ರಣವೀರ್ ಡಾನ್ ಆದ ಬಗ್ಗೆ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಫರ್ಹಾನ್ ಅಖ್ತರ್

‘ಡಾನ್ 2’ ರಿಲೀಸ್ ಆಗಿ 12 ವರ್ಷಗಳ ಬಳಿಕ ‘ಡಾನ್ 3’ ಸಿನಿಮಾ ಘೋಷಣೆ ಆಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ನಟಿಸುವುದಿಲ್ಲ ಅನ್ನೋದು ಇತ್ತೀಚೆಗೆ ಖಚಿತವಾಯಿತು. ಡಾನ್ ಪಾತ್ರದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಘೋಷಿಸಿದರು.

ರಣವೀರ್ ಡಾನ್ ಆದ ಬಗ್ಗೆ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಫರ್ಹಾನ್ ಅಖ್ತರ್
ಶಾರುಖ್​-ರಣವೀರ್ ಸಿಂಗ್
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 17, 2023 | 11:05 AM

ಭಾರತದ ಸಿನಿಮಾ ಇತಿಹಾಸದಲ್ಲಿ ‘ಡಾನ್’ (Don) ಪಾತ್ರ ಸಖತ್ ವಿಶೇಷ ಎನಿಸಿಕೊಂಡಿದೆ. ಈಗಾಗಲೇ ಈ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಶಾರುಖ್ ಖಾನ್ ನಟಿಸಿದ್ದಾರೆ. ಈಗ ರಣವೀರ್ ಸಿಂಗ್ ಅವರು ಈ ಪಾತ್ರವನ್ನು ಮಾಡಲು ರೆಡಿ ಆಗುತ್ತಿದ್ದಾರೆ. ರಣವೀರ್ ಸಿಂಗ್ ಅವರು ‘ಡಾನ್ 3’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದರ ಟೀಸರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಶಾರುಖ್ ಸ್ಥಾನವನ್ನು ರಣವೀರ್ (Ranveer Singh) ಹೇಗೆ ತುಂಬಲು ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈ ಟೀಕೆಗಳಿಗೆ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ತಿರುಗೇಟು ಕೊಟ್ಟಿದ್ದಾರೆ.

‘ಡಾನ್’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಈ ಸಿನಿಮಾ 1978ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತು. ಇದಾದ ಬಳಿಕ ‘ಡಾನ್’ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದರು. ಈ ಸಿನಿಮಾ ರಿಲೀಸ್ ಆಗಿದ್ದು 2006ರಲ್ಲಿ. ‘ಡಾನ್ 2’ ಚಿತ್ರ 2011ರಲ್ಲಿ ಬಿಡುಗಡೆ ಆಯಿತು. ಎರಡೂ ಸಿನಿಮಾಗಳು ಹಿಟ್ ಆದವು. ಈಗ ‘ಡಾನ್ 2’ ರಿಲೀಸ್ ಆಗಿ 12 ವರ್ಷಗಳ ಬಳಿಕ ‘ಡಾನ್ 3’ ಸಿನಿಮಾ ಘೋಷಣೆ ಆಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ನಟಿಸುವುದಿಲ್ಲ ಅನ್ನೋದು ಇತ್ತೀಚೆಗೆ ಖಚಿತವಾಯಿತು. ಡಾನ್ ಪಾತ್ರದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಘೋಷಿಸಿದರು.

ಸದ್ಯ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಣವೀರ್ ಸಿಂಗ್ ಅವರ ಆಯ್ಕೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಈ ಆಯ್ಕೆ ತಪ್ಪು ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಫರ್ಹಾನ್ ಅಖ್ತರ್ ಮಾತನಾಡಿದ್ದಾರೆ. ‘ರಣವೀರ್ ಸಿಂಗ್ ಈ ಪಾತ್ರಕ್ಕೆ ಸೂಕ್ತರು. ಅವರು ಈ ಪಾತ್ರ ಮಾಡಲು ಎಗ್ಸೈಟ್ ಹಾಗೂ ನರ್ವಸ್ ಎರಡೂ ಆಗಿದ್ದಾರೆ. ಮಹಾನ್ ನಟರು ಮಾಡಿದ ಪಾತ್ರವನ್ನು ರಣವೀರ್ ಮಾಡುತ್ತಿದ್ದಾರೆ. ಆರಂಭದಲ್ಲಿ ಶಾರುಖ್ ಖಾನ್ ಡಾನ್ ಪಾತ್ರ ಮಾಡುವಾಗ ಇದೇ ರೀತಿಯ ಮಾತು ಕೇಳಿ ಬಂದಿತ್ತು. ಅಮಿತಾಭ್ ಬಚ್ಚನ್​ನ ಬದಲು ಶಾರುಖ್ ಖಾನ್ ಹೇಗೆ ನಟಿಸಲು ಸಾಧ್ಯ ಎಂದು ಕೇಳಿದ್ದರು. ನಂತರ ಸಿನಿಮಾ ಹಿಟ್ ಆಯಿತು’ ಎಂದಿದ್ದಾರೆ ಫರ್ಹಾನ್.

ಇದನ್ನೂ ಓದಿ: ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’: ದೀಪಿಕಾ ಜೊತೆ ಸಿನಿಮಾ ನೋಡಲು ಬಂದ ರಣವೀರ್​ ಸಿಂಗ್​ಗೆ ಈ ಪರಿಸ್ಥಿತಿ ಯಾಕೆ?

‘ರಣವೀರ್ ಸಿಂಗ್ ಅವರು ಈ ಚಿತ್ರಕ್ಕೆ ಸೂಕ್ತರು. ಅವರು ಒಳ್ಳೆಯ ಕೆಲಸ ಮಾಡುತ್ತಾರೆ. ಒಳ್ಳೆಯ ಸ್ಕ್ರಿಪ್ಟ್​ ಮಾಡುವ ಜವಾಬ್ದಾರಿ ನನ್ನದಿದೆ’ ಎಂದು ಅವರು ಹೇಳಿದ್ದಾರೆ. ಸೀಕ್ವೆಲ್​ನಲ್ಲಿ ಹೀರೋಗಳನ್ನು ಬದಲಿಸಿದರೆ ಸಹಜವಾಗಿಯೇ ಒಂದು ವರ್ಗದ ಜನರಿಗೆ ಇಷ್ಟವಾಗುವುದಿಲ್ಲ. ಅದೇ ರೀತಿ ಶಾರುಖ್ ಖಾನ್ ಬದಲು ರಣವೀರ್ ಸಿಂಗ್ ಬಂದಿದ್ದು ಹಲವರಿಗೆ ಇಷ್ಟವಾಗಿಲ್ಲ. ರಣವೀರ್ ಸಿಂಗ್ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಅವರಿಗೆ ಈ ಚಿತ್ರದ ಮೂಲಕ ಗೆಲುವು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ