AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗಲಿದ ತಾತನ ನೆನೆದು ಭಾವುಕ ಪತ್ರ ಬರೆದ ಮಹೇಶ್​ ಬಾಬು ಪುತ್ರಿ ಸಿತಾರ

ಅಗಲಿದ ತಮ್ಮ ತಾತನನ್ನು ನೆನೆದು ನಟ ಮಹೇಶ್​ ಬಾಬು ಮಕ್ಕಳಾದ ಸಿತಾರಾ, ಗೌತಮ್​ ಭಾವುಕ ಪತ್ರವನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಗಲಿದ ತಾತನ ನೆನೆದು ಭಾವುಕ ಪತ್ರ ಬರೆದ ಮಹೇಶ್​ ಬಾಬು ಪುತ್ರಿ ಸಿತಾರ
ತಾತನೊಂದಿಗೆ ಸಿತಾರಾ, ಗೌತಮ್
TV9 Web
| Edited By: |

Updated on:Nov 16, 2022 | 6:44 PM

Share

ನಟ ಮಹೇಶ್ ಬಾಬು (Mahesh Babu) ಕುಟುಂಬಕ್ಕೆ ಒಂದಾದ ಮೇಲೆ ಒಂದು ಆಘಾತಗಳು ಎದುರಾಗುತ್ತಿವೆ. ಕಳೆದ ತಿಂಗಳ ಹಿಂದೆಯಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದ ನಟ ಮಹೇಶ್​ ಬಾಬು ಮಂಗಳವಾರ (ನ. 15) ತಮ್ಮ ತಂದೆ ‘ಸೂಪರ್​ ಸ್ಟಾರ್​’ ಕೃಷ್ಣ (Super Star Krishna) ಅವರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮಹೇಶ್​​ ಬಾಬು ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ಮಹೇಶ್​ ಬಾಬು ತಂದೆ ಸಾವಿಗೆ ಇಡೀ ಟಾಲಿವುಡ್​ ನಟ, ನಟಿಯರು, ಗಣ್ಯರು ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದರು. ಸದ್ಯ ನಟ ಮಹೇಶ್​ ಬಾಬು ಮಕ್ಕಳಾದ ಸಿತಾರಾ, ಗೌತಮ್​ ಅಗಲಿದ ತಮ್ಮ ತಾನನನ್ನು ನೆನೆದು ಭಾವುಕ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪುತ್ರಿ ಸಿತಾರಾ ತನ್ನ ತಾತನ ಫೋಟೋ ಶೇರ್​ ಮಾಡಿಕೊಂಡಿದ್ದು, ‘ಇನ್ನು ನಾವು ಒಟ್ಟಿಗೆ ಕೂತು ಊಟ ಮಾಡುವುದಕ್ಕೆ ಆಗಲ್ಲ. ನೀವು ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದೀರಿ. ಪ್ರತಿನಿತ್ಯ ನಾನು ನಗುವಂತೆ ನೋಡಿಕೊಂಡಿದ್ದೀರಿ. ಇನ್ನು ಅವೆಲ್ಲಾ ನೆನಪು ಮಾತ್ರ. ನೀವು ನನ್ನ ನಿಜವಾದ ಹೀರೋ. ಒಂದು ದಿನ ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ತಾತ’ ಎಂದು ಸಿತಾರಾ ತನ್ನ ತಾತನೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾಳೆ.

ಅದೇ ರೀತಿಯಾಗಿ ಮಹೇಶ್ ಬಾಬು ಪುತ್ರ ಗೌತಮ್​​ ಕೂಡ ಭಾವನಾತ್ಮಕ ಪತ್ರ ಹಂಚಿಕೊಂಡಿದ್ದು, ‘ನೀವು ಎಲ್ಲೇ ಇರಿ, ಹೇಗೆ ಇರಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ಕೂಡ ನನ್ನನ್ನು ಪ್ರೀತಿಸುತ್ತೀರಾ ಎಂದು ಗೊತ್ತು. ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ ತಾತ’ ಎಂದು ಗೌತಮ್​ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬರೆದುಕೊಂಡಿದ್ದಾನೆ.

ಮಹೇಶ್​ ಬಾಬು ಪುತ್ರಿ ಸಿತಾರಾ ತನ್ನದೇ ಯೂಟ್ಯೂಬ್​​ ಚಾನಲ್​ ಹೊಂದಿದ್ದು, ಸಾಕಷ್ಟು ನಟ, ನಟಿಯರ ಸಂದರ್ಶನಗಳನ್ನು ಮಾಡಿದ್ದಾಳೆ. ಅಷ್ಟೇ ಅಲ್ಲದೇ ತಂದೆ ಅಭಿನಯನದ “ಸರ್ಕಾರಿವಾರು ಪಾಟಾ” ಚಿತ್ರದ ಪ್ರಮೋಷನಲ್​ ಹಾಡಿಗೆ ಡ್ಯಾನ್ಸ್​ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾಳೆ. ಮುಂದಿನ ದಿನಗಳಲ್ಲಿ ಸಿತಾರಾ ಚಿತ್ರರಂಗಕ್ಕೂ ಬರಲು ಸಕಲ ಸಿದ್ಧತೆ ನಡೆಸಿದ್ದಾಳೆ.

ಇನ್ನು ಪದ್ಮಾಲಯ ಸ್ಟುಡಿಯೋಸ್​ನಲ್ಲಿ ಇಂದು (ನ. 16) ಮಧ್ಯಾಹ್ನ 12 ವರೆಗೆ ಸಾರ್ವಜನಿಕರಿಗಾಗಿ ಕೃಷ್ಣ ಘಟ್ಟಮನೇನಿ ಅವರ ಅಂತಿಮ ದರ್ಶನಕ್ಕ ಅವಕಾಶ ನೀಡಲಾಗಿತ್ತು. ಆ ಬಳಿಕ ಅವರ ಪಾರ್ಥೀವ ಶರೀರವನ್ನು ಮಹಾಪ್ರಸ್ಥಾನಂಗೆ ಶಿಫ್ಟ್​ ಮಾಡಲಾಯಿತು. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:42 pm, Wed, 16 November 22