AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮಾಸ್ ಅವತಾರದಲ್ಲಿ ನಟ ಧನುಶ್, ‘ಮಾರಿ 3’ಗೆ ಮಾತುಕತೆ

Dhanush films: ಈಗಿನ ಹಲವು ಪ್ಯಾನ್ ಇಂಡಿಯಾ ಸ್ಟಾರ್​​ಗಳ ರೀತಿ ನಟ ಧನುಶ್ ಸಂಪೂರ್ಣ ಕಮರ್ಶಿಯಲ್ ಮಾಸ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಬದಲಿಗೆ ಅವರು ಕತೆಯುಳ್ಳ, ನಟನೆಗೆ ಹೆಚ್ಚು ಅವಕಾಶವುಳ್ಳ, ನಾಯಕ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರುವ ಪಾತ್ರಗಳಲ್ಲಿ ನಟಿಸುವುದು ಹೆಚ್ಚು. ‘ಮಾರಿ’ ಧನುಶ್ ನಟಿಸಿರುವ ಮಾಸ್ ಮಸಾಲಾ ಸಿನಿಮಾ. ಇದೀಗ ಅವರು ಮೂರನೇ ಭಾರಿ ಅದೇ ಪಾತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

ಮತ್ತೆ ಮಾಸ್ ಅವತಾರದಲ್ಲಿ ನಟ ಧನುಶ್, ‘ಮಾರಿ 3’ಗೆ ಮಾತುಕತೆ
Maari
ಮಂಜುನಾಥ ಸಿ.
|

Updated on: Sep 03, 2026 | 12:10 PM

Share

ಮುಖ್ಯಾಂಶಗಳು

  • ಧನುಶ್ ದಕ್ಷಿಣದ ಸ್ಟಾರ್ ನಟ
  • ‘ಮಾರಿ’ ಸಿನಿಮಾ ಅವರ ಮಾಸ್ ಮಸಾಲಾ ಸಿನಿಮಾ
  • ಇದೀಗ ಮೂರನೇ ಬಾರಿ ಮಾರಿ ಆಗಲು ಸಜ್ಜಾಗಿದ್ದಾರೆ ಧನುಶ್

‘ಮಾರಿ’ ಪಾತ್ರ ದಕ್ಷಿಣ ಭಾರತದ ಬಲು ಜನಪ್ರಿಯ ಮಾಸ್ ಹೀರೋ ಪಾತ್ರ. ಧನುಶ್ ಅವರು ಮಾರಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು. ಫಹಾದ್ ಫಾಸಿಲ್ ಅವರ ‘ರಂಗಾ’ ರೀತಿಯಲ್ಲೇ ಆದರೆ ಹೆಚ್ಚು ಹೀರೋಯಿಸಂ ಒಳಗೊಂಡ ಅದ್ಭುತವಾದ ಮಾಸ್ ಪಾತ್ರ ಮಾರಿಯದ್ದು. ಈಗಾಗಲೇ ‘ಮಾರಿ’ ಸಿನಿಮಾದ ಎರಡು ಭಾಗಗಳು ಬಿಡುಗಡೆ ಆಗಿದ್ದು ಎರಡೂ ಸಿನಿಮಾ ಸೂಪರ್ ಹಿಟ್ ಆಗಿವೆ. ಇದೀಗ ಮತ್ತೊಮ್ಮೆ ಧನುಶ್ ಮಾರಿ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಬಾಲಾಜಿ ಮೋಹನ್ ನಿರ್ದೇಶಿಸಿದ್ದ ‘ಮಾರಿ’ ಈ ಚಿತ್ರದ ಮೊದಲ ಭಾಗ 2015 ರಲ್ಲಿ ಬಿಡುಗಡೆಯಾಗಿತ್ತು. ಆ ಸಿನಿಮಾನಲ್ಲಿ ಕಾಜಲ್ ಅಗರ್ವಾಲ್ ನಾಯಕಿ. ಮೀಸೆ ಬಿಟ್ಟು, ಬಣ್ಣ-ಬಣ್ಣದ ಶರ್ಟು ಧರಿಸಿ ಏರಿಯಾನಲ್ಲಿ ಕಾಲರ್ ಎತ್ತಿ ಮೆರೆಯುವ ರೌಡಿಯ ಪಾತ್ರದಲ್ಲಿ ಧನುಶ್ ನಟಿಸಿದ್ದರು. ಹಾಸ್ಯಮಯ, ಮಾನವೀಯತೆ ಉಳ್ಳ ರೌಡಿ ಮಾರಿಗೆ ಒಂದು ಫ್ಲ್ಯಾಷ್​ಬ್ಯಾಕ್ ಸಹ ಇತ್ತು. ಅದೇ ಆ ಸಿನಿಮಾವನ್ನು ಸೂಪರ್ ಹಿಟ್ ಆಗಿಸಿತ್ತು. ಬಳಿಕ ಎರಡನೇ ಭಾಗವು 2018 ರಲ್ಲಿ ಬಿಡುಗಡೆಯಾಯಿತು. ಸಾಯಿ ಪಲ್ಲವಿ ನಾಯಿಕಿಯಾಗಿ ನಟಿಸಿದ್ದ ಆ ಸಿನಿಮಾ ಸಹ ದೊಡ್ಡ ಹಿಟ್ ಆಯ್ತು. ಆ ಸಿನಿಮಾದ ‘ರೌಡಿ ಬೇಬಿ’ ಹಾಡು ಯೂಟ್ಯೂಬ್​​ನಲ್ಲಿ ದಾಖಲೆಯನ್ನೇ ಬರೆದಿದೆ.

ಮೊದಲ ಭಾಗವು ಭರ್ಜರಿ ಯಶಸ್ಸು ಕಂಡರೆ, ಎರಡನೇ ಭಾಗ ಸಾಧಾರಣ ಯಶಸ್ಸು ಕಂಡಿತ್ತು. ಈಗ, ಎರಡನೇ ಭಾಗ ಬಿಡುಗಡೆಯಾಗಿ ಸುಮಾರು 8 ವರ್ಷಗಳ ನಂತರ, ‘ಮಾರಿ 3’ ಸಿನಿಮಾದ ಬಗ್ಗೆ ಚರ್ಚೆ ಆರಂಭಗೊಂಡಿದ್ದು, ಧನುಶ್ ಹಾಗೂ ನಿರ್ದೇಶಕ ಬಾಲಾಜಿ ಮೋಹನ್ ಕತೆಯೊಂದನ್ನು ಚರ್ಚಿಸಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ವಿಯೆಟ್ನಾಂನಲ್ಲಿ ಬಿಗ್​​ಬಾಸ್ ಧನುಶ್, ಸ್ಟೈಲಿಷ್ ವಿಡಿಯೋ ಹಂಚಿಕೊಂಡ ನಟ

ಧನುಶ್ ಸಹ ಸಂಪೂರ್ಣ ಮಾಸ್ ಪಾತ್ರದಲ್ಲಿ ನಟಿಸಿ ವರ್ಷಗಳೇ ಆಗಿದ್ದು, ಒಂದು ಮಾಸ್ ಮಸಾಲಾ ಸಿನಿಮಾನಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ. ಧನುಷ್ ಸ್ವತಃ ನಿರ್ದೇಶಕ ಬಾಲಾಜಿ ಮೋಹನ್‌ಗೆ ಕಥೆಯೊಂದನ್ನು ಸೂಚಿಸಿ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಕೇಳಿಕೊಂಡಿದ್ದಾರೆ. ವರದಿಗಳ ಪ್ರಕಾರ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ.

ಮೊದಲ ಭಾಗಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶಕರಾಗಿದ್ದರೆ, ಎರಡನೇ ಭಾಗಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದರು. ಮೊದಲ ಭಾಗದ ಆಡಿಯೋ ಮತ್ತು ಹಿನ್ನೆಲೆ ಸಂಗೀತವು ದೊಡ್ಡ ಹಿಟ್ ಆಗಿದ್ದು, ಇಂದಿಗೂ ಜನರು ಆ ಹಾಡಿಗೆ ತೂಗುತ್ತಾರೆ. ಇದನ್ನು ಪರಿಗಣಿಸಿ, ಮೂರನೇ ಭಾಗಕ್ಕಾಗಿ ಅನಿರುದ್ಧ್ ಅವರು ‘ಮಾರಿ 3’ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ.

ಭಾರತದಲ್ಲಿ ಮೂರು ಭಾಗಗಳಲ್ಲಿ ಸಿನಿಮಾ ಬಿಡುಗಡೆ ಆಗುವುದು ಬಹಳ ವಿರಳ, ಆದರೆ ‘ಮಾರಿ’ ಈಗ ಮೂರನೇ ಭಾಗದಲ್ಲಿ ಬಿಡುಗಡೆ ಆಗುತ್ತಿದೆ. ಧನುಶ್ ಪ್ರಸ್ತುತ ಕೆಲವು ಪ್ರಮುಖ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಓಂ’ ಮತ್ತು ‘ತಮಿಳ್ ಮುರುಗನ್’ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ. ಅದಾದ ಬಳಿಕ ಅವರು ಸಿನಿಮಾ ಒಂದನ್ನು ನಿರ್ದೇಶನ ಸಹ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ