AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಸಖತ್ ವಿವಾದ ಸೃಷ್ಟಿಸಿದ ದೃಶ್ಯಗಳಿವು; ಆ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ರಾಧಿಕಾ ಆಪ್ಟೆ ಅವರಿಂದ ಹಿಡಿದು ತಮನ್ನಾ ಭಾಟಿಯಾವರೆಗೆ ಅನೇಕರು ಈ ರೀತಿ ವಿವಾದಗಳನ್ನು ಸೃಷ್ಟಿ ಮಾಡಿದ್ದಿದೆ. ‘ಲಸ್ಟ್​ ಸ್ಟೋರಿಸ್ 2’, ‘ಪಾರ್ಚಡ್’ ಸೇರಿ ಅನೇಕ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಾಲಿವುಡ್​ನಲ್ಲಿ ಸಖತ್ ವಿವಾದ ಸೃಷ್ಟಿಸಿದ ದೃಶ್ಯಗಳಿವು; ಆ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ತಮನ್ನಾ
TV9 Web
| Edited By: |

Updated on:Nov 07, 2023 | 12:42 PM

Share

ಚಿತ್ರರಂಗಕ್ಕೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಈಗಾಗಲೇ ಹಲವು ವಿವಾದಗಳು ಹುಟ್ಟಿಕೊಂಡಿವೆ. ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಹಲವು ಸೆಲೆಬ್ರಿಟಿಗಳು ಚರ್ಚೆ ಆಗಿದ್ದಿದೆ. ರಾಧಿಕಾ ಆಪ್ಟೆ (Radhika Apte) ಅವರಿಂದ ಹಿಡಿದು ತಮನ್ನಾ ಭಾಟಿಯಾವರೆಗೆ ಅನೇಕರು ಈ ರೀತಿ ವಿವಾದಗಳನ್ನು ಸೃಷ್ಟಿ ಮಾಡಿದ್ದಿದೆ. ‘ಲಸ್ಟ್​ ಸ್ಟೋರಿಸ್ 2’, ‘ಪಾರ್ಚಡ್’ ಸೇರಿ ಅನೇಕ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಲಸ್ಟ್ ಸ್ಟೋರಿಸ್ 2’

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ನಿಜ ಜೀವನದ ಲವರ್ಸ್​. ಇವರು ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ‘ಲಸ್ಟ್ ಸ್ಟೋರಿಸ್ 2’ ಚಿತ್ರದ ಮೂಲಕ ತಮನ್ನಾ ಸಾಕಷ್ಟು ಸುದ್ದಿ ಆಗಿದ್ದರು. ಅವರು ಮಾಡಿದ ಕಿಸ್ಸಿಂಗ್ ದೃಶ್ಯವನ್ನು ಅನೇಕರು ಟೀಕೆ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ನೋ ಕಿಸ್ಸಿಂಗ್ ಪಾಲಿಸಿಯನ್ನು ಅವರು ಫಾಲೋ ಮಾಡುತ್ತಿದ್ದರು.

‘ಪಾರ್ಚಡ್​’

ರಾಧಿಕಾ ಆಪ್ಟೆ ಅವರು ಹಲವು ಸಿನಿಮಾಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ರಾಧಿಕಾ ಅವರು ‘ಪಾರ್ಚರ್ಡ್’ ಸಿನಿಮಾದಲ್ಲಿ ಬೋಲ್ಡ್ ಆಗಿ ಮಿಂಚಿದ್ದರು. ಈ ಸಿನಿಮಾ ಮೇಲೆ ಬ್ಯಾನ್ ಹೇರಬೇಕು ಎಂದು ಅನೇಕರು ಹೇಳಿದ್ದರು.

‘ಮರ್ಡರ್’

ಇಮ್ರಾನ್ ಹಷ್ಮಿ ಹಾಗೂ ಮಲ್ಲಿಕಾ ಶೆರಾವತ್ ಅವರು ‘ಮರ್ಡರ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 2004ರಲ್ಲಿ ರಿಲೀಸ್ ಆಯಿತು. ಇವರ ಮಧ್ಯೆ ಇಂಟಿಮೇಟ್​ ದೃಶ್ಯಗಳು ಸಾಕಷ್ಟು ಸದ್ದು ಮಾಡಿತ್ತು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು.

ಸಿದ್ಧಾರ್ಥ

ಇಂಡೋ ಅಮೆರಿಕನ್​ ಸಿನಿಮಾ ‘ಸಿದ್ದಾರ್ಥ’ ಚಿತ್ರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. 1972ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ನ್ಯೂಡ್ ದೃಶ್ಯ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ದೃಶ್ಯದ ಬಗ್ಗೆ ಪ್ರೇಕ್ಷಕರು ಅಪಸ್ವರ ತೆಗೆದಿದ್ದರು. ಸಿನಿಮಾ ಬ್ಯಾನ್ ಮಾಡಲು ಒತ್ತಾಯ ಹೇರಿದ್ದರು.

ಕಾಮಸೂತ್ರ ಎ ಟೇಲ್ ಆಫ್ ಲವ್

ಶೀರ್ಷಿಕೆ ಮೂಲಕವೇ ವಿವಾದ ಸೃಷ್ಟಿ ಮಾಡಿತ್ತು ‘ಕಾಮಸೂತ್ರ ಎ ಟೇಲ್ ಆಫ್ ಲವ್’ ಸಿನಿಮಾ. ಬೋಲ್ಡ್ ದೃಶ್ಯ ಹಾಗೂ ಗ್ರಾಫಿಕ್ಸ್​ನಿಂದ ಮಾಡಲ್ಪಟ್ಟ ಸೆಕ್ಸ್ ದೃಶ್ಯ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ರೇಖಾ ಹಾಗೂ ಇಂದಿರಾ ವರ್ಮ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕುಸ್ತಿ ಅಖಾಡ; ಮತ್ತದೇ ಜಗಳ, ಕಿತ್ತಾಟ

ಫೈರ್

1996ರಲ್ಲಿ ‘ಫೈರ್’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಶಬಾನಾ ಆಜ್ಮಿ ಹಾಗೂ ನಂದಿತಾ ದಾಸ್ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡವರ ಸೆಕ್ಸ್ ದೃಶ್ಯ ಗಮನ ಸೆಳೆದಿತ್ತು.

ಲಿಪ್​ಸ್ಟಿಕ್ ಅಂಡರ್​ ಮೈ ಬುರ್ಖಾ

2017ರಲ್ಲಿ ರಿಲೀಸ್ ಆದ ಲಿಪ್​ಸ್ಟಿಕ್ ಅಂಡರ್​ ಮೈ ಬುರ್ಖಾ ಚಿತ್ರ ಚರ್ಚೆ ಹುಟ್ಟುಹಾಕಿತ್ತು. ಮಹಿಳೆಯರ ಲೈಂಗಿಕತೆ ಬಗ್ಗೆ ಈ ಚಿತ್ರದಲ್ಲಿ ಚರ್ಚೆ ಆಗಿತ್ತು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Tue, 7 November 23

Follow Us
TV9 Web
TV9 Web

TV9 Kannada

Read More