ತೆಲುಗು ಚಿತ್ರರಂಗವ ಕೊಂಡಾಡಿ, ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ಹವಿ
Janhvi Kapoor movie: ಈಗಾಗಲೇ ಜೂ ಎನ್ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿರುವ ಜಾನ್ಹವಿ ಇದೀಗ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದಾರೆ. ‘ಪೆದ್ದಿ’ ಸಿನಿಮಾ ಪ್ರಚಾರದಲ್ಲಿರುವ ನಟಿ ಜಾನ್ಹವಿ ಕಪೂರ್, ಇದೀಗ ತೆಲುಗು ಚಿತ್ರರಂಗದಲ್ಲಿರುವ ವೃತ್ತಿಪರತೆ, ಸಮಯ ಪಾಲನೆ ಇನ್ನಿತರೆ ವಿಷಯಗಳನ್ನು ಕೊಂಡಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ದೀಪಿಕಾ ಪಡುಕೋಣೆಗೆ ಟಾಂಗ್ ಸಹ ನೀಡಿದ್ದಾರೆ.

ಜಾನ್ಹವಿ ಕಪೂರ್ (Janhvi Kapoor) ಬಾಲಿವುಡ್ನ ಜನಪ್ರಿಯ ಯುವನಟಿ. ದೊಡ್ಡ ಹಿಟ್ ಇಲ್ಲದೇ ಹೋದರು ಒಂದರ ಹಿಂದೊಂದು ಅವಕಾಶಗಳ ಬಾಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣದ ಚಿತ್ರರಂಗದಲ್ಲಿಯೂ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಜೂ ಎನ್ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿರುವ ಜಾನ್ಹವಿ ಇದೀಗ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದಾರೆ. ‘ಪೆದ್ದಿ’ ಸಿನಿಮಾ ಪ್ರಚಾರದಲ್ಲಿರುವ ನಟಿ ಜಾನ್ಹವಿ ಕಪೂರ್, ಇದೀಗ ತೆಲುಗು ಚಿತ್ರರಂಗದಲ್ಲಿರುವ ವೃತ್ತಿಪರತೆ, ಸಮಯ ಪಾಲನೆ ಇನ್ನಿತರೆ ವಿಷಯಗಳನ್ನು ಕೊಂಡಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ದೀಪಿಕಾ ಪಡುಕೋಣೆಗೆ ಟಾಂಗ್ ಸಹ ನೀಡಿದ್ದಾರೆ.
ಕೆಲಸದ ಅವಧಿ ಇನ್ನಿತರೆ ಕಾರಣಗಳಿಗಾಗಿ ಎರಡು ತೆಲುಗು ಸಿನಿಮಾಗಳನ್ನು ಕೈಬಿಟ್ಟ ದೀಪಿಕಾ ಪಡುಕೋಣೆ, ಆ ನಂತರ ತೆಲುಗು ಚಿತ್ರರಂಗದಲ್ಲಿ ಕೆಲಸದ ಅವಧಿ ಹೆಚ್ಚು ಎಂದು ಪಾಡ್ಕಾಸ್ಟ್ ಒಂದರಲ್ಲಿ ಹೇಳಿಕೊಂಡಿದ್ದರು. ಆದರೆ ನಟಿ ಜಾನ್ಹವಿ ಕಪೂರ್, ದೀಪಿಕಾರ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ತೆಲುಗು ಚಿತ್ರರಂಗದ ಬಗ್ಗೆ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗವನ್ನು ಬಾಲಿವುಡ್ ಜೊತೆಗೆ ಹೋಲಿಸಿರುವ ಜಾನ್ಹವಿ, ಇಲ್ಲಿ ವೃತ್ತಿ ಪರತೆ ಹೆಚ್ಚಿದೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಪ್ರತಿ ಶೆಡ್ಯೂಲ್ಗಳನ್ನು ಸರಿಯಾಗಿ ಪ್ಲ್ಯಾನ್ ಮಾಡಲಾಗಿರುತ್ತದೆ. ಎಲ್ಲರಿಗೂ ಸಮಾನ ಕಾಲಾವಕಾಶ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲಿ 40 ನಿಮಿಷಗಳ ಊಟದ ಬ್ರೇಕ್ ನೀಡುವ ಜೊತೆಗೆ ಮುಂದಿನ ಶಾಟ್ಗೆ ಮುಂಚೆ ಎಲ್ಲರಿಗೂ ಸಾಕಷ್ಟು ವಿಶ್ರಾಂತಿಯನ್ನು ಸಹ ನೀಡಲಾಗುತ್ತದೆ. ಹಿಂದಿ ಚಿತ್ರರಂಗದಲ್ಲಿ ಶೆಡ್ಯೂಲ್ ಸಮಯ ಬದಲಾಗುತ್ತಲೇ ಇರುತ್ತದೆ. ಆದರೆ ತೆಲುಗಿನಲ್ಲಿ ಇದರ ಬಗ್ಗೆ ಸ್ಪಷ್ಟವಾದ ಗಡಿ ಇದೆ. ಇಂತಿಷ್ಟೇ ಸಮಯ ಕೆಲಸ ಮಾಡಬೇಕು ಎಂಬ ನಿಯಮ ಇದೆ. ಬಾಲಿವುಡ್ನಲ್ಲಿ ಇದು ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ ನಟಿ.
ಇದನ್ನೂ ಓದಿ:‘ಪೆದ್ದಿ’ ಸಿನಿಮಾಕ್ಕೆ ಜಾನ್ಹವಿ ಕಪೂರ್ ಪಡೆದ ಸಂಭಾವನೆ ಎಷ್ಟು ಕೋಟಿ?
‘ತೆಲುಗು ಚಿತ್ರರಂಗದಲ್ಲಿ ರಾತ್ರಿ ಶೂಟಿಂಗ್ಗೆ ಸಹ ಸ್ಪಷ್ಟವಾದ ನಿಯಮ ಇದೆ. ಸರಿಯಾಗಿ 2 ಗಂಟೆಗೆ ಶೂಟಿಂಗ್ ನಿಲ್ಲಿಸುತ್ತಾರೆ. ಬಳಿಕ ಎಲ್ಲರಿಗೂ ವಿಶ್ರಾಂತಿಗೆ ಕಾಲಾವಕಾಶ ಕೊಡುತ್ತಾರೆ. ಡೇ ಶೂಟಿಂಗ್ಗಳಲ್ಲಿಯೂ ಸಹ 9 ರಿಂದ 10 ಗಂಟೆ ಮಾತ್ರವೇ ಶೂಟಿಂಗ್ ಮಾಡುತ್ತಾರೆ. ತೆಲುಗು ಚಿತ್ರರಂಗದಲ್ಲಿ ನಾನು 12 ಗಂಟೆ ಶಿಫ್ಟ್ ಮಾಡಿರುವುದು ಬಹಳ ಕಡಿಮೆ. ಹೆಚ್ಚೆಂದರೆ ಎರಡು ಮೂರು ಮಾಡಿರಬಹುದು ಅಷ್ಟೆ. ಹಿಂದಿಯಲ್ಲಿ ಹಾಗಾಗುವುದಿಲ್ಲ, ಒಂದೊಂದು ಸೆಟ್ನಲ್ಲಿ ಒಂದೊಂದು ರೀತಿಯ ನಿಯಮ ಪಾಲಿಸುತ್ತಾರೆ’ ಎಂದಿದ್ದಾರೆ ಜಾನ್ಹವಿ ಕಪೂರ್.
ದೀಪಿಕಾ ಪಡುಕೋಣೆ, ‘ಕಲ್ಕಿ 2898 ಎಡಿ’ ಭಾಗ 2 ಮತ್ತು ‘ಸ್ಪಿರಿಟ್’ ಸಿನಿಮಾಗಳಲ್ಲಿ ನಟಿಸಬೇಕಿತ್ತು. ಆದರೆ ಕೆಲಸದ ಅವಧಿಯ ಕಾರಣ ನೀಡಿ ಎರಡೂ ಸಿನಿಮಾಗಳಿಂದ ಹೊರನಡೆದರು. ತಾವು ದಿನಕ್ಕೆ ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದು ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ಈಗ ಹಿಂದಿಯ ‘ಕಿಂಗ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ಆದರೆ ಈಗ ಜಾನ್ಹವಿ ಕಪೂರ್, ತೆಲುಗಿಗಿಂತಲೂ ಹಿಂದಿಯಲ್ಲಿಯೇ ಕೆಲಸದ ಅವಧಿ ಹೆಚ್ಚು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





