AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್ ಮಂದಿಗೂ ಇಷ್ಟವಾದ ‘ಕಾವಾಲಾ..’ ಹಾಡು; ಹೇಗಿದೆ ನೋಡಿ ಅಲ್ಲಿಯವರ ಡ್ಯಾನ್ಸ್

ಸಿನಿಮಾದಲ್ಲಿರುವ ವಿಶೇಷ ಸಾಂಗ್​ಗಳು ಕೆಲವೊಮ್ಮೆ ಭರ್ಜರಿ ಗಮನ ಸೆಳೆಯುತ್ತವೆ. ಈ ಮೊದಲು ರಿಲೀಸ್ ಆಗಿದ್ದ ‘ಪುಷ್ಪ’ ಚಿತ್ರದ ‘ಊ ಅಂಟಾವ ಮಾವ..’ ಹಾಡು ಸೂಪರ್ ಹಿಟ್ ಆಯಿತು. ಎಲ್ಲ ಕಡೆಗಳಲ್ಲೂ ಈ ಹಾಡಿನದ್ದೇ ಸದ್ದಿತ್ತು. ಈಗ ‘ಕಾವಾಲಾ..’ ಹಾಡಿನ ಸರದಿ.

ಜಪಾನ್ ಮಂದಿಗೂ ಇಷ್ಟವಾದ ‘ಕಾವಾಲಾ..’ ಹಾಡು; ಹೇಗಿದೆ ನೋಡಿ ಅಲ್ಲಿಯವರ ಡ್ಯಾನ್ಸ್
ತಮನ್ನಾ
ರಾಜೇಶ್ ದುಗ್ಗುಮನೆ
|

Updated on: Aug 17, 2023 | 10:41 AM

Share

‘ಜೈಲರ್’ ಸಿನಿಮಾ (Jailer Movie) ವಿಶ್ವಾದ್ಯಂತ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ಚಿತ್ರ ಆರು ದಿನಗಳಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ‘ಕಾವಾಲಾ..’ ಹಾಡು (Kaavaalaa Song) ಕೂಡ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಹಾಡು ಯೂಟ್ಯೂಬ್​ನಲ್ಲಿ ಕೋಟಿ ಕೋಟಿ ವೀವ್ಸ್ ಪಡೆದಿದೆ. ತಮನ್ನಾ ಹಾಕಿದ ಸ್ಟೆಪ್ಸ್ ಗಮನ ಸೆಳೆದಿದೆ. ಕೇವಲ ಭಾರತೀಯ ಮಂದಿ ಮಾತ್ರ ಈ ಹಾಡನ್ನು ಮೆಚ್ಚಿಕೊಂಡಿಲ್ಲ. ವಿದೇಶಿಗರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಭಾರತದ ಜಪಾನ್ ರಾಯಭಾರಿ ಕೂಡ ಈ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಸಿನಿಮಾದಲ್ಲಿರುವ ವಿಶೇಷ ಸಾಂಗ್​ಗಳು ಕೆಲವೊಮ್ಮೆ ಭರ್ಜರಿ ಗಮನ ಸೆಳೆಯುತ್ತವೆ. ಈ ಮೊದಲು ರಿಲೀಸ್ ಆಗಿದ್ದ ‘ಪುಷ್ಪ’ ಚಿತ್ರದ ‘ಊ ಅಂಟಾವ ಮಾವ..’ ಹಾಡು ಸೂಪರ್ ಹಿಟ್ ಆಯಿತು. ಎಲ್ಲ ಕಡೆಗಳಲ್ಲೂ ಈ ಹಾಡಿನದ್ದೇ ಸದ್ದಿತ್ತು. ಈಗ ‘ಕಾವಾಲಾ..’ ಹಾಡಿನ ಸರದಿ. ಈ ಸಾಂಗ್ ಭರ್ಜರಿ ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಜಪಾನ್ ವ್ಯಕ್ತಿಯೋರ್ವ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಮೂಲಕ ಜಪಾನ್​ನಲ್ಲೂ ಈ ಹಾಡು ಫೇಮಸ್ ಆಯಿತು. ಈಗ ಭಾರತದ ಜಪಾನ್ ರಾಯಭಾರಿ ಹಿರೋಷಿ ಸುಜುಕಿ ‘ಕಾವಾಲಾ..’ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಜಪಾನ್ ಯೂಟ್ಯೂಬರ್ ಮಯೋ ಸಾನ್ ಜೊತೆ ಹಿರೋಷಿ ಅವರು ಕೊಲಾಬರೇಷನ್ ಮಾಡಿಕೊಂಡಿದ್ದಾರೆ. ‘ಜಪಾನ್ ಯೂಟ್ಯೂಬರ್ ಮಯೋ ಸ್ಯಾನ್ ಜೊತೆ ಕಾವಾಲಾ ಡ್ಯಾನ್ಸ್. ರಜನಿಕಾಂತ್ ಮೇಲೆ ಇರುವ ನನ್ನ ಪ್ರೀತಿ ನಿರಂತರ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 400 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಜೈಲರ್’ ಸಿನಿಮಾ; ಕರ್ನಾಟಕದಲ್ಲಿ ಎಷ್ಟು ಗಳಿಕೆ?

‘ಜೈಲರ್’ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ಅವರು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ರಜನಿಕಾಂತ್ ಜೊತೆ ಕನ್ನಡದ ಶಿವರಾಜ್​ಕುಮಾರ್, ಮಲಯಾಳಂ ಕಲಾವಿದರಾದ ಮೋಹನ್​ಲಾಲ್, ವಿನಾಯಕನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ