‘ಗೇಮ್ ಚೇಂಜರ್’: ನನ್ನ ಕತೆಯನ್ನು ಬದಲಾಯಿಸಲಾಗಿದೆ ಕಾರ್ತಿಕ್ ಸುಬ್ಬರಾಜು ಬೇಸರ
ರಾಮ್ ಚರಣ್ ನಟಿಸಿ, ಶಂಕರ್ ನಿರ್ದೇಶಿಸಿ ದಿಲ್ ರಾಜು ಬಂಡವಾಳ ಹೂಡಿದ್ದ ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಅಸಲಿಗೆ ಆ ಸಿನಿಮಾದ ಕತೆಯನ್ನು ತಮಿಳಿನ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಬರೆದಿದ್ದರು. ಇದೀಗ ಸುಬ್ಬರಾಜು ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ತಮ್ಮ ಕತೆಯನ್ನು ವಿಪರೀತ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.

‘ರಾಮ್ ಚರಣ್ ನಟಿಸಿರುವ ‘ಗೇಮ್ ಚೇಂಜರ್’ ಕಳೆದ ವರ್ಷ ಬಿಡುಗಡೆ ಆಗಿತ್ತು. ‘ರೋಬೊ’, ‘ಅನ್ನಿಯನ್’, ‘ಬಾಯ್ಸ್’, ‘ಇಂಡಿಯನ್’ ಇನ್ನೂ ಹಲವಾರು ಕಲ್ಟ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿರುವ ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶಿಸಿದ್ದರು. ದಿಲ್ ರಾಜು ಬಂಡವಾಳ ಹೂಡಿದ್ದ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಅಸಲಿಗೆ ಆ ಸಿನಿಮಾದ ಕತೆಯನ್ನು ತಮಿಳಿನ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಬರೆದಿದ್ದರು. ಇದೀಗ ಸುಬ್ಬರಾಜು ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ತಮ್ಮ ಕತೆಯನ್ನು ವಿಪರೀತ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
‘ನಾನು ‘ಗೇಮ್ ಚೇಂಜರ್’ ಸಿನಿಮಾಕ್ಕೆ ಕತೆ ಬರೆದಿದ್ದೆ. ಶಂಕರ್ ಅವರಿಗೆ ಕತೆ ಇಷ್ಟವಾಗಿ, ಸಿನಿಮಾದ ಚಿತ್ರಕತೆಯನ್ನೂ ಬರೆಯುವಂತೆ ಹೇಳಿದರು. ಆದರೆ ನಾನು ಆಗ ‘ಮಹಾನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ನನ್ನಿಂದ ಚಿತ್ರೀಕರಣ ಬರೆಯಲು ಆಗಿರಲಿಲ್ಲ. ಅಲ್ಲದೆ, ನನ್ನ ಕತೆ ಹಿಂದಿಯ ‘ನ್ಯೂಟನ್’ ಸಿನಿಮಾದ ಮಾದರಿಯಲ್ಲಿತ್ತು. ಆದರೆ ಕೆಲ ವರ್ಷಗಳ ಬಳಿಕ ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾ ಮಾಡಿದರು. ಆದರೆ ನಾನು ಆ ಸಿನಿಮಾ ನೋಡಿದಾಗ ನನಗೆ ಬಹಳ ಆಶ್ಚರ್ಯವಾಯ್ತು, ನನ್ನ ಕತೆಯನ್ನು ಅವರು ಸಂಪೂರ್ಣವಾಗಿ ಬದಲಾಯಿಸಿದ್ದರು’ ಎಂದಿದ್ದಾರೆ ಕಾರ್ತಿಕ್.
‘ರಾಮ್ ಚರಣ್ ಅವರಂತಹ ದೊಡ್ಡ ಸ್ಟಾರ್ ನಟರು ಚಿತ್ರದಲ್ಲಿದ್ದ ಕಾರಣದಿಂದಲೇ ಈ ಬದಲಾವಣೆಗಳು ಸಂಭವಿಸಿರಬಹುದು’ ಎಂದು ಕಾರ್ತಿಕ್ ಹೇಳಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಕಾರ್ತಿಕ್ ಸುಬ್ಬರಾಜ್ ಅವರೇ ಸ್ವತಃ ‘ಗೇಮ್ ಚೇಂಜರ್’ ಚಿತ್ರವನ್ನು ನಿರ್ದೇಶಿಸಬೇಕಿತ್ತು ಎಂದು ಅನೇಕ ಸಿನಿಮಾ ಪ್ರೇಮಿಗಳು ಅಭಿಪ್ರಾಯಪಡುತ್ತಿದ್ದಾರೆ. ಕಾರ್ತಿಕ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕ್ರೈಮ್ ಡ್ರಾಮಾಗಳನ್ನು ನಿರ್ವಹಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ನಿರ್ದೇಶನದ ಸ್ಪರ್ಶವಿದ್ದರೆ ಕಥೆಯು ಇನ್ನಷ್ಟು ಆಕರ್ಷಕವಾಗಿರುತ್ತಿತ್ತು ಎಂದು ಅಭಿಮಾನಿಗಳು ನಂಬುತ್ತಾರೆ.
ಇದನ್ನೂ ಓದಿ:100 ಕೋಟಿ ದಾಟಿದ ‘ಇರುಮುಡಿ’, ರಾಮ್ ಚರಣ್, ರಶ್ಮಿಕಾ ಮೆಚ್ಚುಗೆ
‘ಗೇಮ್ ಚೇಂಜರ್’ ಸಿನಿಮಾವು ಐಎಎಸ್ ಅಧಿಕಾರಿಯೊಬ್ಬ ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಡುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಚಿತ್ರಕತೆ ಬಹಳ ಡಲ್ ಹಾಗೂ ವೀಕ್ ಆಗಿದ್ದ ಕಾರಣ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿತು. ರಾಮ್ ಚರಣ್ ವೃತ್ತಿ ಜೀವನದ ಅಟ್ಟರ್ ಫ್ಲಾಫ್ಗಳಲ್ಲಿ ಇದು ಸಹ ಒಂದಾಯ್ತು. ಶಂಕರ್ ಪಾಲಿಗೂ ಸಹ ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಸೋಲಾಗಿ ಪರಿಣಮಿಸಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




