ಧರೆಗುರುಳಲಿದೆ ಬೆಂಗಳೂರಿನ ಮತ್ತೊಂದು ಐಕಾನಿಕ್ ಚಿತ್ರಮಂದಿರ
Urvashi theater: ಕಪಾಲಿ, ಸಾಗರ್, ತ್ರಿವೇಣಿ, ಕಾವೇರಿ, ಸ್ಟೇಟ್ಸ್, ಮೂವಿಲ್ಯಾಂಡ್ ಬೆಂಗಳೂರಿನ ಇನ್ನೂ ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಾಣೆ ಆಗಿವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಉಳಿದಿರುವುದು ಕೆಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು, ಈಗ ಅದರಲ್ಲೂ ಒಂದು ಐಕಾನಿಕ್ ಚಿತ್ರಮಂದಿರ ನೆಲಸಮವಾಗುತ್ತಿದೆ. ಯಾವುದದು?

ಬೆಂಗಳೂರಿನ (Bengaluru) ಐಕಾನಿಕ್ ಚಿತ್ರಮಂದಿರಗಳು ಒಂದೊಂದಾಗಿ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಕಳೆದ ಕೆಲವಾರು ವರ್ಷಗಳಲ್ಲಿಯೇ ಹಲವಾರು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಧರೆಗುರುಳಿದ್ದು ಆ ಜಾಗಗಳಲ್ಲಿ ಮಾಲ್ಗಳ ನಿರ್ಮಾಣ ಆಗಿದೆ. ಕಪಾಲಿ, ಸಾಗರ್, ತ್ರಿವೇಣಿ, ಕಾವೇರಿ, ಸ್ಟೇಟ್ಸ್, ಮೂವಿಲ್ಯಾಂಡ್ ಬೆಂಗಳೂರಿನ ಇನ್ನೂ ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಾಣೆ ಆಗಿವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಉಳಿದಿರುವುದು ಕೆಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು, ಈಗ ಅದರಲ್ಲೂ ಒಂದು ಐಕಾನಿಕ್ ಚಿತ್ರಮಂದಿರ ನೆಲಸಮವಾಗುತ್ತಿದೆ.
ಲಾಲ್ಬಾಗ್ ಸಮೀಪ, ಸಿದ್ಧಯ್ಯ ರಸ್ತೆಯಲ್ಲಿರುವ ಊರ್ವಶಿ ಚಿತ್ರಮಂದಿರ. ಬೆಂಗಳೂರಿನಲ್ಲಿ ಅಸ್ಥಿತ್ವದಲ್ಲಿರುವ ಅತಿ ದೊಡ್ಡ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಒಂದಾಗಿದ್ದು, ಹಲವು ಭಾಷೆಯ ಹಲವಾರು ಸಿನಿಮಾಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಕೆಲವು ನಟರುಗಳಿಗೆ ಊರ್ವಶಿ ಚಿತ್ರಮಂದಿರವೇ ಮೇನ್ ಚಿತ್ರಮಂದಿರ ಆಗಿತ್ತು. ಆದರೆ ಇದೀಗ ಈ ಊರ್ವಶಿ ಚಿತ್ರಮಂದಿರ ನೆಲಸಮವಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ಈ ಚಿತ್ರಮಂದಿರ ಕಾರ್ಯವನ್ನು ಸ್ಥಗಿತಗೊಳಿಸಲಿದ್ದು, ಚಿತ್ರಮಂದಿರವನ್ನು ನೆಲಸಮಗೊಳಿಸಿ ಹೊಸ ಕಾಮಗಾರಿ ಪ್ರಾರಂಭ ಮಾಡಲಾಗುವುದು.
ಊರ್ವಶಿ ಚಿತ್ರಮಂದಿರ 1970ರಲ್ಲಿ ನಿರ್ಮಾಣ ಮಾಡಲಾಗಿದೆ. ಈ ಚಿತ್ರಮಂದಿರದ ಒಟ್ಟು ಸೀಟಿಂಗ್ ಸಾಮರ್ಥ್ಯ ಬರೋಬ್ಬರಿ 1100. ಒಂದೇ ಬಾರಿ 1100 ಮಂದಿ ಸಿನಿಮಾ ನೋಡಬಹುದಾದ ವ್ಯವಸ್ಥೆ ಇತ್ತು. ಸ್ಕ್ರೀನ್ ಸಹ ಬಹಳ ದೊಡ್ಡದು. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒಳ್ಳೆಯ ಸಿನಿಮಾ ಅನುಭವವನ್ನು ಈ ಚಿತ್ರಮಂದಿರ ನೀಡುತ್ತಿತ್ತು. ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ, ವಿಶಾಲ ಜಾಗವೂ ಸಹ ಊರ್ವಶಿಗೆ ಇತ್ತು. ಹಲವು ವರ್ಷಗಳಿಂದ ಹಲವಾರು ಸಿನಿಮಾಗಳನ್ನು ಬಿಡುಗಡೆ ಮಾಡಿ, ಒಳ್ಳೆಯ ಕಲೆಕ್ಷನ್ ಸಹ ನೀಡುತ್ತಾ ಬಂದಿದ್ದ ಊರ್ವಶಿ ಇದೀಗ ಬಾಗಿಲು ಹಾಕುತ್ತಿದೆ.
ಇದನ್ನೂ ಓದಿ:ಊರ್ವಶಿ ರೌಟೆಲಾ-ಓರಿಯ ವಿಚಿತ್ರ ಡ್ಯಾನ್ಸ್: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರ ಬಾಗಿಲು ಹಾಕುತ್ತಿರುವುದು, ಭೂ ವಿವಾದದ ಕಾರಣಕ್ಕೆ ಎನ್ನಲಾಗುತ್ತಿದೆ. ಈ ಹಿಂದೆ ಸಹ ಊರ್ವಶಿ ಚಿತ್ರಮಂದಿರವು ಆಸ್ತಿ ವಿವಾದದ ಕಾರಣಕ್ಕೆ ಸುದ್ದಿಯಾಗಿತ್ತು. 1970ರಲ್ಲಿ ಜಮೀನು ಲೀಸ್ನ ಆಧಾರದ ಮೇಲೆ ಊರ್ವಶಿ ಚಿತ್ರಮಂದಿರವನ್ನು ನಿರ್ಮಿಸಲಾಗಿತ್ತು. 2018ರಲ್ಲಿಯೇ ಲೀಸ್ ಅವಧಿ ಮುಕ್ತಾಯವಾಗಿತ್ತು. ಆದರೆ ಲೀಸ್ ಪಡೆದವರು ಮತ್ತು ಭೂ ಮಾಲೀಕರ ನಡುವಿನ ವಿವಾದದಿಂದಾಗಿ ಇಷ್ಟು ವರ್ಷ ತಳ್ಳಿಕೆ ಆಯ್ತು. ಇದೀಗ ಭೂ ಮಾಲೀಕರು ಜಾಗವನ್ನು ಮರು ಪಡೆದಿದ್ದು, ಚಿತ್ರಮಂದಿರವನ್ನು ನೆಲಸಮಗೊಳಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




