ಮಹೇಶ್​ ಬಾಬು ಪುತ್ರ ಗೌತಮ್​ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ‘ಪ್ರಿನ್ಸ್​’

ಪುತ್ರ ಗೌತಮ್​ ಪದವಿ ಶಿಕ್ಷಣ ಮುಗಿಸಿದ್ದಕ್ಕೆ ಮಹೇಶ್​ ಬಾಬು ಅವರಿಗೆ ಸಖತ್​ ಹೆಮ್ಮೆ ಆಗಿದೆ. ಕಾನ್ವಕೇಷನ್​ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದಾರೆ. ಮಗನ ಜೊತೆ ಇರುವ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ. ಮಹೇಶ್​ ಬಾಬು ಮಗಳು ಸಿತಾರಾ ಹಾಗೂ ಪತ್ನಿ ನಮ್ರತಾ ಶಿರೋಡ್ಕರ್​ ಕೂಡ ಸಾಥ್​ ನೀಡಿದ್ದಾರೆ.

ಮಹೇಶ್​ ಬಾಬು ಪುತ್ರ ಗೌತಮ್​ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ‘ಪ್ರಿನ್ಸ್​’
ಕುಟುಂಬದ ಜೊತೆ ಮಹೇಶ್​ ಬಾಬು
Follow us
ಮದನ್​ ಕುಮಾರ್​
|

Updated on: May 26, 2024 | 9:55 PM

ಟಾಲಿವುಡ್​ ನಟ ಮಹೇಶ್​ ಬಾಬು (Mahesh Babu) ಅವರು ಸಿನಿಮಾದ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಫ್ಯಾಮಿಲಿಗಾಗಿ ಸಮಯ ಮೀಸಲಿಡುವುದನ್ನು ತಪ್ಪಿಸುವುದಿಲ್ಲ. ಈಗ ಪುತ್ರ ಗೌತಮ್​ ಘಟ್ಟಮನೇನಿಯ ಸ್ಪೆಷಲ್​ ದಿನದಲ್ಲಿ ಮಹೇಶ್​ ಬಾಬು ಅವರು ಭಾಗಿ ಆಗಿದ್ದಾರೆ. ಹೌದು, ಗೌತಮ್​ ಘಟ್ಟಮನೇನಿ (Gautam Ghattamaneni) ಪದವಿ ಶಿಕ್ಷಣ ಪೂರೈಸಿದ್ದಾರೆ. ಪುತ್ರನ ಕಾನ್ವಕೇಷನ್​ ದಿನದಲ್ಲಿ ಮಹೇಶ್​ ಬಾಬು ಅವರು ಕುಟುಂಬ (Mahesh Babu Family) ಸಮೇತರಾಗಿ ಹಾಜರಿ ಹಾಕಿದ್ದಾರೆ. ಅಲ್ಲದೇ ಸೋಶಿಯಲ್​ ಮೀಡಿಯಾದಲ್ಲಿ ಮಗನ ಬಗ್ಗೆ ಹೆಮ್ಮೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಮಕ್ಕಳು ಸಾಧನೆ ಮಾಡಿದಾಗ ತಂದೆ-ತಾಯಿಗೆ ಎಲ್ಲಿಲ್ಲದ ಖುಷಿ ಆಗುತ್ತದೆ. ಆ ಖುಷಿಯ ಕ್ಷಣವನ್ನು ಮಹೇಶ್​ ಬಾಬು ಕೂಡ ಮಿಸ್​ ಮಾಡಿಕೊಳ್ಳುವವರಲ್ಲ. ಮಹೇಶ್​ ಬಾಬು ಅವರ ಪುತ್ರ ಗೌತಮ್​ ಘಟ್ಟಮನೇನಿ ಪದವಿ ಶಿಕ್ಷಣ ಮುಗಿಸಿದ್ದಾರೆ. ಆ ಪ್ರಯುಕ್ತ ನಡೆದ ಕಾನ್ವಕೇಷನ್​ ಸಮಾರಂಭದಲ್ಲಿ ಮಹೇಶ್​ ಬಾಬು, ಪತ್ನಿ ನಮ್ರತಾ ಶಿರೋಡ್ಕರ್​, ಮಗಳು ಸಿತಾರಾ ಘಟ್ಟಮನೇನಿ ಕೂಡ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ವಿಫಲವಾಯ್ತಾ ರಾಜಮೌಳಿ ಪ್ರಯತ್ನ? ಮಹೇಶ್​ ಬಾಬು ಲುಕ್​ ಬಹಿರಂಗ

ಗೌತಮ್​ ಘಟ್ಟಮನೇನಿ ಜೊತೆ ಸಿತಾರಾ, ಮಹೇಶ್​ ಬಾಬು, ನಮ್ರತಾ ಶಿರೋಡ್ಕರ್​ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮನೆಮಗನ ಬಗ್ಗೆ ಎಲ್ಲರೂ ಹೆಮ್ಮೆಯಿಂದ ಮಾತನಾಡಿದ್ದಾರೆ. ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಅಭಿಮಾನಿಗಳು ಮತ್ತು ಆಪ್ತರು ಕೂಡ ಗೌತಮ್​ ಘಟ್ಟಮನೇನಿಗೆ ಅಭಿನಂದನೆ ತಿಳಿಸಿದ್ದಾರೆ.

ಸಿನಿಮಾ ಬಗ್ಗೆ ಹೇಳುವುದಾದರೆ, ಮಹೇಶ್​ ಬಾಬು ಅವರು ಸದ್ಯ ರಾಜಮೌಳಿ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ಸಕಲ ತಯಾರಿ ನಡೆದಿದೆ. ಇದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಎಸ್​ಎಸ್​ಎಂಬಿ 29’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಅವರ ಗೆಟಪ್​ ಬದಲಾಗಲಿದೆ. ಅದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಮಹೇಶ್​ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ಆದ್ದರಿಂದ ಅಭಿಮಾನಿಗಳ ನಿರೀಕ್ಷೆ ಜೋರಾಗಿದೆ. ಆದಷ್ಟು ಬೇಗ ಈ ಸಿನಿಮಾ ಬಗ್ಗೆ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.