AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಜೊತೆಗಿನ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ ಲೋಕೇಶ್ ಕನಕರಾಜ್

ಖ್ಯಾತ ನಟ ಅಲ್ಲು ಅರ್ಜುನ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ಭಾರಿ ನಿರೀಕ್ಷೆ ಮನೆಮಾಡಿದೆ. ಲೋಕೇಶ್ ಕನಕರಾಜ್ ಜೊತೆ ಅಲ್ಲು ಅರ್ಜುನ್ ಅವರು ಸಿನಿಮಾ ಮಾಡುವುದು ಖಚಿತ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಅನುಮಾನ ಮೂಡಿತ್ತು. ಆದರೆ ಈಗ ವದಂತಿಗಳಿಗೆ ತೆರೆ ಎಳೆಯಲಾಗಿದೆ.

ಅಲ್ಲು ಅರ್ಜುನ್ ಜೊತೆಗಿನ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ ಲೋಕೇಶ್ ಕನಕರಾಜ್
Lokesh Kanagaraj, Allu Arjun
ಮದನ್​ ಕುಮಾರ್​
|

Updated on: Oct 12, 2026 | 5:31 PM

Share

ಟಾಲಿವುಡ್‌ನಿಂದ ಹಿಡಿದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿರುವ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ನಟ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಹೊಸ ಉತ್ಸಾಹ ಮೂಡಿದೆ. ಇಬ್ಬರೂ ಒಟ್ಟಿಗೆ ಇರುವ ಹೊಸ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಲೋಕೇಶ್ ಕನಕರಾಜ್ ಅವರು ಚಿತ್ರದ ಕುರಿತಾದ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಪ್ರಾಜೆಕ್ಟ್ ನಿಂತುಹೋಗಿದೆ ಎಂಬ ಗಾಸಿಪ್ ಹರಡಿತ್ತು. ಆ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಚಿತ್ರವು ನಿಂತುಹೋಗಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಅಲ್ಲು ಅರ್ಜುನ್ ಅವರಿಗೆ ಸ್ಕ್ರಿಪ್ಟ್ ಇಷ್ಟವಾಗದೆ ಅವರು ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ವದಂತಿಗಳು ಅಭಿಮಾನಿಗಳಲ್ಲಿ ಭಾರೀ ಗೊಂದಲ ಉಂಟುಮಾಡಿದ್ದವು. ಆದರೆ, ಈ ಎಲ್ಲ ಊಹಾಪೋಹಗಳಿಗೆ ಲೋಕೇಶ್ ಕನಕರಾಜ್ ಬ್ರೇಕ್ ಹಾಕಿದ್ದಾರೆ.

ಲೋಕೇಶ್ ಕನಕರಾಜ್ ಅವರು ತಮ್ಮ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ರೋಚಕ ಅಪ್‌ಡೇಟ್ ಸಿಗಲಿದೆ ಎಂದು ಬರೆದುಕೊಂಡು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್ ಅವರ ತಂಡ ಕೂಡ ಈ ಸಿನಿಮಾದ ಕೆಲಸಗಳು ಜಾರಿಯಲ್ಲಿವೆ ಎಂದು ಸ್ಪಷ್ಟಪಡಿಸಿದೆ.

‘ಪುಷ್ಪ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಮುಂದಿನ ಹೆಜ್ಜೆ ಇಡುತ್ತಿದ್ದಾರೆ. ತಮ್ಮದೇ ಆದ ಸಿನಿಮಾ ಶೈಲಿ ಮತ್ತು ಆಕ್ಷನ್ ಕಥಾಹಂದರದಿಂದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಲೋಕೇಶ್ ಕನಕರಾಜ್ ಜೊತೆಗೆ ಅಲ್ಲು ಅರ್ಜುನ್ ಕೈಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಈ ಇಬ್ಬರು ಒಂದಾಗುತ್ತಿರುವುದು ಈ ಪ್ರಾಜೆಕ್ಟ್ ಮೇಲೆ ಸಹಜವಾಗಿಯೇ ಸಿನಿಪ್ರಿಯರಿಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ರಾಕಾ’ ಸಿನಿಮಾ ಮೂಲಕ ಗಿನ್ನೆಸ್ ದಾಖಲೆ ಬರೆದ ಅಲ್ಲು ಅರ್ಜುನ್, ಅಟ್ಲಿ

ಕಥೆ ಹಾಗೂ ಪಾತ್ರವರ್ಗದ ಕುರಿತು ಚಿತ್ರತಂಡವು ಇನ್ನೂ ಹೆಚ್ಚಿನ ಮಾಹಿತಿಯನ್ನು ಗೌಪ್ಯವಾಗಿಟ್ಟಿದೆ. ಆದಾಗ್ಯೂ, ಲೋಕೇಶ್ ಕನಕರಾಜ್ ಅವರ ಈ ಲೇಟೆಸ್ಟ್ ಫೋಟೋದಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More