AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕನ ಅತಿಆಸೆಗೆ ನಿಂತೋಯ್ತು ‘ಕೈದಿ 2’? ಬೇಸರದ ಉತ್ತರ ಕೊಟ್ಟ ಕಾರ್ತಿ

2019ರ ಬ್ಲಾಕ್‌ಬಸ್ಟರ್ ‘ಕೈದಿ’ ಚಿತ್ರದ ಸೀಕ್ವೆಲ್ ‘ಕೈದಿ 2’ ಏಳು ವರ್ಷಗಳಾದರೂ ಸೆಟ್ಟೇರಿಲ್ಲ. ನಿರ್ದೇಶಕ ಲೋಕೇಶ್ ಕನಕರಾಜ್ ಅವರ 75 ಕೋಟಿ ಸಂಭಾವನೆಯ ಬೇಡಿಕೆ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ನಿರ್ಮಾಪಕರು ಭಾರಿ ಬಜೆಟ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಲೋಕೇಶ್ ಚಿತ್ರಗಳ ಮಿಶ್ರ ಪ್ರತಿಕ್ರಿಯೆ ಸಹ ನಿರ್ಮಾಪಕರ ಹಿಂಜರಿಕೆಗೆ ಕಾರಣ.

ನಿರ್ದೇಶಕನ ಅತಿಆಸೆಗೆ ನಿಂತೋಯ್ತು ‘ಕೈದಿ 2’? ಬೇಸರದ ಉತ್ತರ ಕೊಟ್ಟ ಕಾರ್ತಿ
ಕಾರ್ತಿ-ಲೋಕೇಶ್
ರಾಜೇಶ್ ದುಗ್ಗುಮನೆ
|

Updated on:Jan 20, 2026 | 9:05 AM

Share

2019ರಲ್ಲಿ ತಮಿಳಿನಲ್ಲಿ ಬಂದ ‘ಕೈದಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಕಾರ್ತಿ ನಟಿಸಿದ್ದರು. ಡಿಲ್ಲಿ ಪಾತ್ರ ಮೆಚ್ಚುಗೆ ಪಡೆಯಿತು. ಡ್ರಗ್ಸ್ ಕಥೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರವನ್ನು ಜನರು ಹಾಡಿ ಹೊಗಳಿದರು. ಈ ಚಿತ್ರ ನಿರ್ದೇಶನ ಮಾಡಿದ್ದು ಲೋಕೇಶ್​ ಕನಗರಾಜ್ (Lokesh Kanagaraj) ಅವರು. ಇದಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ಆಗಲೇ ಘೋಷಣೆ ಮಾಡಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಿ ಏಳು ವರ್ಷಗಳು ಕಳೆದು ಹೋಗಿವೆ. ಆದಾಗ್ಯೂ ಪಾರ್ಟ್ 2 ಬಗ್ಗೆ ಯಾವುದೇ ಟಾಕ್ ಇಲ್ಲ. ನಿರ್ದೇಶಕನ ಅತಿ ಆಸೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

‘ಕೈದಿ’ ಬಳಿಕ ಲೋಕೇಶ್ ಅವರು ‘ಮಾಸ್ಟರ್’, ‘ವಿಕ್ರಮ್’, ‘ಲಿಯೋ’, ‘ಕೂಲಿ’ ಸಿನಿಮಾ ನಿರ್ದೇಶನ ಮಾಡಿದರು. ವಿಕ್ರಮ್ ಹೊರತುಪಡಿಸಿ ಉಳಿದೆಲ್ಲವೂ ಸಾಧಾರಣ ಎನಿಸಿಕೊಂಡಿತು. ಆದಾಗ್ಯೂ ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ‘ಕೈದಿ 2’ ಬಗ್ಗೆ ಚರ್ಚೆ ನಡೆದಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೈದಿ 2’ ಈಗಾಗಲೇ ಸೆಟ್ಟೇರಬೇಕಿತ್ತು. ಆದರೆ, ಲೋಕೇಶ್ ಅವರ ಅತಿ ಆಸೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅವರು ಈ ಚಿತ್ರ ನಿರ್ದೇಶನ ಮಾಡಲು 75 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ. ನಿರ್ಮಾಪಕರ ಪಾಲಿಗೆ ಇದು ನಿಜಕ್ಕೂ ದೊಡ್ಡ ಹೊರೆ. ಇಷ್ಟು ಮೊತ್ತದ ಸಂಭಾವನೆಯನ್ನು ನಿರ್ದೇಶಕರಿಗೆ ಕೊಡಲು ನಿರ್ಮಾಪಕರು ರೆಡಿ ಇಲ್ಲ.

ಇತ್ತೀಚೆಗೆ ಲೋಕೇಶ್ ಸಿನಿಮಾಗಳು ಬಾಕ್ಸ್ ಆಫೀಸ್​​​ನಲ್ಲಿ ನೀಡುತ್ತಿರುವ ಪರ್ಫಾರ್ಮೆನ್ಸ್ ನೋಡಿದರೆ ಹಾಕಿದ ಹಣ ಮರಳುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ, ಸುಖಾಸುಮ್ಮನೆ ಬಜೆಟ್ ಹೆಚ್ಚಿಸಿಕೊಳ್ಳುವ ಬದಲು ಸುಮ್ಮನೆ ಇರೋದೆ ಬೆಸ್ಟ್ ಎಂಬ ಆಲೋಚನೆ ನಿರ್ಮಾಪಕರಿಗೆ ಬಂದಿದೆಯಂತೆ.

ಇದನ್ನೂ ಓದಿ: ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?

ಇತ್ತೀಚೆಗೆ ‘ಕೈದಿ 2’ ಬಗ್ಗೆ ಕಾರ್ತಿಗೆ ಕೇಳಲಾಗಿದೆ. ‘ನಿರ್ದೇಶಕರೇ ಆ ಬಗ್ಗೆ ಮಾಹಿತಿ ಕೊಡ್ತಾರೆ’ ಎಂದು ಹೇಳಿ ಜಾರಿಕೊಂಡಿದ್ದಾರೆ. ಅವರು ಈ ವಿಷಯದಲ್ಲಿ ಬೇಸರದಲ್ಲಿ ಇರುವುದು ಸ್ಪಷ್ಟವಾಗಿದೆ. ಕಾರ್ತಿ ಹಾಗೂ ಲೋಕೇಶ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:03 am, Tue, 20 January 26