Dunki Movie: ರಾಜ್​ಕುಮಾರ್ ಹಿರಾನಿ ಬರ್ತ್​ಡೇಗೆ ಸಿಗುತ್ತಿದೆ ‘ಡಂಕಿ’ ಸಿನಿಮಾದ ಸಾಂಗ್

ನವೆಂಬರ್ 22ರಂದು ರಾಜ್​ಕುಮಾರ್ ಹಿರಾನಿ ಬರ್ತ್​ಡೇ. ಈ ದಿನ ಸಿನಿಮಾ ತಂಡದಿಂದ ಸಾಂಗ್ ರಿಲೀಸ್ ಆಗುತ್ತಿದೆ. ‘ಲುಪ್ ಪುಟ್ ಗಯಾ..’ ಹಾಡು ರಾಜ್​ಕುಮಾರ್ ಬರ್ತ್​ಡೇ ದಿನ ರಿಲೀಸ್ ಆಗುತ್ತಿದೆ.

Dunki Movie: ರಾಜ್​ಕುಮಾರ್ ಹಿರಾನಿ ಬರ್ತ್​ಡೇಗೆ ಸಿಗುತ್ತಿದೆ ‘ಡಂಕಿ’ ಸಿನಿಮಾದ ಸಾಂಗ್
ಡಂಕಿ ಸಿನಿಮಾ ಪೋಸ್ಟರ್

Updated on: Nov 21, 2023 | 8:17 PM

‘ಡಂಕಿ’ ಸಿನಿಮಾ (Dunki Movie) ಡಿಸೆಂಬರ್ 22ರಂದು ರಿಲೀಸ್ ಆಗುತ್ತಿದೆ. ಶಾರುಖ್ ಖಾನ್, ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಡಂಕಿ’ ಸಿನಿಮಾದ ಟೀಸರ್ ಗಮನ ಸೆಳೆದಿತ್ತು. ಈಗ ಸಿನಿಮಾ ತಂಡ ಸಾಂಗ್ ರಿಲೀಸ್ ಮಾಡುತ್ತಿದೆ. ಅದೂ ರಾಜ್​ಕುಮಾರ್ ಹಿರಾನಿ ಬರ್ತ್​ಡೇ ದಿನ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ನವೆಂಬರ್ 22ರಂದು ರಾಜ್​ಕುಮಾರ್ ಹಿರಾನಿ ಬರ್ತ್​ಡೇ. ಈ ದಿನ ಸಿನಿಮಾ ತಂಡದಿಂದ ಸಾಂಗ್ ರಿಲೀಸ್ ಆಗುತ್ತಿದೆ. ‘ಲುಪ್ ಪುಟ್ ಗಯಾ..’ ಹಾಡು ರಾಜ್​ಕುಮಾರ್ ಬರ್ತ್​ಡೇ ದಿನ ರಿಲೀಸ್ ಆಗುತ್ತಿದೆ. ಈ ಮೆಲೋಡಿ ಹಾಡನ್ನು ಕೇಳೋಕೆ ಕಾದು ಕೂತಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ಈ ಹಾಡಿನಲ್ಲಿ ರೊಮ್ಯಾನ್ಸ್ ಮಾಡಿದ್ದು, ಇದನ್ನು ನೋಡೋಕೆ ಫ್ಯಾನ್ಸ್ ಕಾದಿದ್ದಾರೆ.

ರಾಜ್​ಕುಮಾರ್ ಹಿರಾನಿ, ಕನಿಕಾ ಧಿಲ್ಲೋನ್, ಅಭಿಜಿತ್ ಜೋಶಿ ‘ಡಂಕಿ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಶಾರುಖ್ ಖಾನ್ ಅವರ ‘ಜವಾನ್’ ಹಾಗೂ ‘ಪಠಾಣ್’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಅವರು ಕ್ಲಾಸಿಕ್ ಕಥೆಯೊಂದಿಗೆ ಅಭಿಮಾನಿಗಳ ಎದುರು ಬರುತ್ತಿದ್ದಾರೆ. ಈ ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

‘ಡಂಕಿ’ ಚಿತ್ರಕ್ಕೆ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್, ಜಿಯೋ ಸ್ಟುಡಿಯೋಸ್, ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್-ಹಿರಾನಿ ಸಿನಿಮಾದಲ್ಲಿ ಹಲವು ಸ್ಟಾರ್​ಗಳು; ‘ಓಂ ಶಾಂತಿ ಓಂ’ ನೆನಪಿಸಿದ ಹೊಸ ಚಿತ್ರ

ರಾಜ್​ಕುಮಾರ್ ಹಿರಾನಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ವಿಶ್ ಬರುತ್ತಿದೆ. ಅವರಿಗೆ ನಾಲ್ಕು ರಾಷ್ಟ್ರಪ್ರಶಸ್ತಿಗಳು ಸಿಕ್ಕಿವೆ. ‘ಮುನ್ನಾ ಬಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ ಅಂಥ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:04 pm, Tue, 21 November 23