AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಖತ್ ಬೋಲ್ಡ್ ಆಗಿದೆ ‘ಎಪಿಕ್’ ಟೀಸರ್; ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಾದ ‘ಬೇಬಿ’ ನಟಿ

‘ಎಪಿಕ್’ ಚಿತ್ರದ ಬೋಲ್ಡ್ ಟೀಸರ್ ಬಿಡುಗಡೆಯಾಗಿದೆ. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಇದರಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ವೈಷ್ಣವಿಗೆ ಪ್ರಶ್ನೆ ಕೇಳಿದ್ದಾರೆ. ಅವರು ಸಿಟ್ಟಾಗಿ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ. ನಿರ್ದೇಶಕರು ಪರಿಸ್ಥಿತಿ ನಿಭಾಯಿಸಿದ್ದಾರೆ.

ಸಖತ್ ಬೋಲ್ಡ್ ಆಗಿದೆ ‘ಎಪಿಕ್’ ಟೀಸರ್; ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಾದ ‘ಬೇಬಿ’ ನಟಿ
ಎಪಿಕ್
ರಾಜೇಶ್ ದುಗ್ಗುಮನೆ
|

Updated on: Apr 30, 2026 | 7:41 AM

Share

ಸಿನಿಮಾಗಳಲ್ಲಿ ಬೋಲ್ಡ್​ ದೃಶ್ಯಗಳನ್ನು ಮಾಡಲು ಎಲ್ಲ ನಾಯಕಿಯರೂ ಒಪ್ಪಿವುದಿಲ್ಲ. ಕೆಲವರು ಒಪ್ಪಿದರೂ ಆ ಬಗ್ಗೆ ಕೇಳಿ ಬರುವ ಪ್ರಶ್ನೆಗಳಿಗೆ ಉತ್ತರಿಸಲು ರೆಡಿ ಇರುವುದಿಲ್ಲ. ಈಗ ಹಾಗೆಯೇ ಆಗಿದೆ. ‘ಎಪಿಕ್’ ಹೆಸರಿನ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ನಟಿಸಿದ್ದಾರೆ.

‘ಬೇಬಿ’ ಹೆಸರಿನ ಸಿನಿಮಾ 2023ರಲ್ಲಿ ಬಂದು ಸೂಪರ್ ಹಿಟ್ ಆಯಿತು. 10 ಕೋಟಿ ರೂಪಾಯಿಯಲ್ಲಿ ಸಿದ್ಧವಾದ ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ಗಳಿಕೆ ಮಾಡಿತು. ಈ ಸಿನಿಮಾದಲ್ಲಿ ಆನಂದ್ ಹಾಗೂ ವೈಷ್ಣವಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಆನಂದ್ ಹಾಗೂ ವೈಷ್ಣವಿ ‘ಎಪಿಕ್: ದಿ ಸೆಮಿಸ್ಟರ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ.

ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ; ಇದರಲ್ಲಿದ್ದಾರೆ ಹಾಲಿವುಡ್ ತಂತ್ರಜ್ಞರು

ವಿಜಯ್ ದೇವರಕೊಂಡ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರ ಇಮೇಜ್ ಸಂಪೂರ್ಣವಾಗಿ ಬದಲಾಯಿತು. ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿತು. ಅದೇ ರೀತಿ ಆನಂದ್ ಕೂಡ ಪ್ರಯತ್ನಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ‘ಎಪಿಕ್’ ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಿವೆ.

‘ಬೇಬಿ’ ಸಿನಿಮಾದಲ್ಲಿ ಒಂದು ಸ್ಯಾಡ್ ಎಂಡಿಂಗ್ ಲವ್​ ಸ್ಟೋರಿ ಇತ್ತು. ‘ಎಪಿಕ್’ ಚಿತ್ರದಲ್ಲಿ ಕೇವಲ ಬೋಲ್ಡ್ ದೃಶ್ಯಗಳ ಮೇಲೆ ಗಮನ ಹರಿಸಲಾಗಿದೆಯೇ ಎಂಬ ಪ್ರಶ್ನೆ ಇದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೈಷ್ಣವಿಗೆ ಪ್ರಶ್ನೆ ಎದುರಾಗಿದೆ. ‘ಬೇಬಿ’ ಸಿನಿಮಾ ಬಳಿಕ ಈ ರೀತಿಯ ಇಮೇಜ್ ಚೇಂಜ್ ಬೇಕಿತ್ತು ಅಲ್ಲವೇ ಎಂದು ಕೇಳಲಾಗಿದೆ. ಆದರೆ, ಇದಕ್ಕೆ ಉತ್ತರಿಸಲು ನಟಿ ಹಿಂದೇಟು ಹಾಕಿದ್ದಾರೆ. ಅವರ ಬದಲು ನಿರ್ದೇಶಕರು ಉತ್ತರ ನೀಡಿದರು. ಒಂದು ಸರಳ ಪ್ರಶ್ನೆಗೆ ಇಷ್ಟು ಸಿಟ್ಟಾದರೆ ಹೇಗೆ ಎಂಬುದು ಅನೇಕರ ಕುತೂಹಲಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ