AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲ್​ ಸ್ಮಿತ್ ಭಾರತಕ್ಕೆ ಕಾಲಿಟ್ಟಿದ್ದೇಕೆ? ಇದಕ್ಕಿದೆ ಕಪಾಳಮೋಕ್ಷದ ಕನೆಕ್ಷನ್

ಆಸ್ಕರ್ ಸಮಾರಂಭದಲ್ಲಿ ವಿಲ್​ ಸ್ಮಿತ್ ಮಾಡಿಕೊಂಡ ವಿವಾದದಿಂದ 10 ವರ್ಷ ಬ್ಯಾನ್​ಗೆ ಒಳಗಾಗಿದ್ದಾರೆ. ಅವರು ಥೆರಪಿಗೆ ಒಳಗಾಗಲು ಅವರು ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.

ವಿಲ್​ ಸ್ಮಿತ್ ಭಾರತಕ್ಕೆ ಕಾಲಿಟ್ಟಿದ್ದೇಕೆ? ಇದಕ್ಕಿದೆ ಕಪಾಳಮೋಕ್ಷದ ಕನೆಕ್ಷನ್
ವಿಲ್ ಸ್ಮಿತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 06, 2022 | 6:29 PM

ಆಸ್ಕರ್ ಸಮಾರಂಭದಲ್ಲಿ (Oscar Award) ಪತ್ನಿಯ ಬಗ್ಗೆ ಜೋಕ್ ಮಾಡಿದ ಕಾಮಿಡಿ ನಟ ಕ್ರಿಸ್ ರಾಕ್ (Chris Rock) ಕೆನ್ನೆಗೆ ಬಾರಿಸಿದ್ದರು ವಿಲ್ ಸ್ಮಿತ್. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ನಂತರ ಅಕಾಡೆಮಿ ಈ ವಿಚಾರವಾಗಿ ಸಭೆ ನಡೆಸಿ, 10 ವರ್ಷ ವಿಲ್​ ಸ್ಮಿತ್ ಅವರನ್ನು ಅಕಾಡೆಮಿಯಿಂದ ಹೊರಗೆ ಇಡುವ ನಿರ್ಧಾರಕ್ಕೆ ಬಂದಿದೆ. ಅವರ ವೃತ್ತಿ ಜೀವನಕ್ಕೆ ಇದು ಕಪ್ಪು ಚುಕ್ಕೆ ಆಗಿದೆ. ಕಳೆದ ತಿಂಗಳು ವಿಲ್​ ಸ್ಮಿತ್ ಅವರು (Will Smith) ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದರು. ನಗುನಗುತ್ತಾ ಕಾರಿನಿಂದ ಇಳಿಯುತ್ತಿರುವ ಫೋಟೋ ವೈರಲ್ ಆಗಿತ್ತು . ಅವರು ಭಾರತಕ್ಕೆ ಬಂದಿದ್ದು ಏಕೆ ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ.

ವಿಲ್​ ಸ್ಮಿತ್​ಗೂ  ಭಾರತಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. 2019ರಲ್ಲಿ ಅವರು ಭಾರತಕ್ಕೆ   ಆಗಮಿಸಿದ್ದರು. ಇದಾದ ಬಳಿಕ ಕೊವಿಡ್ ಕಾಣಿಸಿಕೊಂಡಿತು. ಎರಡು ವರ್ಷಗಳ ಕಾಲ ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಈಗ ಎಲ್ಲವೂ ಸರಿಹಾದಿಗೆ ಬರುತ್ತಿದೆ. ಆದರೆ, ವಿಲ್ ಸ್ಮಿತ್ ಜೀವನದಲ್ಲಿ ಸಂಕಷ್ಟ ಎದುರಾಗಿದೆ. ಆಸ್ಕರ್ ಸಮಾರಂಭದಲ್ಲಿ ಅವರು ಮಾಡಿಕೊಂಡ ವಿವಾದದಿಂದ 10 ವರ್ಷ ಬ್ಯಾನ್​ಗೆ ಒಳಗಾಗಿದ್ದಾರೆ. ಇದಾದ ಬಳಿಕ ವಿಲ್​ ಸ್ಮಿತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಭಾರತಕ್ಕೆ ಬಂದಿಳಿದಿದ್ದರು. ಥೆರಪಿಗೆ ಒಳಗಾಗಲು ಅವರು ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.

ಆಸ್ಕರ್ ವೇಳೆ ನಡೆದ ಘಟನೆಯಿಂದ ವಿಲ್​ ಸ್ಮಿತ್​ ವಿಚಲಿತಗೊಂಡಿದ್ದಾರೆ. ಹೀಗಾಗಿ, ಅವರು ಭಾರತದಲ್ಲಿ ಥೆರಪಿಗೆ ಒಳಗಾಗಲು ಬಂದಿದ್ದಾರೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ
Image
ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​; ಆಸ್ಕರ್​ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್​
Image
ಆಸ್ಕರ್​ ವೇದಿಕೆಯಲ್ಲಿ ನಟ ಕ್ರಿಸ್​ ರಾಕ್​ ಕೆನ್ನೆಗೆ ಹೊಡೆದ ವಿಲ್​ ಸ್ಮಿತ್​ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?
Image
ಆಸ್ಕರ್ ವೇದಿಕೆಯ ಕಪಾಳಮೋಕ್ಷಕ್ಕೆ ಅಲೋಪೆಸಿಯಾ ಕಾರಣ?! ವಿಲ್ ಸ್ಮಿತ್ ಪತ್ನಿಯ ಕೂದಲು ಹಾಗಿರುವುದೇಕೆ?
Image
ಪತ್ನಿ ಬಗ್ಗೆ ಜೋಕ್​ ಮಾಡಿದ್ದಕ್ಕೆ ಆಸ್ಕರ್​ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್​ ಸ್ಮಿತ್​; ವಿಡಿಯೋ ವೈರಲ್​

ವಿಲ್ ಸ್ಮಿತ್ ಭಾರತಕ್ಕೆ ಬಂದಿದ್ದು ಇದೇ ಮೊದಲೇನಲ್ಲ. 2019ರಲ್ಲಿ ವಿಲ್​ ಸ್ಮಿತ್ ಅವರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ‘ಫೇಸ್​ಬುಕ್ ವಾಚ್ ಸೀರಿಸ್’ ಉದ್ದೇಶದಿಂದ ಅವರು ಇಲ್ಲಿಗೇ ಭೇಟಿ ನೀಡಿದ್ದರು. ‘ದೇವರು ಅನುಭವದ ಮೂಲಕ ಕಲಿಸುತ್ತಾನೆ ಎಂದು ನನ್ನ ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಭಾರತಕ್ಕೆ ಭೇಟಿ ನೀಡುವುದು ಮತ್ತು ಇಲ್ಲಿನ ಬಣ್ಣಗಳು, ಜನರು ಮತ್ತು ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವುದರಿಂದ ನನ್ನ, ನನ್ನ ಕಲೆಯ ಹೊಸ ತಿಳುವಳಿಕೆಯು ಜಾಗೃತಗೊಂಡಿದೆ ಎಂದು’ ಅವರು ಹೇಳಿದ್ದರು. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದಲ್ಲಿ ಅವರು ಅತಿಥಿ ಮಾಡಿದ್ದರು. ಇದರ ಶೂಟಿಂಗ್​ಗಾಗಿ ಅವರು ಮುಂಬೈಗೆ ಬಂದಿದ್ದರು. ಭಾರತದ ಹಲವು ಸ್ಟಾರ್​ಗಳು ವಿಲ್ ಸ್ಮಿತ್ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ವಿವಾದದ ಬಳಿಕ ಈ ಫೋಟೋಗಳು ವೈರಲ್ ಆಗಿದ್ದವು.

ವಿಲ್​ ಸ್ಮಿತ್​ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪಲಿಲ್ಲ:

ಈ ಬಾರಿಯ ಆಸ್ಕರ್​ ವೇದಿಕೆಯಲ್ಲಿ ವಿಲ್​ ಸ್ಮಿತ್ ಅವರಿಗೆ ಸಿಹಿ ಮತ್ತು ಕಹಿ ಎರಡೂ ಅನುಭವ ಆಯಿತು. ಪತ್ನಿಯ ಬಗ್ಗೆ ಕಾಮಿಡಿ ಮಾಡಿದ ಕ್ರಿಸ್​ ರಾಕ್​ಗೆ ಕಪಾಳಮೋಕ್ಷ ಮಾಡಿದ ನಂತರ ವಿಲ್​ ಸ್ಮಿತ್ ಅವರು ವೇದಿಕೆ ಏರಿ ‘ಅತ್ಯುತ್ತಮ ನಟ’ ಆಸ್ಕರ್​ ಪ್ರಶಸ್ತಿ ಪಡೆದುಕೊಂಡರು. ‘ಕಿಂಗ್​ ರಿಚರ್ಡ್​’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಅವರು ಎಲ್ಲರಲ್ಲೂ ಕ್ಷಮೆ ಕೇಳಿದರು. ಕೆನ್ನೆಗೆ ಹೊಡೆದಿದ್ದಕ್ಕೆ ಅವರು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದರು. ನಂತರ ಅಕಾಡೆಮಿ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದರು. ಆದರೂ ಕೂಡ ವಿಲ್​ ಸ್ಮಿತ್​ ಅವರಿಗೆ ಶಿಕ್ಷೆ ತಪ್ಪಲಿಲ್ಲ.

 

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು