AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಭಿತಾ-ನಾಗ ಚೈತನ್ಯ ಮೊದಲ ಭೇಟಿ ಯಾವಾಗ? ವಿಚ್ಛೇದನಕ್ಕೆ ಮುಂಚೆ ಇತ್ತೆ ಪರಿಚಯ

Naga Chaitanya: ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ವಿವಾಹವಾಗುತ್ತಿದ್ದಾರೆ. ಆದರೆ ಸಮಂತಾ ಜೊತೆಗೆ ವಿಚ್ಛೇದನ ಪಡೆದುಕೊಳ್ಳುವ ಮೊದಲೇ ನಾಗ ಚೈತನ್ಯಗೂ ಶೋಭಿತಾಗೂ ಪರಿಚಯ ಇತ್ತೆ? ಇಲ್ಲಿದೆ ಉತ್ತರ.

ಶೋಭಿತಾ-ನಾಗ ಚೈತನ್ಯ ಮೊದಲ ಭೇಟಿ ಯಾವಾಗ? ವಿಚ್ಛೇದನಕ್ಕೆ ಮುಂಚೆ ಇತ್ತೆ ಪರಿಚಯ
Naga Chaitanya-Shobhita
ಮಂಜುನಾಥ ಸಿ.
|

Updated on: Nov 29, 2024 | 1:03 PM

Share

ಶೋಭಿತಾ ದುಲಿಪಾಲ ಮತ್ತು ನಾಗ ಚೈತನ್ಯ ವಿವಾಹವಾಗುತ್ತಿದ್ದಾರೆ. ಇಂದಿನಿಂದ (ನವೆಂಬರ್ 29) ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು ಹಳದಿ ಕಾರ್ಯಕ್ರಮ ನಡೆಯುತ್ತಿದೆ. ನಾಗ ಚೈತನ್ಯಗೆ ಇದು ಎರಡನೇ ಮದುವೆ, ಶೋಭಿತಾಗೆ ಇದು ಮೊದಲ ಮದುವೆ. ನಾಗ ಚೈತನ್ಯ, ಖ್ಯಾತ ನಟಿ ಸಮಂತಾ ಜೊತೆ ವಿಚ್ಛೇದನ ಮಾಡಿಕೊಂಡು ಈಗ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಶೋಭಿತಾ ಹಾಗೂ ನಾಗ ಚೈತನ್ಯ ಮೊದಲು ಭೇಟಿ ಆಗಿದ್ದು ಆವಾಗ? ಸಮಂತಾ ಜೊತೆಗೆ ವಿಚ್ಛೇದನ ಪಡೆದುಕೊಳ್ಳುವ ಮೊದಲೇ ನಾಗ ಚೈತನ್ಯ ಹಾಗೂ ಶೋಭಿತಾ ನಡುವೆ ಪರಿಚಯ ಇತ್ತೆ?

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದುಕೊಂಡಾಗ ಹಲವು ಅನುಮಾನಗಳು ಎದ್ದಿದ್ದವು. ನಾಗ ಚೈತನ್ಯಗೆ ಇತ್ತ ಪರಸ್ತ್ರೀ ಸಂಬಂಧದಿಂದಲೇ ಸಮಂತಾ, ನಾಗ ಚೈತನ್ಯ ಇಂದ ದೂರಾದರು ಎಂಬ ಸುದ್ದಿಯೂ ಹರಿದಾಡಿತ್ತು. ವಿಚ್ಛೇದನದ ಬಳಿಕ ನಾಗ ಚೈತನ್ಯ, ಶೋಭಿತಾ ಜೊತೆ ಕಾಣಿಸಿಕೊಳ್ಳಲು ಆರಂಭವಾದಾಗ ಶೋಭಿತಾ ಇಂದಾಗಿಯೇ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನವಾಗಿದೆ. ಇಬ್ಬರ ನಡುವಿನ ಆತ್ಮೀಯತೆಯಿಂದಲೇ ಸಮಂತಾ, ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದವು.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗ ಚೈತನ್ಯ ತಮ್ಮ ಹಾಗೂ ಶೋಭಿತಾ ನಡುವೆ ಪರಿಚಯ ಆಗಿದ್ದು ಹೇಗೆ, ಯಾವಾಗ ಮತ್ತು ಎಲ್ಲಿ ಎಂಬುದನ್ನು ಹೇಳಿಕೊಂಡಿದ್ದಾರೆ. ಆ ಮೂಲಕ ವಿಚ್ಛೇದನಕ್ಕೆ ಮುಂಚೆ ತಮ್ಮಿಬ್ಬರಿಗೂ ಪರಿಚಯ ಇರಲಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ನಾಗ ಚೈತನ್ಯ ಹೇಳಿರುವ ಪ್ರಕಾರ 2023 ರ ಆರಂಭದಲ್ಲಿ ನಾಗ ಚೈತನ್ಯ ಮೊದಲ ಬಾರಿಗೆ ಶೋಭಿತಾ ಅನ್ನು ಭೇಟಿ ಆಗಿ ಮಾತನಾಡಿದರಂತೆ.

ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಮದುವೆ ಮಾರಿಕೊಂಡರೆ? ಸತ್ಯಾಂಶವೇನು?

ನಾಗ ಚೈತನ್ಯ ‘ಧೂತ’ ಹೆಸರಿನ ವೆಬ್ ಸರಣಿಯೊಂದರಲ್ಲಿ ನಟಿಸಿದ್ದರು. ಅದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ, ಸೂಪರ್ ಹಿಟ್ ಆಯ್ತು. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುವ ‘ಮೇಡ್ ಇನ್ ಹೆವೆನ್’ ಹೆಸರಿನ ವೆಬ್ ಸರಣಿಯಲ್ಲಿ ಶೋಭಿತಾ ನಟಿಸುತ್ತಿದ್ದರು. ಅದರ ಮೂರನೇ ಸೀಸನ್ ಹಾಗೂ ‘ಧೂತ’ ವೆಬ್ ಸರಣಿ ಒಂದೇ ಸಮಯದಲ್ಲಿ ಬಿಡುಗಡೆ ಆಗಲಿಕ್ಕಿತ್ತು. ಹಾಗಾಗಿ ಅಮೆಜಾನ್ ಪ್ರೈಂನ ಪ್ರಚಾರ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನಾಗ ಚೈತನ್ಯ, ಶೋಭಿತಾರನ್ನು ಭೇಟಿ ಆದರಂತೆ. ಆ ನಂತರ ಪರಿಚಯ ಗೆಳೆತನವಾಗಿ, ಗೆಳೆತನ ಪ್ರೇಮವಾಗಿ ಬದಲಾಗಿ ಇದೀಗ ಈ ಜೋಡಿ ವಿವಾಹವಾಗುತ್ತಿದೆ.

ಸಮಂತಾ ಹಾಗೂ ನಾಗ ಚೈತನ್ಯ ಬಹಳ ವರ್ಷಗಳ ಕಾಲ ಪ್ರೀತಿಸಿ 2017 ರ ಅಕ್ಟೋಬರ್​ನಲ್ಲಿ ವಿವಾಹವಾದರು. ಅದಾದ ಬಳಿಕ ಕೇವಲ ಮೂರೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡು 2020 ಕ್ಕೆ ಪರಸ್ಪರ ದೂರಾದರು. ಸಮಂತಾ ಈಗಲೂ ಸಿಂಗಲ್ ಆಗಿಯೇ ಉಳಿದಿದ್ದಾರೆ. ನಾಗ ಚೈತನ್ಯ, ಶೋಭಿತಾ ಧುಲಿಪಾಲ ಜೊತೆ ವಿವಾಹವಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ