AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ದುಬಾರಿ ಟಿಕೆಟ್ ಬೆಲೆಗೆ ‘ಜನ ನಾಯಗನ್’ ಡಲ್; ಶೋಗಳಿಗಿಲ್ಲ ಹೌಸ್​​ಫುಲ್ ಬೋರ್ಡ್

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಓಪನಿಂಗ್ ನಿರೀಕ್ಷಿಸಲಾಗಿತ್ತು. ಆದರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್ ದರ ಹಾಗೂ ಮುಂಚಿತವಾಗಿಯೇ ಆದ ಆನ್‌ಲೈನ್ ಲೀಕ್ ಭೀತಿಯಿಂದಾಗಿ ಚಿತ್ರಕ್ಕೆ ಮೊದಲ ದಿನವೇ ಡಲ್ ಓಪನಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ಬಹುತೇಕ ಶೋಗಳು ಖಾಲಿ ಉಳಿದಿದ್ದು, ಹೌಸ್​​ಫುಲ್ ಬೋರ್ಡ್ ಬೀಳದಿರುವುದು ಚಿತ್ರತಂಡಕ್ಕೆ ಆತಂಕ ಮೂಡಿಸಿದೆ.

ಬೆಂಗಳೂರಲ್ಲಿ ದುಬಾರಿ ಟಿಕೆಟ್ ಬೆಲೆಗೆ ‘ಜನ ನಾಯಗನ್’ ಡಲ್; ಶೋಗಳಿಗಿಲ್ಲ ಹೌಸ್​​ಫುಲ್ ಬೋರ್ಡ್
ದಳಪತಿ ವಿಜಯ್ Image Credit source: Jana Nayagan
ರಾಜೇಶ್ ದುಗ್ಗುಮನೆ
|

Updated on: Jul 23, 2026 | 11:56 AM

Share

ಮುಖ್ಯಾಂಶಗಳು

  • ಬೆಂಗಳೂರಲ್ಲಿ ಮುಖಭಂಗ ತಂದ ದುಬಾರಿ ಟಿಕೆಟ್ ದರ
  • ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ 400 ರೂಪಾಯಿ ದಾಟಿದೆ
  • ಬುಕ್ ಮೈ ಶೋನಲ್ಲಿ ಹಸಿರು ಬಣ್ಣದ ಹಾವಳಿ

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan Movie) ಚಿತ್ರ ಇಂದು (ಜುಲೈ 23) ರಿಲೀಸ್ ಆಗಿದೆ. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮೊದಲ ದಿನದ ಗಳಿಕೆ ಭಾರತದಲ್ಲಿ 100 ಕೋಟಿ ರೂಪಾಯಿ ದಾಟೋ ನಿರೀಕ್ಷೆ ಇದೆ. ಆದರೆ, ಈ ಚಿತ್ರಕ್ಕೆ ಬೆಂಗಳೂರಲ್ಲಿ ಡಲ್ ಓಪನಿಂಗ್ ಸಿಕ್ಕಿದೆ. ಬಹುತೇಕ ಮಲ್ಟಿಪ್ಲೆಕ್ಸ್​​ಗಳಲ್ಲಿ ಹೌಸ್​​ಫುಲ್ ಬೋರ್ಡ್ ಬಿದ್ದಿಲ್ಲ. ದುಬಾರಿ ಟಿಕೆಟ್ ದರ ಕೂಡ ಇದಕ್ಕೆ ಕಾರಣ ಎಂಬ ಮಾತು ವ್ಯಕ್ತವಾಗುತ್ತಿದೆ.

ಯಾವುದಾದರೂ ಒಂದು ಸಿನಿಮಾ ಗೆಲ್ಲಬೇಕು ಎಂದರೆ ಅದು ಕೇವಲ ಅಭಿಮಾನಿಗಳನ್ನು ಮಾತ್ರ ಖುಷಿಪಡಿಸುವ ರೀತಿಯಲ್ಲಿ ಇರಬಾರದು. ಅಂದಾಗ ಮಾತ್ರ ಸಿನಿಮಾ ದೊಡ್ಡ ಯಶಸ್ಸು ಕಾಣಲು ಸಾಧ್ಯ. ಆಗಲೇ ಒಳ್ಳೆಯ ಕಲೆಕ್ಷನ್ ಆಗೋದು. ಆದರೆ, ‘ಜನ ನಾಯಗನ್’ ಸಿನಿಮಾ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ ಚಿತ್ರ. ಹೀಗಾಗಿ, ಮೊದಲ ದಿನ ಮೊದಲ ಶೋ ಅಭಿಮಾನಿಗಳಿಂದ ತುಂಬಿದೆ.

ಬುಕ್ ಮೈ ಶೋ ಓಪನ್ ಮಾಡಿ ನೋಡಿದರೆ ಬೆಂಗಳೂರಿನಲ್ಲಿ 9 ಗಂಟೆಯ ಬಳಿಕದ ಬಹುತೇಕ ಶೋಗಳು ಹಸಿರು ಬಣ್ಣದಲ್ಲೇ ಇವೆ. ಅಂದರೆ, ಸಿನಿಮಾ ಹಾಲ್ ಬುಕ್ ಆಗುತ್ತಿಲ್ಲ ಎಂಬ ಅರ್ಥ ಇದು. ಇನ್ನು, ಕೆಲವೇ ಕೆಲವು ಶೋಗಳು ಆರೆಂಜ್ ಬಣ್ಣಕ್ಕೆ ತಿರುಗಿವೆ. ಆರೆಂಜ್ ಎಂದರೆ, ಸೀಟ್​​​ಗಳು ತುಂಬಲು ಆರಂಭಿಸಿದೆ ಎಂದರ್ಥ.

ಇದನ್ನೂ ಓದಿ: ಅಕ್ರಮವಾಗಿ ‘ಜನ ನಾಯಗನ್’ ಟಿಕೆಟ್ ದರ ಏರಿಕೆ: ಕ್ರಮ ತೆಗೆದುಕೊಳ್ಳಲು ವಿಜಯ್ ಅಭಿಮಾನಿಗಳ ಆಗ್ರಹ

‘ಜನ ನಾಯಗನ್’ ಸಿನಿಮಾ ಈಗಾಗಲೇ ಲೀಕ್ ಕಾಟ ಅನುಭವಿಸಿದೆ. ಇದು ಸಿನಿಮಾ ತಂಡಕ್ಕೆ ಚಾಲೆಂಜ್ ಆಗಿತ್ತು. ಈ ಕಾರಣದಿಂದ ಅನೇಕರು ಸಿನಿಮಾ ನೋಡುವ ಸಾಹಸಕ್ಕೆ ಹೋಗಿಲ್ಲ. ಇನ್ನು ಸಿನಿಮಾ ಟಿಕೆಟ್ ಬೆಲೆ ಮಲ್ಟಿಪ್ಲೆಕ್ಸ್​​ಗಳಲ್ಲಿ 400 ರೂಪಾಯಿ ದಾಟಿದೆ. ಇಷ್ಟೊಂದು ಹಣ ಕೊಟ್ಟು ಸಿನಿಮಾ ವೀಕ್ಷಿಸಲು ಪ್ರೇಕ್ಷಕ ಸಿದ್ಧನಿಲ್ಲ. ‘ಜನ ನಾಯಗನ್’ ಸಿನಿಮಾಗೆ ಎಚ್​​. ವಿನೋದ್ ನಿರ್ದೇಶನ ಇದೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಮಲಯಾಳಂ ನಟಿ ಮಮಿತಾ ಬೈಜು ಅವರು ಈ ಸಿನಿಮಾದಲ್ಲಿ ವಿಜಯ್ ಸಹೋದರಿ ಪಾತ್ರ ಮಾಡಿದ್ದಾರೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್