AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಟಿ ಪ್ರಿಯಾ ಭವಾನಿ ಶಂಕರ್ ಹಾಗೂ ರಾಜ್‌ವೇಲ್ ರಾಜ್ ಮದುವೆ: ವಿಡಿಯೋ ವೈರಲ್

ಜನಪ್ರಿಯ ನಟಿ ಪ್ರಿಯಾ ಭವಾನಿ ಶಂಕರ್ ಅವರ ಮದುವೆ ನೆರವೇರಿದೆ. ಪ್ರಿಯಕರ ರಾಜ್‌ವೇಲ್ ರಾಜ್ ಜೊತೆ ಅವರು ಹಸೆಮಣೆ ಏರಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟಿರುವ ನವಜೋಡಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಮದುವೆಯ ವಿಡಿಯೋ ವೈರಲ್ ಆಗಿದೆ.

ಖ್ಯಾತ ನಟಿ ಪ್ರಿಯಾ ಭವಾನಿ ಶಂಕರ್ ಹಾಗೂ ರಾಜ್‌ವೇಲ್ ರಾಜ್ ಮದುವೆ: ವಿಡಿಯೋ ವೈರಲ್
Priya Bhavani Shankar, Rajvel Raj
ಮದನ್​ ಕುಮಾರ್​
|

Updated on: Nov 11, 2026 | 3:04 PM

Share

ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟಿ ಪ್ರಿಯಾ ಭವಾನಿ ಶಂಕರ್ ಅವರು ತಮ್ಮ ದೀರ್ಘಕಾಲದ ಪ್ರಿಯಕರ ರಾಜ್‌ವೇಲ್ ರಾಜ್ ಅವರೊಂದಿಗೆ ಬುಧವಾರ (ನವೆಂಬರ್ 11) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅತ್ಯಂತ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಈ ಜೋಡಿ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದೆ. ವೈರಲ್ ಆಗಿರುವ ವಿಶೇಷ ವಿಡಿಯೋದಲ್ಲಿ, ನವಜೋಡಿಯ ಸಂಭ್ರಮ ಹಾಗೂ ಖುಷಿಯ ಕ್ಷಣಗಳು ಸೆರೆಯಾಗಿವೆ.

ಬಿಳಿ ಬಣ್ಣದ ಕುರ್ತಾ ಧರಿಸಿದ್ದ ರಾಜ್‌ವೇಲ್ ರಾಜ್ ಅವರನ್ನು ಕುಟುಂಬದ ಮಹಿಳೆಯರು ಹೂಗುಚ್ಛಗಳೊಂದಿಗೆ ಮಂಟಪಕ್ಕೆ ಕರೆತಂದರು. ಮತ್ತೊಂದೆಡೆ, ಸಾಂಪ್ರದಾಯಿಕ ಕೆಂಪು ಮತ್ತು ಹಸಿರು-ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಪ್ರಿಯಾ ಭವಾನಿ ಶಂಕರ್ ಅವರನ್ನು ಹೂವಿನ ಛತ್ರಿಯ ಅಡಿಯಲ್ಲಿ ಮಂಟಪಕ್ಕೆ ಕರೆತರಲಾಯಿತು.

ಮಂಟಪ ತಲುಪಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಮದುವೆಯ ಶಾಸ್ತ್ರಗಳ ಸಮಯದಲ್ಲಿ ಪುರೋಹಿತರ ಸೂಚನೆಗಳನ್ನು ಪಾಲಿಸುತ್ತಾ, ಈ ಜೋಡಿ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲರ ಗಮನ ಸೆಳೆದವು. ರಾಜ್‌ವೇಲ್ ಅವರು ಪ್ರಿಯಾ ಕೊರಳಿಗೆ ತಾಳಿ ಕಟ್ಟುವ ಮೂಲಕ ಅಧಿಕೃತವಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಮದುವೆಯ ಹಿಂದಿನ ದಿನವೇ ಪ್ರಿಯಾ ಭವಾನಿ ಶಂಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಸಿರು ಬಣ್ಣದ ಸೀರೆ ಉಟ್ಟು, ತಲೆಯಲ್ಲಿ ಮಲ್ಲಿಗೆ ಹೂ ಮುಡಿದುಕೊಂಡಿದ್ದ ಫೋಟೋ ಹಂಚಿಕೊಂಡಿದ್ದರು. ಹಿನ್ನೆಲೆಯಲ್ಲಿ ಮದುವೆಯ ಸಾಂಪ್ರದಾಯಿಕ ಮಂಗಳವಾದ್ಯದ ಸಂಗೀತವನ್ನು ಬಳಸಿ, ತಾವು ಶೀಘ್ರದಲ್ಲೇ ಮದುವೆಯಾಗುತ್ತಿರುವುದಾಗಿ ಅಭಿಮಾನಿಗಳಿಗೆ ಸುಳಿವು ನೀಡಿದ್ದರು.

ಇದನ್ನೂ ಓದಿ: ನಾಗ ಚೈತನ್ಯ ಗರ್ಲ್​ಫ್ರೆಂಡ್​ ಸ್ಥಾನ ತುಂಬಲು ಬಂದ ನಟಿ ಪ್ರಿಯಾ ಭವಾನಿ ಶಂಕರ್​; ಏನ್​ ಸಮಾಚಾರ?

ಕಾಲೇಜು ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದ ಪ್ರಿಯಾ ಮತ್ತು ರಾಜ್‌ವೇಲ್, ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.

ಪ್ರಿಯಾ ಭವಾನಿ ಶಂಕರ್ ಅವರು ತಮ್ಮ ವೃತ್ತಿಜೀವನವನ್ನು ತಮಿಳಿನ ಸುದ್ದಿ ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಪ್ರಾರಂಭಿಸಿದರು. 2014ರಲ್ಲಿ ‘ಕಲ್ಯಾಣಂ ಮುದಲ್ ಕಾದಲ್ ವರೈ’ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಅವರು, ‘ಜೋಡಿ ನಂ. 1’ ಮತ್ತು ‘ಸೂಪರ್ ಸಿಂಗರ್’ ನಂತಹ ಜನಪ್ರಿಯ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?