AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ವೀಕೆಂಡ್ ಎಪಿಸೋಡಲ್ಲಿ ಸ್ಪರ್ಧಿಗಳಿಗೆ ನೀರಿಳಿಸಿದ ಸುದೀಪ್; ಕಿಚ್ಚನ ಖಡಕ್ ಮಾತಿಗೆ ಪ್ರೇಕ್ಷಕರು ಫಿದಾ

ಸುದೀಪ್​ ಹಾಕುವ ಉಡುಗೆ, ಅವರ ನಿರೂಪಣೆ ಶೈಲಿ, ಖಡಕ್​ ಮಾತುಗಳು, ಹಾಸ್ಯ ಎಲ್ಲವೂ ವೀಕ್ಷಕರಿಗೆ ಇಷ್ಟವಾಗುತ್ತವೆ. ಈ ಬಾರಿ ಅದು ಚೂರು ಹೆಚ್ಚೇ ಇತ್ತು.

ಬಿಗ್ ಬಾಸ್ ವೀಕೆಂಡ್ ಎಪಿಸೋಡಲ್ಲಿ ಸ್ಪರ್ಧಿಗಳಿಗೆ ನೀರಿಳಿಸಿದ ಸುದೀಪ್; ಕಿಚ್ಚನ ಖಡಕ್ ಮಾತಿಗೆ ಪ್ರೇಕ್ಷಕರು ಫಿದಾ
ಸುದೀಪ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 11, 2021 | 3:28 PM

Share

‘ಕನ್ನಡ ಬಿಗ್​ ಬಾಸ್ ಸೀಸನ್​ 8’ರ ಶನಿವಾರದ (ಜುಲೈ 11) ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ನಿರೂಪಣೆ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಟ್ರೋಲ್​ ಪೇಜ್​ಗಳಂತೂ ಸುದೀಪ್​ ಬಗ್ಗೆ ಹೊಗಳಿ ಪೋಸ್ಟ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ಸುದೀಪ್​ ಹೊಗಳೋಕೆ ಕಾರಣ ಏನು? ಅವರು ಮಾಡಿದ ಕೆಲಸವಾದರೂ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ವಾರಾಂತ್ಯದಲ್ಲಿ ಕಿಚ್ಚ ಸುದೀಪ್​ ಬಿಗ್​ ಬಾಸ್​ ನಡೆಸಿಕೊಡುತ್ತಾರೆ. ಅವರ ನಿರೂಪಣೆ ನೋಡಲೆಂದೇ ಸಾಕಷ್ಟು ಜನರು ಬಿಗ್​ ಬಾಸ್​ ನೋಡುತ್ತಾರೆ. ಸುದೀಪ್​ ಹಾಕುವ ಉಡುಗೆ, ಅವರ ನಿರೂಪಣೆ ಶೈಲಿ, ಖಡಕ್​ ಮಾತುಗಳು, ಹಾಸ್ಯ ಎಲ್ಲವೂ ವೀಕ್ಷಕರಿಗೆ ಇಷ್ಟವಾಗುತ್ತವೆ. ಈ ಬಾರಿ ಅದು ಚೂರು ಹೆಚ್ಚೇ ಇತ್ತು. ತಪ್ಪು ಮಾಡಿದ ಸ್ಪರ್ಧಿಗಳಿಗೆ ನೀರಿಳಿಸಿದರು ಸುದೀಪ್​.

ಈ ವಾರದ ಎಪಿಸೋಡ್​ನಲ್ಲಿ ಸಾಕಷ್ಟು ಸ್ಪರ್ಧಿಗಳು ನಾನಾ ರೀತಿಯ ಕಿರಿಕ್​ ಮಾಡಿಕೊಂಡಿದ್ದರು. ಅರವಿಂದ್​ ಅವರು ಚಕ್ರವರ್ತಿ ಚಂದ್ರಚೂಡ್​ ಪ್ರಭಾವಕ್ಕೆ ಒಳಗಾಗಿದ್ದು ಎದ್ದು ಕಾಣುತ್ತಿತ್ತು. ಇದರಿಂದಾಗಿ ಮನೆಯಲ್ಲಿ ಕೆಲ ಜಗಳಗಳು ಕೂಡ ನಡೆದವು. ಇನ್ನು ಪ್ರಶಾಂತ್​ ಸಂಬರಗಿ ತಪ್ಪನ್ನು ಎತ್ತಿ ಹೇಳಿದ್ದಕ್ಕೆ ಕೆಟ್ಟವರಾದರು. ಚಕ್ರವರ್ತಿ ಹಿಂದಿನಿಂದ ಆಡಿದ ಮಾತುಗಳಿಂದ ವೈಷ್ಣವಿ ಮೇಲಿನ ಅಭಿಪ್ರಾಯ ಬದಲಾಗುವ ಸ್ಥಿತಿ ಬಂದೊದಗಿತು. ಇನ್ನು, ದಿವ್ಯಾ ಉರುಡುಗ ಫೇವರಿಸಂ ಮಾಡಿದರು ಎನ್ನುವ ಗಂಭೀರ ಆರೋಪವನ್ನು ಮನೆಯ ಕೆಲ ಸದಸ್ಯರು ಮಾಡಿದರು. ಚಕ್ರವರ್ತಿ ಅವಾಚ್ಯ ಶಬ್ದಗಳನ್ನು ಬಳಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದರು. ಇದೆಲ್ಲವನ್ನೂ ವೇದಿಕೆ ಮೇಲೆ ಮಾತನಾಡಿ ಬಗೆಹರಿಸುವ ಜವಾಬ್ದಾರಿ ಸುದೀಪ್​ ಮೇಲಿತ್ತು.

ಕಿಚ್ಚ ಸುದೀಪ್​ ಅವರು ಈ ಎಲ್ಲಾ ವಿಚಾರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಸಾಮಾನ್ಯ ದಿನಗಳಲ್ಲಿ ಹುಲಿಯಂತೆ ಇರುತ್ತಿದ್ದ ಸ್ಪರ್ಧಿಗಳು ಕಿಚ್ಚ ಸುದೀಪ್​ ಮಾತಿನ ಎದುರು ಮೌನ ವಹಿಸುವಂತಾಗಿತ್ತು. ಅವರು ಕ್ಲಾಸ್​ ತೆಗೆದುಕೊಳ್ಳುತ್ತಿದ್ದ ರೀತಿ, ಪರಿಸ್ಥಿತಿಯನ್ನು ನಿರ್ವಹಣೆ ಮಾಡುತ್ತಿದ್ದ ರೀತಿ ವೀಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಈ ಕಾರಣಕ್ಕೆ ಈ ವಾರದ ಸುದೀಪ್​ ನಿರೂಪಣೆ ವಿಶೇಷವಾಗಿತ್ತು. ಹೀಗಾಗಿ, ಸುದೀಪ್​ ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.

ಇದನ್ನೂ ಓದಿ: ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?

‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ