ಅಕ್ಟೋಬರ್ 1ಕ್ಕೆ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭ? ಸಿಕ್ತು ಹೊಸ ಅಪ್ಡೇಟ್
ಈ ಬಾರಿ ‘ಬಿಗ್ ಬಾಸ್’ ಸಖತ್ ಅದ್ದೂರಿಯಾಗಿ ನಡೆಸಲು ಪ್ಲ್ಯಾನ್ ನಡೆದಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಈ ರಿಯಾಲಿಟಿ ಶೋನ ಪ್ರೋಮೋ ಶೂಟ್ ನಡೆಯಲಿದೆ.

ಸದ್ಯ ಕೊವಿಡ್ ಸಂಪೂರ್ಣ ಕಡಿಮೆ ಆಗಿದೆ. ಈ ಕಾರಣಕ್ಕೆ ಮನರಂಜನಾ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಅದರಲ್ಲೂ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಅಬ್ಬರಿಸುತ್ತಿವೆ. ಕನ್ನಡದಲ್ಲಿ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಶನಿವಾರದಿಂದ (ಆಗಸ್ಟ್ 6) ಆರಂಭಗೊಳ್ಳುತ್ತಿದೆ. ಹಿಂದಿಯಲ್ಲೂ ಈ ರಿಯಾಲಿಟಿ ಶೋ ಶುರುವಾಗಲು ಕ್ಷಣಗಣನೆ ಆರಂಭ ಆಗಿದೆ. ಈ ದಿನಾಂಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಾಹಿನಿಗಳ ಮೂಲಗಳ ಪ್ರಕಾರ ಅಕ್ಟೋಬರ್ 1ರಿಂದ ‘ಹಿಂದಿ ಬಿಗ್ ಬಾಸ್ 16’ (Bigg Boss 16) ಆರಂಭ ಆಗುವ ಸಾಧ್ಯತೆ ಇದೆ.
ಅಕ್ಟೋಬರ್ 1ರಂದು ಹಿಂದಿ ‘ಬಿಗ್ ಬಾಸ್’ ಪ್ರಾರಂಭವಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ‘ಬಿಗ್ ಬಾಸ್’ ರಿಯಾಲಿಟಿ ಶೋ ವೀಕೆಂಡ್ನಲ್ಲಿ ಶುರು ಆಗುತ್ತದೆ. ‘ಹಿಂದಿ ಬಿಗ್ ಬಾಸ್’ ಕೂಡ ಶನಿವಾರವೇ ಪ್ರಾರಂಭ ಆಗಲಿದೆ.
ಈ ಬಾರಿ ‘ಬಿಗ್ ಬಾಸ್’ ಸಖತ್ ಅದ್ದೂರಿಯಾಗಿ ನಡೆಸಲು ಪ್ಲ್ಯಾನ್ ನಡೆದಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಈ ರಿಯಾಲಿಟಿ ಶೋನ ಪ್ರೋಮೋ ಶೂಟ್ ನಡೆಯಲಿದೆ. ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಕಂಡಿತ್ತು. ಆದರೆ, ಈ ಬಾರಿ ‘ಬಿಗ್ ಬಾಸ್’ ನೇರವಾಗಿ ಟಿವಿಯಲ್ಲೇ ಪ್ರಸಾರ ಕಾಣಲಿದೆ.
ಹಿಂದಿ ‘ಬಿಗ್ ಬಾಸ್’ ಆರಂಭಕ್ಕೆ ಇನ್ನೂ ಎರಡು ತಿಂಗಳು ಇದೆ. ಆಗಲೇ ಮನೆಗೆ ತೆರಳುವವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅರ್ಜುನ್ ಬಿಜಿಲಾನಿ, ಸನಾಯಾ ಇರಾನಿ, ದಿವ್ಯಾಂಕಾ ತ್ರಿಪಾಟಿಗೆ ಈಗಾಗಲೇ ಕಲರ್ಸ್ ವಾಹಿನಿಯವರು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಸೆಲೆಬ್ರಿಟಿಗಳಾಗಲಿ, ವಾಹಿನಿಯವರಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಕಳೆದ ಬಾರಿ ‘ಹಿಂದಿ ಬಿಗ್ ಬಾಸ್’ಗೆ ಕಾಡಿನ ಥೀಮ್ ನೀಡಲಾಗಿತ್ತು. ತೇಜಸ್ವಿ ಪ್ರಕಾಶ್ ಅವರು ಕಳೆದ ಸೀಸನ್ ವಿನ್ನರ್ ಆದರು. ಪ್ರತೀಕ್ ಸೆಹಜ್ಪಾಲ್ ಅವರು ರನ್ನರ್ ಅಪ್ ಆದರು. ಈ ಶೋ ಮುಗಿದ ಬಳಿಕ ತೇಜಸ್ವಿ ಪ್ರಕಾಶ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೋಲುವ ಮೂರ್ತಿ; ಪ್ರತಿ ವಿಚಾರಕ್ಕೂ ವಿವರಣೆ ನೀಡಿದ ಕಿಚ್ಚ
ಸಲ್ಮಾನ್ ಖಾನ್ ಸದ್ಯ ‘ಟೈಗರ್ 3’ ಹಾಗೂ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕವೇ ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್’ನಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಸಲ್ಮಾನ್ ಖಾನ್ ಅವರು ಈ ಶೋಗಾಗಿ ಕೋಟಿಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ