AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ಚಿತ್ರರಂಗದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ

ತಮಿಳು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ಡೆಲ್ಲಿ ಗಣೇಶ್ ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಗಣೇಶ್ ಕೆಲಸ ಮಾಡಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ತಮಿಳು ಚಿತ್ರರಂಗದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ
ಮಂಜುನಾಥ ಸಿ.
|

Updated on: Nov 10, 2024 | 7:56 AM

Share

ತಮಿಳಿನ ನೂರಾರು ಸಿನಿಮಾಗಳಲ್ಲಿ ನಟಿಸಿರುವ ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ಡೆಲ್ಲಿ ಗಣೇಶ್ ಅವರ ಪುತ್ರ ಮಹದೇವನ್ ಅವರು ಈ ವಿಷಯ ಖಾತ್ರಿಪಡಿಸಿದ್ದು, ‘ಡೆಲ್ಲಿ ಗಣೇಶ್ ಅವರು, ನಿನ್ನೆ (ನವೆಂಬರ್ 10) ರ ತಡರಾತ್ರಿ 11 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದಿದ್ದಾರೆ. ಡೆಲ್ಲಿ ಗಣೇಶನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಅವರು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡೆಲ್ಲಿ ಗಣೇಶ್ ನಟಿಸಿದ್ದಾರೆ.

ಕೆ ಬಾಲಚಂಧರ್ ಅವರಂಥಹಾ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್, ಹಲವು ಸ್ಟಾರ್ ನಟ-ನಟಿಯರೊಟ್ಟಿಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್​ ಪಾತ್ರಗಳಲ್ಲಿ ನಟಿಸಿದ ಡೆಲ್ಲಿ ಗಣೇಶ್, ವಯಸ್ಸಾದಂತೆ, ತಂದೆ, ಮಾವ, ಚಿಕ್ಕಪ್ಪ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟನೆ ಮಾಡಿದ್ದಾರೆ.

ಇದನ್ನೂ ಓದಿ:ರೂಪೇಶ್ ಶೆಟ್ಟಿಯ ತಮಿಳು ಸಿನಿಮಾ ಶೂಟಿಂಗ್ ವಿಡಿಯೋ

1976 ರಿಂದಲೂ ನಟಿಸುತ್ತಿರುವ ಡೆಲ್ಲಿ ಗಣೇಶ್, ತಮಿಳು, ಮಲಯಾಳ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾದಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ಎರಡು ವೆಬ್ ಸರಣಿಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ವಿಶೇಷವೆಂದರೆ ಶಂಕರ್ ನಾಗ್ ನಿರ್ದೇಶನ ಮಾಡಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಸಹ ಡೆಲ್ಲಿ ಗಣೇಶ್ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು. ಡೆಲ್ಲಿ ಗಣೇಶ್ ನಿಧನದ ಬಗ್ಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ