The Lion King: ಮತ್ತೆ ಬರುತ್ತಿದೆ ‘ದಿ ಲಯನ್ ಕಿಂಗ್’: ಟ್ರೈಲರ್ ಬಿಡುಗಡೆ, ಶಾರುಖ್-ಅಬ್​ರಾಮ್ ಧ್ವನಿಯೂ ಇದೆ

The Lion King: ‘ದಿ ಲಯನ್ ಕಿಂಗ್’ ಹಾಲಿವುಡ್​ನ ಕಾರ್ಟೂನ್ ಸಿನಿಮಾ ಇತಿಹಾಸದ ಅತ್ಯುತ್ತಮ ಸಿನಿಮಾ. ಇದೀಗ ಈ ಸಿನಿಮಾದ ಪ್ರೀಕ್ವೆಲ್ ತೆರೆಗೆ ಬರುತ್ತಿದ್ದು, ಸಿನಿಮಾಕ್ಕೆ ‘ಮುಫಾಸಾ: ದಿ ಲಯನ್ ಕಿಂಗ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

The Lion King: ಮತ್ತೆ ಬರುತ್ತಿದೆ ‘ದಿ ಲಯನ್ ಕಿಂಗ್’: ಟ್ರೈಲರ್ ಬಿಡುಗಡೆ, ಶಾರುಖ್-ಅಬ್​ರಾಮ್ ಧ್ವನಿಯೂ ಇದೆ
Follow us
ಮಂಜುನಾಥ ಸಿ.
|

Updated on:Aug 12, 2024 | 10:22 PM

‘ದಿ ಲಯನ್ ಕಿಂಗ್’ ಹಾಲಿವುಡ್​ನ ಕಾರ್ಟೂನ್ ಸಿನಿಮಾ ಇತಿಹಾಸದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಸಿನಿಮಾ ಇದು. ‘ದಿ ಲಯನ್ ಕಿಂಗ್’ ಸಿನಿಮಾ ಆಧರಿಸಿ ಆ ನಂತರ ಹಲವು ಸಿನಿಮಾಗಳು ಹಲವು ಭಾಷೆಗಳಲ್ಲಿ ಬಂದಿವೆ. ಕನ್ನಡದ ಸೂಪರ್ ಹಿಟ್ ಸಿನಿಮಾ ದರ್ಶನ್ ನಟನೆಯ ‘ಸಾರಥಿ’ ಸಹ ‘ದಿ ಲಯನ್ ಕಿಂಗ್’ ಸಿನಿಮಾವನ್ನೇ ಆಧರಿಸಿದೆ. ಇದನ್ನು ಸ್ವತಃ ನಟ ದರ್ಶನ್ ಒಮ್ಮೆ ಹೇಳಿಕೊಂಡಿದ್ದರು. ಐತಿಹಾಸಿಕ ‘ದಿ ಲಯನ್ ಕಿಂಗ್’ ಸಿನಿಮಾದ ಪ್ರೀಕ್ವೆಲ್ ಬರಲಿದ್ದು, ಇದರ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ವಿಶೇಷವೆಂದರೆ ಈ ಟ್ರೈಲರ್​ನಲ್ಲಿ ಶಾರುಖ್ ಖಾನ್ ಹಾಗೂ ಅವರ ಪುತ್ರ ಅಬ್​ರಾಮ್ ಧ್ವನಿ ಸಹ ಇದೆ.

‘ದಿ ಲಯನ್ ಕಿಂಗ್’ ಸಿನಿಮಾ ಸಾಂಬಾ ಹೆಸರಿನ ಮರಿ ಸಿಂಹ ತನ್ನವರಿಂದ ದೂರಾಗಿ ಹೋಗುವ ಹಾಗೂ ಆ ನಂತರ ಮರಳಿ ಬಂದು ಕಾಡಿನ ರಾಜನ ಸ್ಥಾನಕ್ಕಾಗಿ ಹೋರಾಡಿ ಗೆಲ್ಲುವ ಕತೆಯನ್ನು ಒಳಗೊಂಡಿತ್ತು. ಆದರೆ ಈಗ ಬರಲಿರುವ ಸಿನಿಮಾ ‘ದಿ ಲಯನ್ ಕಿಂಗ್’ ಸಿನಿಮಾದ ಕತೆ ನಡೆಯುವ ಸಮಯಕ್ಕಿಂತಲೂ ಹಿಂದಿನ ಸಮಯದ್ದು, ಅಂದರೆ ಸಿಂಬಾದ ತಂದೆ ಯೋಧ ಮುಫಾಸಾನ ಕತೆಯನ್ನು ಒಳಗೊಂಡಿದೆ.

ಇದನ್ನೂ ಓದಿ:ಮಗನ ಧ್ವನಿ ಆದ್ಭುತವಾಗಿದೆ ಅಂತ ದಿ ಲಯನ್ ಕಿಂಗ್ ಸಿನಿಮಾವನ್ನು ಹಿಂದಿಗೆ ಡಬ್ ಮಾಡುವಾಗ ಶಾ ರುಖ್ ಖಾನ್ ಹೇಳಿದ್ದರು!

‘ದಿ ಲಯನ್ ಕಿಂಗ್’ ಸಿನಿಮಾದಲ್ಲಿ ಮುಫಾಸಾ ಅನ್ನು ಯೋಧನ ರೀತಿ ಚಿತ್ರಿಸಲಾಗಿದೆ. ಆದರೆ ಅಧಿಕಾರದ ಆಸೆಗೆ ಮುಫಾಸನ ಸಹೋದರ ಸ್ಕಾರ್ ಮುಫಾಸಾ ಅನ್ನು ಮೋಸದಿಂದ ಕೊಲ್ಲುವುದಲ್ಲದೆ ಸಿಂಬ ಅನ್ನು ಏಕಾಂಗಿ ಮಾಡುತ್ತಾನೆ. ಆದರೆ ಈಗ ಬರುತ್ತಿರುವ ಸಿನಿಮಾ ಮುಫಾಸಾ ಕುರಿತಾದ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾದ ಹೆಸರು ಸಹ ‘ಮುಫಾಸಾ; ದಿ ಲಯನ್ ಕಿಂಗ್’. ಈ ಮೊದಲು ಬಿಡುಗಡೆ ಆಗಿದ್ದ ‘ದಿ ಲಯನ್ ಕಿಂಗ್’ ಸಿನಿಮಾನಲ್ಲಿ ಸಿಂಬ ತಪ್ಪಿಸಿಕೊಂಡು ಒಂಟಿ ಆಗಿರುತ್ತಾನೆ. ಹಾಗೆಯೇ ‘ಮುಫಾಸಾ’ ಸಿನಿಮಾದಲ್ಲಿಯೂ ಸಹ ಮುಫಾಸಾ ಒಟಿಯಾಗಿರುತ್ತಾನೆ.

ವಿಶೇಷವೆಂದರೆ ‘ದಿ ಲಯನ್ ಕಿಂಗ್’ ಸಿನಿಮಾದಲ್ಲಿ ಮುಫಾಸಾ ಹಾಗೂ ಸ್ಕಾರ್ ಪರಸ್ಪರ ದ್ವೇಷಿಗಳಾಗಿರುತ್ತಾರೆ. ಮುಫಾಸಾ ಮೇಲೆ ಸ್ಕಾರ್ ಜಿದ್ದು ಸಾಧಿಸುತ್ತಿರುತ್ತಾನೆ. ಆದರೆ ‘ಮುಫಾಸಾ’ ಸಿನಿಮಾನಲ್ಲಿ ಮುಫಾಸಾ ಹಾಗೂ ಸ್ಕಾರ್ ಅತ್ಯಂತ ಆತ್ಮೀಯ ಗೆಳೆಯರು. ಬಹಳ ಒಳ್ಳೆಯ ಗೆಳೆಯರು. ಆದರೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಹೇಗೆ ಮೂಡಿತು ಎಂಬ ಕತೆಯನ್ನು ‘ಮುಫಾಸಾ’ ಸಿನಿಮಾ ಒಳಗೊಂಡಿರಲಿದೆ. ಸಿನಿಮಾ ಡಿಸೆಂಬರ್ 20ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Mon, 12 August 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ