AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ray Liotta Passes Away: ನಿದ್ರೆ ಮಾಡುತ್ತಲೇ ಚಿರನಿದ್ರೆಗೆ ಜಾರಿದ ಖ್ಯಾತ ನಟ ರೇ ಲಿಯೊಟ್ಟಾ

Ray Liotta death: ‘ಗುಡ್​ಫೆಲಾಸ್’ ಖ್ಯಾತಿಯ ಅಮೇರಿಕನ್ ಮೂಲದ ಖ್ಯಾತ ನಟ ಮತ್ತು ನಿರ್ಮಾಪಕ ರೇ ಲಿಯೊಟ್ಟಾ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

Ray Liotta Passes Away: ನಿದ್ರೆ ಮಾಡುತ್ತಲೇ ಚಿರನಿದ್ರೆಗೆ ಜಾರಿದ ಖ್ಯಾತ ನಟ ರೇ ಲಿಯೊಟ್ಟಾ
ರೇ ಲಿಯೊಟ್ಟಾImage Credit source: AP
TV9 Web
| Edited By: |

Updated on:May 27, 2022 | 10:31 AM

Share

ಅಮೇರಿಕನ್ ಮೂಲದ ಖ್ಯಾತ ನಟ ಮತ್ತು ನಿರ್ಮಾಪಕ ರೇ ಲಿಯೊಟ್ಟಾ (Ray Liotta) ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಗ್ಯಾಂಗ್​ಸ್ಟರ್ ಬಯೋಪಿಕ್​ ಆಗಿದ್ದ ‘ಗುಡ್​ಫೆಲಾಸ್’ (Goodfellas)ನಲ್ಲಿ ‘ಹೆನ್ರಿ ಹಿಲ್’ ಪಾತ್ರದ ಮೂಲಕ ಲಿಯೊಟ್ಟಾ ಅಪಾರ ಜನಪ್ರಿಯತೆ ಸಂಪಾದಿಸಿದ್ದರು. ಅವರ ಪ್ರತಿನಿಧಿ ಹಾಲಿವುಡ್​ ರಿಪೋರ್ಟರ್​ಗೆ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅದರಲ್ಲಿ ತಿಳಿಸಿರುವ ಪ್ರಕಾರ, ‘ಲಿಯೋಟ್ಟಾ ಅವರು ಡೊಮಿನಿಕನ್ ರಿಪಬ್ಲಿಕ್​ನಲ್ಲಿ ನಡೆಯುತ್ತಿರುವ ಡೇಂಜರಸ್​ ವಾಟರ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಿದ್ರೆ ಮಾಡುತ್ತಿರುವಾಗ ಅವರು ನಿಧನರಾಗಿದ್ದಾರೆ’ ಎಂದು ತಿಳಿಸಲಾಗಿದೆ. ಲಿಯೊಟ್ಟಾ ಪುತ್ರಿ ಹಾಗೂ ಕುಟುಂಬವನ್ನು ಅಗಲಿದ್ದಾರೆ.

1954ರ ಡಿಸೆಂಬರ್ 18ರಂದು ನ್ಯೂಯಾರ್ಕ್​ನಲ್ಲಿ ಜನಿಸಿದ್ದ ಲಿಯೊಟ್ಟಾ ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ನಂತರ 6 ತಿಂಗಳಿದ್ದಾಗ ದಂಪತಿಯೋರ್ವರು ಲಿಯೊಟ್ಟಾರನ್ನು ದತ್ತು ಪಡೆದಿದ್ದರು. ದೊಡ್ಡವರಾದ ನಂತರ ತಮ್ಮ ಮೂಲ ಪೋಷಕರನ್ನು ಪತ್ತೆಹಚ್ಚಲು ಮುಂದಾಗಿದ್ದ ನಟ, ಕೊನೆಗೂ ತಮ್ಮ ಮೂಲ ಪೋಷಕರು ಸ್ಕಾಟ್ಲಾಂಡ್​ನವರು ಎಂಬುದನ್ನು ಕಂಡುಕೊಂಡಿದ್ದರು. 1983ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ನಟ ಇಲ್ಲಿಯವರೆಗೂ ಸಕ್ರಿಯರಾಗಿ ನಟಿಸುತ್ತಿದ್ದರು.

‘ದಿ ರ್ಯಾಟ್ ಪ್ಯಾಕ್’, ‘ಅನ್​ಫರ್ಗೆಟ್ಟೇಬಲ್ ಕಾಪ್ ಲ್ಯಾಂಡ್’, ‘ಫೀನಿಕ್ಸ್’ ಮೊದಲಾದ ಚಿತ್ರಗಳಲ್ಲಿನ ನಟನೆಯಿಂದ ರೇ ಲಿಯೊಟ್ಟಾ ಗಮನ ಸೆಳೆದಿದ್ದರು. ಕಿರುತೆರೆಯಲ್ಲೂ ಅವರು ಕಾಣಿಸಿಕೊಂಡಿದ್ದರು. ಲಿಯೊಟ್ಟಾ ಅವರು ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಸೇರಿದಂತೆ ಹಲವಾರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ
Image
ವಿಷ್ಣುವರ್ಧನ್ ಸ್ಮಾರಕದ ಕೆಲಸ ಪೂರ್ಣಗೊಳ್ಳೋದು ಯಾವಾಗ? ಮಾಹಿತಿ ನೀಡಿದ ಅನಿರುದ್ಧ್​
Image
ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ಆಸ್ಕರ್ ವಿಜೇತ ನಟನಿಗೆ ಹೆಚ್ಚಾಯ್ತು ಸಂಕಷ್ಟ
Image
Viral Video: 50ರ ಹುಟ್ಟುಹಬ್ಬದ ಸಂಭ್ರಮಾಚರಣೆ, ನಿರ್ಮಾಪಕ ಕರಣ್ ಜೋಹರ್ ಡಾನ್ಸ್ ವಿಡಿಯೋ ವೈರಲ್
Image
Amreen Bhat: ಇಬ್ಬರು ಉಗ್ರರ ಹತ್ಯೆ; ಕಿರುತೆರೆ ಕಲಾವಿದೆ ಅಮ್ರೀನ್ ಭಟ್ ಪ್ರಕರಣವನ್ನು 24 ಗಂಟೆಗಳ ಒಳಗೆ ಭೇದಿಸಿದ ಪೊಲೀಸರು

ರೇ ಲಿಯೊಟ್ಟಾ ನಟಿಸಿರುವ ಹಲವು ಚಿತ್ರಗಳ ಕೆಲಸಗಳು ನಡೆಯುತ್ತಿವೆ. ‘ಕೊಕೇನ್ ಬಿಯರ್’ ಚಿತ್ರ 2023ರಲ್ಲಿ ತೆರೆಕಾಣುವುದಾಗಿ ಘೋಷಿಸಿದೆ. ಇದಲ್ಲದೇ ಇನ್ನೂ ನಾಲ್ಕು ಚಿತ್ರಗಳಲ್ಲಿ ಲಿಯೊಟ್ಟಾ ನಟಿಸಿದ್ದು, ಅವುಗಳ ಕೆಲಸಗಳು ನಡೆಯುತ್ತಿವೆ. ರೇ ಲಿಯೊಟ್ಟಾ ನಿಧನಕ್ಕೆ ಹಾಲಿವುಡ್ ಕಂಬನಿ ಮಿಡಿದಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 27 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ