AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಆಗಿದ್ದ ಎಆರ್​ ರೆಹಮಾನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ ಗೊತ್ತೇ?

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಮೂಲತಃ ಹಿಂದೂ ಧರ್ಮದ ದಿಲೀಪ್ ಕುಮಾರ್. 23ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ಇಸ್ಲಾಂಗೆ ಮತಾಂತರಗೊಂಡರು. ತಂದೆಯ ನಿಧನದ ನಂತರ ಆರ್ಥಿಕ ಸಂಕಷ್ಟ ಎದುರಿಸಿದ ಕುಟುಂಬಕ್ಕೆ ಸೂಫಿ ಸಂತ ಖಾದ್ರಿ ಸಾಹೇಬ್ ಪ್ರಭಾವದಿಂದ ಮಾನಸಿಕ ಶಾಂತಿ ದೊರೆಯಿತು. ಈ ಶಾಂತಿಯೇ ಇಸ್ಲಾಂ ಧರ್ಮ ಸ್ವೀಕರಿಸಲು ಮುಖ್ಯ ಕಾರಣವೆಂದು ರೆಹಮಾನ್ ತಿಳಿಸಿದ್ದಾರೆ.

ಹಿಂದೂ ಆಗಿದ್ದ ಎಆರ್​ ರೆಹಮಾನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ ಗೊತ್ತೇ?
ರೆಹ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 20, 2026 | 8:09 AM

Share

ಮ್ಯೂಸಿಕ್ ಡೈರೆಕ್ಟರ್ ಎ.ಆರ್. ರೆಹಮಾನ್ (Ar Rahman) ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರು ಅನೇಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆಯ ಕಾರಣಕ್ಕೆ ಅವರಿಗೆ ಆಸ್ಕರ್ ಅವಾರ್ಡ್ ಕೂಡ ಸಿಕ್ಕಿದೆ ಎಂಬುದು ವಿಶೇಷ. ಧರ್ಮದ ಕಾರಣಕ್ಕೆ ಅವರಿಗೆ ಬಾಲಿವುಡ್​​ನಲ್ಲಿ ಕೆಲಸ ಸಿಗುತ್ತಿಲ್ಲ ಎಂದಿದ್ದರು. ಇದು ವಿವಾದ ಆಗಿತ್ತು. ಹಾಗಾದರೆ ರೆಹಮಾನ್ ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಂಡಿದ್ದು ಏಕೆ ಎಂಬ ವಿಷಯದ ಬಗ್ಗೆ ಇಲ್ಲಿದೆ ಮಾಹಿತಿ.

ಎ.ಆರ್. ರೆಹಮಾನ್ ಧರ್ಮದಿಂದ ಮುಸ್ಲಿಂ. ಆದರೆ ಅವರು ಹಿಂದೂವಾಗಿ ಜನಿಸಿದರು ಎಂದು ಬಹಳ ಕಡಿಮೆ ಜನರಿಗೆ ತಿಳಿದಿದೆ. ನಂತರ ಅವರು ಇಸ್ಲಾಂಗೆ ಮತಾಂತರಗೊಂಡರು. ಎ.ಆರ್. ರೆಹಮಾನ್ ನಾಲ್ಕು ವರ್ಷದವನಿದ್ದಾಗಿನಿಂದ ಪಿಯಾನೋ ನುಡಿಸುತ್ತಿದ್ದರು. ಅಂದಿನಿಂದ, ಸಂಗೀತ ಕ್ಷೇತ್ರದಲ್ಲಿ ಅವರ ಪ್ರಯಾಣ ಪ್ರಾರಂಭವಾಯಿತು.

ಅವರು ಮೂಲತಃ ತಮಿಳುನಾಡಿನ ಚೆನ್ನೈನವರು. ಅವರ ಹಿಂದಿನ ಹೆಸರು ದಿಲೀಪ್ ಕುಮಾರ್ ರಾಜಗೋಪಾಲ. ಇಸ್ಲಾಂಗೆ ಮತಾಂತರಗೊಂಡ ನಂತರ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಅವರ ತಂದೆಯೂ ಪ್ರಸಿದ್ಧ ಸಂಗೀತಗಾರರಾಗಿದ್ದರು. ಎ.ಆರ್. ರೆಹಮಾನ್ 9 ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು.

ತಂದೆಯ ಮರಣದ ನಂತರ, ದಿಲೀಪ್ ಕುಮಾರ್ (ಈಗ ರೆಹಮಾನ್) ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡರು. ಆರಂಭಿಕ ದಿನಗಳಲ್ಲಿ, ದಿಲೀಪ್ ಕುಮಾರ್ ಕುಟುಂಬವು ದೊಡ್ಡ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಯಿತು. ದಿಲೀಪ್ ಕುಮಾರ್ ಅವರ ಕುಟುಂಬವು ಅವರ ತಂದೆಯ ಸಂಗೀತ ವಾದ್ಯಗಳನ್ನು ಬಾಡಿಗೆಗೆ ನೀಡುವ ಮೂಲಕ ಜೀವನ ನಡೆಸುತ್ತಿದ್ದರು. ದಿಲೀಪ್ ಕುಮಾರ್ ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ.

ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

ಆದರೆ ಅವರಿಗೆ ಸಂಗೀತ ಮತ್ತು ಸಂಗೀತ ವಾದ್ಯಗಳ ಬಗ್ಗೆ ತುಂಬಾ ಒಲವು ಇತ್ತು. ರೆಹಮಾನ್ ಹಾಗೂ ಕಟುಂಬ ಖಾದ್ರಿ ಸಾಹೇಬ್ ಎಂಬ ಸುಫಿ ಪೀರ್ (ಸಂತ) ಅವರನ್ನು ಭೇಟಿಯಾದರು. ಈ ಸುಫಿ ಸಂತನ ಪ್ರಭಾವದಿಂದ ರೆಹಮಾನ್ ಅವರ ತಾಯಿ ಮತ್ತು ಕುಟುಂಬ ಸುಫಿ ಇಸ್ಲಾಂನತ್ತ ಆಕರ್ಷಿತರಾದರು. ಅವರು ತಮ್ಮ 23 ನೇ ವಯಸ್ಸಿನಲ್ಲಿ ಕುಟುಂಬದ ಜೊತೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ‘ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಕಾರಣ ಆ ಧರ್ಮದಿಂದ ನಮಗೆ ಸಿಕ್ಕ ಮಾನಸಿಕ ಶಾಂತಿ’ ಎಂದಿದ್ದರು ರೆಹಮಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.