ಕನ್ನಡ ಬಿಗ್ ಬಾಸ್​ಗಿಂತ ಮೊದಲೇ ನಡೆಯಲಿದೆ ಹಿಂದಿ ಬಿಗ್ ಬಾಸ್ ಫಿನಾಲೆ

ಕಳೆದ ಮೂರು ತಿಂಗಳಿನಿಂದ ಹಿಂದಿ ಬಿಗ್ ಬಾಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈಗ ಇನ್ನೆರಡು ವಾರಗಳಲ್ಲಿ ಪ್ರೇಕ್ಷಕರಿಗೆ ಈ ಕಾರ್ಯಕ್ರಮದ ವಿಜೇತರು ಯಾರು ಎಂಬ ವಿಚಾರ ಗೊತ್ತಾಗಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಂಭತ್ತು ಮಂದಿ ಸ್ಪರ್ಧಿಗಳಿದ್ದಾರೆ. ಫಿನಾಲೆಗೆ ಕೇವಲ ಐದು ಮಂದಿ ಮಾತ್ರ ಆಯ್ಕೆ ಆಗುವ ಸಾಧ್ಯತೆ ಇದೆ.

ಕನ್ನಡ ಬಿಗ್ ಬಾಸ್​ಗಿಂತ ಮೊದಲೇ ನಡೆಯಲಿದೆ ಹಿಂದಿ ಬಿಗ್ ಬಾಸ್ ಫಿನಾಲೆ
ಸಲ್ಮಾನ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 08, 2025 | 7:56 AM

ಚಿಕ್ಕ ಪರದೆಯ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ಕಾರ್ಯಕ್ರಮದ ಹದಿನೆಂಟನೇ ಸೀಸನ್ ‘ಬಿಗ್ ಬಾಸ್’ ಕಳೆದ ವರ್ಷ ಅಕ್ಟೋಬರ್ 6ರಂದು ಪ್ರಾರಂಭವಾಯಿತು. ಈಗ ಈ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಶೀಘ್ರದಲ್ಲೇ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಆ್ಯಂಕರ್ ಸಲ್ಮಾನ್ ಖಾನ್ ಗ್ರ್ಯಾಂಡ್ ಫಿನಾಲೆಯ ದಿನಾಂಕವನ್ನು ಘೋಷಿಸಿದರು. ‘ಬಿಗ್ ಬಾಸ್ 18′ ರ ಗ್ರ್ಯಾಂಡ್ ಫಿನಾಲೆ ಜನವರಿ 19ರಂದು ನಡೆಯಲಿದೆ ಎಂದರು.

ಕಳೆದ ಮೂರು ತಿಂಗಳಿನಿಂದ ಈ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈಗ ಇನ್ನೆರಡು ವಾರಗಳಲ್ಲಿ ಪ್ರೇಕ್ಷಕರಿಗೆ ಈ ಕಾರ್ಯಕ್ರಮದ ವಿಜೇತರು ಸಿಗುತ್ತಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಂಭತ್ತು ಮಂದಿ ಸ್ಪರ್ಧಿಗಳಿದ್ದಾರೆ. ಈ ಪೈಕಿ ಸ್ಪರ್ಧಿಗಳು ಟ್ರೋಫಿಗಳು ಮತ್ತು ಬೃಹತ್ ಬಹುಮಾನದ ಹಣವನ್ನು ಗೆಲ್ಲಲು ಪೈಪೋಟಿ ನಡೆಸುತ್ತಿದ್ದಾರೆ. ಕನ್ನಡ ಬಿಗ್ ಬಾಸ್​ ಆರಂಭ ಆದ ಬಳಿಕ ಹಿಂದಿ ಬಿಗ್ ಬಾಸ್ ಆರಂಭ ಆಗಿತ್ತು. ಈಗ ಕನ್ನಡ ಬಿಗ್ ಬಾಸ್​ಗಿಂತ ಒಂದು ವಾರ ಮೊದಲೇ ಫಿನಾಲೆ ನಡೆಯುತ್ತಿದೆ.

ಕರಣ್ವೀರ್ ಮೆಹ್ರಾ, ವಿವಿಯನ್ ಡಿಸೇನಾ, ಅವಿನಾಶ್ ಮಿಶ್ರಾ, ಇಶಾ ಸಿಂಗ್, ರಜತ್ ದಲಾಲ್, ಚಾಹತ್ ಪಾಂಡೆ, ಶಿಲ್ಪಾ ಶಿರೋಡ್ಕರ್, ಚುಮ್ ದರಾಂಗ್ ಮತ್ತು ಶ್ರುತಿಕಾ ಅರ್ಜುನ್ ಪ್ರಸ್ತುತ ‘ಬಿಗ್ ಬಾಸ್ 18′ ಮನೆಯಲ್ಲಿ ಸ್ಪರ್ಧಿಗಳಾಗಿದ್ದಾರೆ. ಈ ಒಂಭತ್ತು ಸ್ಪರ್ಧಿಗಳಲ್ಲಿ ಕರಣ್ವೀರ್ ಅಥವಾ ವಿವಿಯನ್ ಶೋ ಗೆಲ್ಲುವ ಸಾಧ್ಯತೆ ಹೆಚ್ಚು. ಮೊದಲ ಸಂಚಿಕೆಯಿಂದಲೇ ಕರಣ್ವೀರ್ ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಹಾಗಾಗಿ ವಿವಿಯನ್ ದೇಸೇನಾ ಮತ್ತು ರಜತ್ ದಲಾಲ್ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಈ ವಾರ ಯಾರಿಗೆ ತೆರೆಯಲಿದೆ ಬಿಗ್ ಬಾಸ್ ಬಾಗಿಲು? ಔಟ್ ಆಗೋ ಸ್ಪರ್ಧಿ ಇವರೇನಾ?

‘ಬಿಗ್ ಬಾಸ್ 18′ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಕಲರ್ಸ್ ಟಿವಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಅಂತೆಯೇ, ಪ್ರೇಕ್ಷಕರು ಜಿಯೋ ಸಿನಿಮಾದ OTT ಪ್ಲಾಟ್‌ಫಾರ್ಮ್‌ನಲ್ಲಿ ಈ ಗ್ರಾಂಡ್ ಫಿನಾಲೆಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಗ್ರ್ಯಾಂಡ್ ಫಿನಾಲೆ ಎಪಿಸೋಡ್‌ನ ನಿಖರವಾದ ಸಮಯವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಕಳೆದ ಕೆಲವು ಸೀಸನ್‌ಗಳ ಪ್ರಕಾರ, ಈ ವರ್ಷವೂ ಸಹ ಗ್ರ್ಯಾಂಡ್ ಫಿನಾಲೆ ರಾತ್ರಿ 9 ಗಂಟೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಮುಂದಿನ ಮೂರು ಗಂಟೆಗಳವರೆಗೆ ಇರುತ್ತದೆ. ಮಧ್ಯರಾತ್ರಿ 12 ಗಂಟೆಗೆ ಆತಿಥೇಯ ಸಲ್ಮಾನ್ ಖಾನ್ ಅಂತಿಮ ಇಬ್ಬರು ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಕರೆದು ವಿಜೇತರ ಹೆಸರನ್ನು ಘೋಷಿಸುತ್ತಾರೆ. ಈ ಸೀಸನ್ ವಿಜೇತರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ‘ಬಿಗ್ ಬಾಸ್ 18′ ನಲ್ಲಿ ಒಟ್ಟು ಹದಿನಾಲ್ಕು ಸ್ಪರ್ಧಿಗಳು ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?