
ಜೂನಿಯರ್ ಎನ್‌ಟಿಆರ್ (Jr. NTR) ಅವರು ಫಿಟ್ನೆಸ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಅವರು ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಅವರು ಇದರ ಜೊತೆಗೆ ತಿನ್ನೋದಕ್ಕೆ ಏನೂ ಕಡಿಮೆ ಮಾಡಿಕೊಳ್ಳುವುದಿಲ್ಲ. ಅವರು ಜಿಮ್ನಲ್ಲಿ ವರ್ಕೌಟ್ ಮಾಡಿದ್ದಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುತ್ತಾರೆ. ಆದರೆ, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಎನ್‌ಟಿಆರ್ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅವರು ಆಂಧ್ರ ಹಾಗೂ ತೆಲಂಗಾಣ ಆಹಾರಗಳ ಬಗ್ಗೆ ರೆಕಮಂಡೇಷನ್ ನೀಡಿದ್ದಾರೆ. ಅವರು ಎಲ್ಲೆಲ್ಲಿ ಆಹಾರ ಸೇವನೆ ಮಾಡಿದ್ದಾರೆ ಎಂಬುದನ್ನು ಹೇಳಿದ್ದಾರೆ.
ಜೂನಿಯರ್ ಎನ್‌ಟಿಆರ್ ಅವರು ವಿವಿಧ ಕಡೆಗಳಲ್ಲಿ ತೆರಳುತ್ತಾ ಇರುತ್ತಾರೆ. ಈ ಸಂದರ್ಭದಲ್ಲಿ ಅವರು ವಿವಿಧ ಆಹಾರಗಳ ಟೇಸ್ಟ್ ಮಾಡುತ್ತಾರೆ. ಇನ್ನು ಅವರು ಹೈದರಾಬಾದ್ನವರೇ ಆಗಿರುವುದರಿಂದ ಅಲ್ಲಿನ ಆಹಾರಾಗಳನ್ನು ಅವರು ಸೇವನೆ ಮಾಡಿದ್ದಾರೆ. ಮತ್ತು ಜನರಿಗೆ ಅದರ ಬಗ್ಗೆ ಹೇಳಿದ್ದಾರೆ. ಮಿಸ್ ಮಾಡದೆ ಅಲ್ಲಿ ತಿನ್ನುವಂತೆ ಕೋರಿದ್ದಾರೆ.
‘ಹೈದರಾಬಾದ್ನಲ್ಲಿ ಹೈದರಾಬಾದಿ ಬಿರಿಯಾನಿ ತಿನ್ನಬೇಕು. ಅದಕ್ಕಿಂತ ಹೆಚ್ಚಿನ ಫೇಮಸ್ ಆದುದ್ದು ಮತ್ತೊಂದಿಲ್ಲ. ಹೈದರಾಬಾದ್ನ ಹಳೆಯ ಹೋಟೆಲ್ ಶಾದಾಬ್ ಚೆನ್ನಾಗಿದೆ. ಒಳ್ಳೆಯ ಬಿರಿಯಾನಿ ಸಿಗುತ್ತದೆ. ಸಾಂಪ್ರದಾಯಕಿ ಆಂಧ್ರಾ ಫುಡ್ ಸ್ಪೈಸ್ ವೆನ್ಯೂ ಅಂತಿದೆ ಅಲ್ಲಿದೆ. ಕಾಕತೀಯ ಮೆಸ್ ಇದೆ. ಅದೂ ಚೆನ್ನಾಗಿದೆ. ತೆಲಂಗಾಣ ಫುಡ್ ಊಟ ಮಾಡಬೇಕು ಎಂದರೆ ತೆಂಗಾಣ ಸ್ಪೈಸ್ ನನ್ನ ರೆಕಮಂಡೇಷನ್’ ಎಂದಿದ್ದಾರೆ ಅವರು.
ಜೂನಿಯರ್ ಎನ್‌ಟಿಆರ್ ಅವರು ‘ವಾರ್ 2’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಹೃತಿಕ್ ರೋಷನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ‘ವಾರ್ 2’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಅನ್ನೋದು ವಿಶೇಷ. ಇದಲ್ಲದೆ, ‘ದೇವರ 2’ ಅಪ್ಡೇಟ್ ಸಿಗುತ್ತಿದೆ.
ಇದನ್ನೂ ಓದಿ: ಜೂನಿಯರ್ ಎನ್‌ಟಿಆರ್, ಪ್ರಶಾಂತ್ ನೀಲ್ ಫ್ಯಾನ್ಸ್ ಪಾಲಿಗೆ ಏ.22 ವಿಶೇಷ ದಿನ; ಸಿಕ್ತು ಅಪ್ಡೇಟ್
ಜೂನಿಯರ್ ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ಅವರ ಸಿನಿಮಾ ಕೆಲಸದಲ್ಲೂ ತೊಡಗಿಕೊಳ್ಳಬೇಕಿದೆ. ಫೆಬ್ರವರಿ ಮಧ್ಯ ಭಾಗದಲ್ಲಿ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರೀಕರಣ ಆರಂಭಿಸಿದ್ದಾರೆ. ಬರೋಬ್ಬರಿ 2 ಸಾವಿರ ಮಂದಿ ಜೂನಿಯರ್ ಆರ್ಟಿಸ್ಟ್ಗಳ ಜೊತೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಈಗ ಅವರು ಚಿತ್ರೀಕರಣದಲ್ಲಿ ಭಾಗಿಯಾಗುವ ಸಮಯ ಬಂದಿದೆ. ಏಪ್ರಿಲ್ 22ರಂದು ಜೂನಿಯರ್ ಎನ್‌ಟಿಆರ್ ಅವರು ಶೂಟಿಂಗ್ ಸೆಟ್ಗೆ ಸೇರಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.