
Dhanush Vadivelu
ಮಂಜುನಾಥ ಸಿ.
|

Updated on:Sep 25, 2026 | 7:53 PM

Share

ಸಿನಿಮಾ ರಂಗದಲ್ಲಿ ಮುನಿಸು ಬಹಳ ಹೆಚ್ಚು. ಪೈಪೋಟಿ ಹೆಚ್ಚಿರುವ ಕ್ಷೇತ್ರ ಇದಾಗಿರುವ ಕಾರಣ ವೃತ್ತಿ ಮಾತ್ಸರ್ಯ ಬಹಳ ಹೆಚ್ಚು. ಹಲವು ಸ್ಟಾರ್ ನಟ-ನಟಿಯರುಗಳಿಗೆ ಪರಸ್ಪರರನ್ನು ಕಂಡರೆ ಆಗದು ಆದರೆ ಮೇಲ್ನೋಟಕ್ಕೆ ಚೆನ್ನಾಗಿರುವಂತೆ ನಟಿಸುತ್ತಾರೆ. ದಶಕಗಳಿಂದಲೂ ಪರಸ್ಪರ ಕಿತ್ತಾಡಿಕೊಂಡಿದ್ದ ದಳಪತಿ ವಿಜಯ್ ಮತ್ತು ಅಜಿತ್ ಇತ್ತೀಚೆಗಷ್ಟೆ ವಿದೇಶಿ ನೆಲದಲ್ಲಿ ಪರಸ್ಪರ ತಬ್ಬಿಕೊಂಡು ಒಂದಾದರು. ಅಂದಹಾಗೆ ಅವರು ಮಾತ್ರವೇ ಅಲ್ಲ, ತಮಿಳಿನ ಮತ್ತೊಂದು ತಾರಾ ಜೋಡಿ ಸಹ ಬರೋಬ್ಬರಿ 18 ವರ್ಷದ ಬಳಿಕ ಒಂದಾಗಿದ್ದಾರೆ. ಅವರೇ ಸ್ಟಾರ್ ನಟರಾದ ಧನುಶ್ ಮತ್ತು ಸ್ಟಾರ್ ಕಮಿಡಿಯನ್ ವಡಿವೇಲು.

ಧನುಶ್ ಎಲ್ಲರಿಗೂ ತಿಳಿದೇ ಇರುವಂತೆ ತಮಿಳಿನ ಸ್ಟಾರ್ ನಟ. ಅವರಿಗೆ ಬಾಲಿವುಡ್​​ನಲ್ಲೂ ಭಾರಿ ಬೇಡಿಕೆ ಇದೆ. ಅದ್ಭುತ ನಟರಾಗಿರುವ ಅವರಿಗೆ ರಾಷ್ಟ್ರಪ್ರಶಸ್ತಿಗಳು ಸಹ ಧಕ್ಕಿವೆ. ಇನ್ನು ವಡಿವೇಲು ಅವರು ಭಾರತೀಯ ಚಿತ್ರರಂಗದ ಸ್ಟಾರ್ ಕಮಿಡಿಯನ್. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಡಿವೇಲು ಅವರಿಗೆ ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲದಷ್ಟು ಅಭಿಮಾನಿ ವರ್ಗ ಇದೆ. ಆದರೆ ಈ ಇಬ್ಬರೂ ನಟರು 18 ವರ್ಷಗಳ ಹಿಂದೆ ಪರಸ್ಪರ ಕಿತ್ತಾಡಿಕೊಂಡಿದ್ದರು.

2008 ರಲ್ಲಿ ಧನುಶ್ ‘ಪಡಿಕ್ಕಾದವನ್’ ಹೆಸರಿನ ತಮಿಲು ಸಿನಿಮಾನಲ್ಲಿ ನಟಿಸುತ್ತಿದ್ದರು. ಧನುಶ್ ನಟನೆ ಆರಂಭಿಸಿ ಆರೇಳು ವರ್ಷಗಳಾಗಿದ್ದವು ಆದರೆ ಆಗಲೇ ಅವರು ಯುವ ಸ್ಟಾರ್ ಎನಿಸಿಕೊಂಡಿದ್ದರು. ಆ ಸಿನಿಮಾದ ಸೆಟ್​​ನಲ್ಲಿ ಧನುಶ್ ಮತ್ತು ವಡಿವೇಲು ಅವರಿಗೆ ಜಗಳ ನಡೆದಿತ್ತು. ಆಗ ಆಗಿದ್ದ ಕೆಲವು ವರದಿಗಳ ಪ್ರಕಾರ, ವಡಿವೇಲು ಮತ್ತು ಧನುಶ್ ನಡುವೆ ಜೋರು ಜಗಳ ನಡೆದಿದ್ದು, ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳ ಹೋಗಿತ್ತಂತೆ. ಕೊನೆಗೆ ವಡಿವೇಲು ಅವರು ‘ಪಡಿಕ್ಕಾದವನ್’ ಸಿನಿಮಾದ ಸೆಟ್​​ನಿಂದ ಹೊರ ನಡೆದಿದ್ದರು.

ಇದನ್ನೂ ಓದಿ:ಚಯನ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾ ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ತೆರೆಗೆ

ಅಲ್ಲಿಂದ ಈ ವರೆಗೆ ವಡಿವೇಲು ಹಾಗೂ ಧನುಶ್ ಒಟ್ಟಿಗೆ ನಟಿಸಿದ್ದೇ ಇಲ್ಲ. ವಡಿವೇಲು ತಮ್ಮ ವೃತ್ತಿ ಜೀವನದಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಬಹುತೇಕ ಎಲ್ಲ ಸ್ಟಾರ್ ನಟರು, ಯುವ ನಟರುಗಳ ಜೊತೆಗೂ ವಿಡಿವೇಲು ನಟನೆ ಮಾಡಿದ್ದಾರೆ. ಆದರೆ 2008ರ ಬಳಿಕ ಧನುಶ್ ಜೊತೆಗೆ ಯಾವ ಸಿನಿಮಾನಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆದರೆ ಇದೀಗ 18 ವರ್ಷಗಳ ಬಳಿಕ ಮುನಿಸು ಮರೆತು ಈಗ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ.

ಇನ್ನೂ ಹೆಸರಿಡದ ಧನುಶ್ ಅವರ 56ನೇ ಸಿನಿಮಾನಲ್ಲಿ ವಡಿವೇಲು ನಟನೆ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ಪ್ರೀತಿ ಮುಕುಂದನ್ ನಾಯಕಿ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಮಧುರೈನಲ್ಲಿ ನಡೆದಿದೆ. ಈ ವೇಳೆ ಮಾತನಾಡಿದ ವಡಿವೇಲು, ‘ನಾನು ಧನುಶ್ ಬಹಳ ವರ್ಷಗಳಿಂದ ನಟಿಸಿರಲಿಲ್ಲ, ಕೆಲವು ಶಕ್ತಿಗಳು ನಮ್ಮಿಬ್ಬರ ನಡುವೆ ವೈಷಮ್ಯ ತಂದಿರಿಸಿದ್ದವು ಅದೆಲ್ಲ ಈಗ ಶಮನ ಆಗಿದೆ’ ಎಂದಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Fri, 25 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More