AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prathap Pothen Death: ಚೆನ್ನೈನ ಫ್ಲಾಟ್​ನಲ್ಲಿ ಶವವಾಗಿ ಪತ್ತೆಯಾದ ನಟ ಪ್ರತಾಪ್​ ಪೋಥೆನ್ ಹಿನ್ನೆಲೆ ಏನು?

Prathap Pothen No More: 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಪ್ರತಾಪ್​ ಪೋಥೆನ್ ಅವರು ವಿಧಿವಶರಾಗಿದ್ದಾರೆ. ಚೆನ್ನೈನಲ್ಲಿ ನಿಧನರಾದ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

Prathap Pothen Death: ಚೆನ್ನೈನ ಫ್ಲಾಟ್​ನಲ್ಲಿ ಶವವಾಗಿ ಪತ್ತೆಯಾದ ನಟ ಪ್ರತಾಪ್​ ಪೋಥೆನ್ ಹಿನ್ನೆಲೆ ಏನು?
ಪ್ರತಾಪ್ ಪೋಥೆನ್
TV9 Web
| Edited By: |

Updated on:Jul 15, 2022 | 12:18 PM

Share

ಬಹುಭಾಷೆಯಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ಖ್ಯಾತ ನಟ ಪ್ರತಾಪ್​ ಪೋಥೆನ್​ (Prathap Pothen) ಅವರು ನಿಧನರಾಗಿದ್ದಾರೆ. ಚೆನ್ನೈನ (Chennai) ಅಪಾರ್ಟ್​ಮೆಂಟ್​ನಲ್ಲಿ ಅವರ ಶವ ಪತ್ತೆ ಆಗಿದೆ. ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಪ್ರತಾಪ್​ ಪೋಥೆನ್ ನಟಿಸಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಿರಿಯ ನಟನ ನಿಧನಕ್ಕೆ (Prathap Pothen Death) ಕಾರಣ ಏನು ಎಂಬುದು ಇನ್ನೂ ಪತ್ತೆ ಆಗಿಲ್ಲ. ಅನಾರೋಗ್ಯದಿಂದ ಅವರು ಕೊನೆಯುಸಿರು ಎಳೆದಿರಬಹುದು ಎಂದು ಊಹಿಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರತಾಪ್​ ಪೋಥೆನ್ ಮೂಲತಃ ಕೇರಳದವರು. ​ನಟನಾಗಿ, ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದರು. ಮಲಯಾಳಂ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿದ ಅವರು ನಂತರ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಬ್ಯುಸಿ ಆದರು. 12 ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ
Image
ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
Image
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
Image
KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
Image
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​

ಪ್ರತಾಪ್​ ಪೋಥೆನ್​ ವೈವಾಹಿಕ ಜೀವನ:

ಬಣ್ಣದ ಲೋಕದಲ್ಲಿ ಜನಪ್ರಿಯತೆ ಪಡೆದಿದ್ದ ಪ್ರತಾಪ್​ ಪೋಥೆನ್​ ಅವರ ಖಾಸಗಿ ಬದುಕಿನಲ್ಲಿ ಅನೇಕ ಏಳು-ಬೀಳುಗಳು ಇದ್ದವು. ನಟಿ ರಾಧಿಕಾ (ರಾಧಿಕಾ ಶರತ್​ಕುಮಾರ್​) ಜೊತೆ ಅವರು 1985ರಲ್ಲಿ ಮದುವೆ ಆದರು. ಒಂದೇ ವರ್ಷದಲ್ಲಿ ಆ ವಿವಾಹ ಮುರಿದುಬಿತ್ತು. 1990ರಲ್ಲಿ ಕಾರ್ಪೊರೇಟ್​ ಕ್ಷೇತ್ರದ ಅಮಲಾ ಸತ್ಯನಾಥ್​ ಅವರೊಂದಿಗೆ ಎರಡನೇ ಮದುವೆ ಆದರು. ಈ ಜೋಡಿಗೆ 1991ರಲ್ಲಿ ಹೆಣ್ಣು ಮಗು ಜನಿಸಿತು. 22 ವರ್ಷಗಳ ಬಳಿಕ ಅಮಲಾ ಮತ್ತು ಪ್ರತಾಪ್​ ಪೋಥೆನ್​ ವಿಚ್ಛೇದನ ಪಡೆದರು.

ನಟನೆ ಮತ್ತು ನಿರ್ದೇಶನಕ್ಕೆ ಸೇರಿ ಒಟ್ಟು ಮೂರು ಬಾರಿ ಪ್ರತಾಪ್​ ಪೋಥೆನ್​ ಅವರು ಫಿಲ್ಮ್​ಫೇರ್​ ಪ್ರಶಸ್ತಿ ಪಡೆದುಕೊಂಡಿದ್ದರು. ಅವರು ನಿರ್ದೇಶಿಸಿದ ‘ಮೀಂದು ಒರು ಕಾದಲ್​ ಕಥೈ’ ಸಿನಿಮಾ ಗಮನ ಸೆಳೆದಿತ್ತು. 1985ರಲ್ಲಿ ಬಿಡುಗಡೆಯಾದ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಪ್ರತಾಪ್​ ಕೊನೆಯದಾಗಿ ಕಾಣಿಸಿಕೊಂಡಿದ್ದು ಮಲಯಾಳಂನ ‘ಸಿಬಿಐ5 ದಿ ಬ್ರೇನ್​’ ಸಿನಿಮಾದಲ್ಲಿ. ಇನ್ನೂ ಹಲವು ಚಿತ್ರಗಳ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದರು. ಅಷ್ಟರಲ್ಲಾಗಲೇ ವಿಧಿವಶರಾಗಿರುವುದು ನೋವಿನ ಸಂಗತಿ.

ಅನೇಕ ಸೆಲೆಬ್ರಿಟಿಗಳು ಪ್ರತಾಪ್​ ಪೋಥೆನ್​ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಪೃಥ್ವಿರಾಜ್​ ಸುಕುಮಾರನ್​, ಪಾರ್ವತಿ ನಾಯರ್​, ವಿಜಯ್​ ಸೇತುಪತಿ ಸೇರಿದಂತೆ ಅನೇಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Published On - 11:42 am, Fri, 15 July 22

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!