‘RRR ಹೊಗಳೋಕೆ ಕ್ಯಾಮೆರಾನ್​, ಸ್ಪೀಲ್​ಬರ್ಗ್​ ಹಣ ತಗೊಂಡ್ರಾ?’: ಸಿಟ್ಟಿನಿಂದ ಪ್ರಶ್ನಿಸಿದ ಹಿರಿಯ ನಿರ್ದೇಶಕ

K Raghavendra Rao | Tammareddy Bharadwaja: ‘ಆರ್​ಆರ್​ಆರ್​’ ಸಿನಿಮಾ ವಿರುದ್ಧ ತಮ್ಮಾರೆಡ್ಡಿ ಭಾರದ್ವಜ ಅವರು ಕಟು ಟೀಕೆ ಮಾಡಿದ್ದಾರೆ. ಆದರೆ ಅವರ ಮಾತುಗಳಿಗೆ ಕೆ. ರಾಘವೇಂದ್ರ ರಾವ್​ ಅವರು ವಿರೋಧ ವ್ಯಕ್ತಪಡಿಸಿ​ದ್ದಾರೆ.

‘RRR ಹೊಗಳೋಕೆ ಕ್ಯಾಮೆರಾನ್​, ಸ್ಪೀಲ್​ಬರ್ಗ್​ ಹಣ ತಗೊಂಡ್ರಾ?’: ಸಿಟ್ಟಿನಿಂದ ಪ್ರಶ್ನಿಸಿದ ಹಿರಿಯ ನಿರ್ದೇಶಕ
ಸ್ಟೀವನ್​ ಸ್ಪೀಲ್​ಬರ್ಗ್​, ಜೇಮ್ಸ್​ ಕ್ಯಾಮೆರಾನ್​, ಜೂ. ಎನ್​ಟಿಆರ್​, ರಾಮ್​ ಚರಣ್​
Follow us
ಮದನ್​ ಕುಮಾರ್​
|

Updated on:Mar 10, 2023 | 10:45 AM

ಈ ಬಾರಿ ಭಾರತಕ್ಕೆ ಆಸ್ಕರ್​ ಪ್ರಶಸ್ತಿ (Oscar Awards) ಬಂದೇ ಬರುತ್ತದೆ ಎಂದು ಸಿನಿಪ್ರಿಯರು ನಿರೀಕ್ಷಿಸಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ (RRR Movie) ‘ನಾಟು ನಾಟು..’ ಹಾಡು ಆಸ್ಕರ್​ಗೆ ನಾಮಿನೇಟ್​ ಆಗಿದೆ. ಈಗಾಗಲೇ ‘ಗೋಲ್ಡನ್​ ಗ್ಲೋಬ್​’ ಮುಂತಾದ ಪ್ರಶಸ್ತಿಗಳನ್ನು ಗೆದ್ದಿರುವ ಈ ಹಾಡು 95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲೂ ಮೋಡಿ ಮಾಡಲಿದೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಆದರೆ ಕೆಲವರು ಈ ಚಿತ್ರದ ಬಗ್ಗೆ ತಕರಾರು ತೆಗೆದಿದ್ದಾರೆ. 80 ಕೋಟಿ ರೂಪಾಯಿ ಸುರಿದು ಪ್ರಚಾರ ಮಾಡುವ ಮೂಲಕ ಆಸ್ಕರ್​ ಪಡೆಯಲು ರಾಜಮೌಳಿ ಪ್ರಯತ್ನಿಸುತ್ತಿದ್ದಾರೆ ಎಂದು ತೆಲುಗಿನ ನಿರ್ಮಾಪಕ ತಮ್ಮಾರೆಡ್ಡಿ ಭಾರಧ್ವಜ​ (Tammareddy Bharadwaja) ಅವರು ಆರೋಪಿಸಿದ್ದಾರೆ. ಆದರೆ ಅವರ ಮಾತನ್ನು ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್​ ಅವರು ತಳ್ಳಿಹಾಕಿದ್ದಾರೆ.

ಆಸ್ಕರ್​ನಲ್ಲಿ ‘ಆರ್​ಆರ್​ಆರ್​’ ಚಿತ್ರವನ್ನು ಪ್ರಚಾರ ಮಾಡಲು 80 ಕೋಟಿ ರೂಪಾಯಿ ಖರ್ಚಾಗಿದೆ ಹಾಗೂ ಆ ದುಡ್ಡಿನಲ್ಲಿ 8 ಸಿನಿಮಾ ಮಾಡಬಹುದಿತ್ತು ಎಂಬುದು ತಮ್ಮಾರೆಡ್ಡಿ ಭಾರಧ್ವಜ ಅವರ ವಾದ. ಇದನ್ನು ಕೇಳಿ ಎಸ್​.ಎಸ್​. ರಾಜಮೌಳಿ ಅವರ ಗುರು ಕೆ. ರಾಘವೇಂದ್ರ ರಾವ್​ ಅವರಿಗೆ ಸಿಟ್ಟು ಬಂದಿದೆ. ಹಾಗಾಗಿ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮಾರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ
Image
‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
Image
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Image
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
Image
RRR: ಜಪಾನ್​ನಲ್ಲಿ ಮೊದಲ ದಿನವೇ 1 ಕೋಟಿ ರೂಪಾಯಿ ಗಳಿಸಿದ ‘ಆರ್​ಆರ್​ಆರ್​’: ಜೋರಾಗಿದೆ ಕ್ರೇಜ್​

ಕೆ. ರಾಘವೇಂದ್ರ ರಾವ್ ಹೇಳಿದ್ದೇನು?

‘ನಲ್ಮೆಯ ಸ್ನೇಹಿತ ಭಾರದ್ವಜ ಅವರೇ.. ತೆಲುಗು ಸಿನಿಮಾ, ಸಾಹಿತ್ಯ, ನಟರು ಮತ್ತು ನಿರ್ದೇಶಕರಿಗೆ ಆರ್​ಆರ್​ಆರ್​ ಚಿತ್ರವು ಕೀರ್ತಿ ತಂದುಕೊಟ್ಟಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆಪಡಬೇಕು. ಖರ್ಚು ಮಾಡಿದ ಹಣದ ಬಗ್ಗೆ ನಿಮ್ಮ ಬಳಿ ಲೆಕ್ಕ ಇದೆಯಾ? ಲೆಜೆಂಡರಿ ನಿರ್ದೇಶಕರಾದ ಜೇಮ್ಸ್​ ಕ್ಯಾಮೆರಾನ್​ ಮತ್ತು ಸ್ಟೀವಲ್​ ಸ್ಪೀಲ್​ಬರ್ಗ್​ ಅವರು ಹಣ ತೆಗೆದುಕೊಂಡು ಆರ್​ಆರ್​ಆರ್​ ಸಿನಿಮಾವನ್ನು ಹೊಗಳಿದರು ಎಂಬುದು ನಿಮ್ಮ ಅಭಿಪ್ರಾಯವೇ?’ ಎಂದು ಕೆ. ರಾಘವೇಂದ್ರ ರಾವ್​ ಅವರು ಟ್ವೀಟ್​ ಮಾಡಿದ್ದಾರೆ.

ವಾದ-ವಿವಾದ ಏನೇ ಇರಲಿ, ಆಸ್ಕರ್​ಗೆ ನಾಮಿನೇಟ್​ ಆಗುವ ಮೂಲಕ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಸಖತ್​ ಕ್ರೇಜ್​ ಹುಟ್ಟುಹಾಕಿದೆ. ಈ ಹಾಡಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್​ ಗೋಪಾಲ್​ ವರ್ಮಾ ಹೇಳಿಕೆ

ಭಾರತದಲ್ಲಿ ಮಾರ್ಚ್​ 13ರಂದು ಮುಂಜಾನೆ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಸಾರ ಆಗಲಿದೆ. ‘ಆರ್​ಆರ್​ಆರ್​’ ತಂಡದವರು ಈಗಾಗಲೇ ಲಾಸ್​ ಏಂಜಲಿಸ್​ಗೆ ತೆರಳಿದ್ದಾರೆ. ಈ ಬಾರಿ ಆಸ್ಕರ್​ ಟ್ರೋಫಿ ನೀಡಲು ದೀಪಿಕಾ ಪಡುಕೋಣೆ ಅವರಿಗೆ ಅವಕಾಶ ಸಿಕ್ಕಿದೆ. ಅವರು ಕೂಡ ಈಗಾಗಲೇ ಅಮೆರಿಕಕ್ಕೆ ತೆರಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:45 am, Fri, 10 March 23

ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?