AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು, ತಮಿಳು ಬಳಿಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ನಟ ದೀಕ್ಷಿತ್ ಶೆಟ್ಟಿ

Dheekshith Shetty: ‘ದಿಯಾ’ ಸಿನಿಮಾ ಮೂಲಕ ಖ್ಯಾತಿಗಳಿಸಿದ ನಟ ದೀಕ್ಷಿತ್ ಶೆಟ್ಟಿ ಈಗಾಗಲೇ ಒಂದು ಪ್ಯಾನ್ ಇಂಡಿಯಾ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.

ತೆಲುಗು, ತಮಿಳು ಬಳಿಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ನಟ ದೀಕ್ಷಿತ್ ಶೆಟ್ಟಿ
ಮಂಜುನಾಥ ಸಿ.
|

Updated on: Dec 26, 2023 | 9:19 PM

Share

ದಿಯಾ‘ (Dia) ಸಿನಿಮಾದಲ್ಲಿ ಲವರ್ ಬಾಯ್ ಪಾತ್ರದ ಮೂಲಕ ಜನಪ್ರಿಯತೆ ಗಿಟ್ಟಿಸಿದ ದೀಕ್ಷಿತ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ನಟನಾಗಿ ಬೆಳೆಯುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆದ ತೆಲುಗಿನ ಹಿಟ್ ಸಿನಿಮಾ ‘ದಸರಾ’ ಸಿನಿಮಾನಲ್ಲಿ ಪ್ರಮುಖ ಪಾತ್ರ ಗಿಟ್ಟಿಸಿಕೊಂಡು ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡ ದೀಕ್ಷಿತ್ ಶೆಟ್ಟಿ, ಮತ್ತೊಂದು ತೆಲುಗು ಸಿನಿಮಾ ‘ಗರ್ಲ್​ಫ್ರೆಂಡ್​’ನಲ್ಲಿ ರಶ್ಮಿಕಾರ ಬಾಯ್​ಫ್ರೆಂಡ್ ಆಗಿ ನಟಿಸುತ್ತಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಚಾಕಲೆಟ್ ಬಾಯ್ ಆಗಿ ಹೆಸರು ಮಾಡಿರುವ ದೀಕ್ಷಿತ್ ಶೆಟ್ಟಿ ಈಗ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.

ಪ್ಯಾರಾ ಸೈಕಲಾಜಿಕಲ್ ಮಾದರಿಯ ಕತೆ ಒಳಗೊಂಡಿರುವ ‘ಒಪ್ಪೀಸ್’ ಮಲಯಾಳಂ ಸಿನಿಮಾದಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಎನ್ನುವುದೇ ಸಿನಿಮಾದ ಕಥೆಯ ತಿರುಳು. ಫೆಬ್ರವರಿಯಿಂದ ‘ಒಪ್ಪೀಸ್’ ಸಿನಿಮಾದ ಶೂಟಿಂಗ್ ಶುರು ಆಗಲಿದೆ. ಸೌಜನ್ ಜೋಸೆಫ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ. ಎಂ ಜಯಚಂದ್ರನ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ಬ್ಯಾಂಕ್ ಲೂಟಿಗೆ ಇಳಿದ ದೀಕ್ಷಿತ್ ಶೆಟ್ಟಿ ಮತ್ತು ತಂಡ

ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು ‘ದಿಯಾ’ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ. ಸದ್ಯ ಅವರೀಗ ‘ಬ್ಲಿಂಕ್’ ಎಂಬ ಕನ್ನಡ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ರವಿಚಂದ್ರ ಎ.ಜೆ ಎಂಬುವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಶ್ರೀನಿಧಿ ‘ಬೆಂಗಳೂರು ಕಥೆ’ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 8ಕ್ಕೆ ‘ಬ್ಲಿಂಕ್’ ಸಿನಿಮಾ ಬಿಡುಗಡೆ ಆಗಲಿದೆ.

ಇದರ ಹೊರತಾಗಿ ದೀಕ್ಷಿತ್, ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಿರುವ ‘ಗರ್ಲ್ ಫ್ರೆಂಡ್’ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಇತ್ತೀಚೆಗಷ್ಟೇ ಸರಳವಾಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ದೀಕ್ಷಿತ್ ಬರ್ತ್ ಡೇ ಸ್ಪೆಷಲ್ ಆಗಿ ‘ಗರ್ಲ್ ಫ್ರೆಂಡ್’ ಸಿನಿಮಾದ ಸಣ್ಣ ಗ್ಲಿಂಪ್ಸ್ ಬಿಡುಗಡೆ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ. ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಸ್ಪೂಕಿ ಕಾಲೇಜು’ ಗಳಂತಹ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ನಿರ್ಮಾಣದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದಲ್ಲಿಯೂ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ಇನ್ನು ದೀಕ್ಷಿತ್ ನಟನೆಯ ‘ಕೆಟಿಎಂ’ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಇದರ ತಮಿಳು ಸಿನಿಮಾ ಒಂದರಲ್ಲಿಯೂ ದೀಕ್ಷಿತ್ ನಟಿಸಿದ್ದು ಅದು ಸಹ ತೆರೆಗೆ ಬರಲು ರೆಡಿಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ