AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Malavika Sreenath: ಆಡಿಷನ್​ಗೆ ಕರೆದು ರಾಜಿ ಆಗುವಂತೆ ಒತ್ತಾಯ ಹೇರಿದ್ದ ಕಾಮುಕ; ಮಾಳವಿಕಾ ಶ್ರೀನಾಥ್​ ತೆರೆದಿಟ್ಟ ಕರಾಳ ಘಟನೆ

Casting Couch: ಕಾಸ್ಟಿಂಗ್​ ಕೌಚ್​ ಬಗ್ಗೆ ಮಾಳವಿಕಾ ಶ್ರೀನಾಥ್​ ಮಾತನಾಡಿದ್ದಾರೆ. ‘ನಾನು ಡ್ರೆಸಿಂಗ್​ ರೂಮ್​ನಲ್ಲಿ ಇದ್ದಾಗ ಆತ ಹಿಂದಿನಿಂದ ಬಂದು ತಬ್ಬಿಕೊಂಡ’ ಎಂದು ಕೆಟ್ಟ ದಿನವನ್ನು ನೆನಪಿಸಿಕೊಂಡಿದ್ದಾರೆ.

Malavika Sreenath: ಆಡಿಷನ್​ಗೆ ಕರೆದು ರಾಜಿ ಆಗುವಂತೆ ಒತ್ತಾಯ ಹೇರಿದ್ದ ಕಾಮುಕ; ಮಾಳವಿಕಾ ಶ್ರೀನಾಥ್​ ತೆರೆದಿಟ್ಟ ಕರಾಳ ಘಟನೆ
ಮಾಳವಿಕಾ ಶ್ರೀನಾಥ್
ಮದನ್​ ಕುಮಾರ್​
|

Updated on: Apr 11, 2023 | 2:27 PM

Share

ಮುಖ್ಯಾಂಶಗಳು

  • ಮೂರು ವರ್ಷಗಳ ಹಿಂದೆ ಆಡಿಷನ್​ ವೇಳೆ ನಡೆದಿತ್ತು ಕಾಸ್ಟಿಂಗ್ ಕೌಚ್​ ಕಹಿ ಘಟನೆ
  • ಮಂಜು ವಾರಿಯರ್​ ಮಗಳ ಪಾತ್ರಕ್ಕಾಗಿ ನಡೆದಿದ್ದ ಆಡಿಷನ್​ನಲ್ಲಿ ಮಾಳವಿಕಾ ಶ್ರೀನಾಥ್​ ಭಾಗಿ
  • ಅಂದಿನ ಕರಾಳ ಅನುಭವದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ನಟಿ ಮಾಳವಿಕಾ ಶ್ರೀನಾಥ್​

ಹೊರಗಿನಿಂದ ನೋಡುವವರಿಗೆ ಚಿತ್ರರಂಗ ತುಂಬಾ ಕಲರ್​ಫುಲ್​ ಆಗಿ ಕಾಣುತ್ತದೆ. ಆದರೆ ಅಸಲಿ ವಿಷಯ ಹಾಗೆ ಇರುವುದಿಲ್ಲ. ಬಣ್ಣದ ಲೋಕದಲ್ಲೂ ಕಾಮುಕರ ಹಾವಳಿ ಇರುತ್ತದೆ. ಅನೇಕ ನಟಿಯರು ಕಾಸ್ಟಿಂಗ್​ ಕೌಚ್​ (Casting Couch) ಪಿಡುಗಿನಿಂದ ಬೇಸತ್ತಿದ್ದಾರೆ. ಈ ಹಿಂದೆ ಭಾರತದಲ್ಲಿ ಮೀಟೂ (Me Too) ಆಂದೋಲನ ಜೋರಾಗಿದ್ದಾಗ ಹಲವು ನಟಿಯರು ಈ ಕುರಿತು ಮಾತನಾಡಿದ್ದರು. ಶ್ರುತಿ ಹರಿಹರನ್​, ತನುಶ್ರೀ ದತ್ತ ಮುಂತಾದ ಜನಪ್ರಿಯ ಹೀರೋಯಿನ್​ಗಳು ಧೈರ್ಯವಾಗಿ ತಮ್ಮ ಅನುಭವ ಹಂಚಿಕೊಂಡಿದ್ದರು. ಆ ನಂತರವೂ ಕಾಸ್ಟಿಂಗ್​ ಕೌಚ್​ ಹಾವಳಿ ನಿಂತಿಲ್ಲ. ಈಗ ನಟಿ ಮಾಳವಿಕಾ ಶ್ರೀನಾಥ್​ (Malavika Sreenath) ಅವರು ಒಂದು ಕಹಿ ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ಆಡಿಷನ್​ಗೆ ಕರೆದು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿಯ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಆತನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.

ಮಾಳವಿಕಾ ಶ್ರೀನಾಥ್​ ಅವರು ಫಿಲ್ಮಿ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ‘ಮಧುರಂ’, ‘ಸ್ಯಾಟರ್ಡೇ ನೈಟ್​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘24’ ವಾಹಿನಿಯ ‘ಹ್ಯಾಪಿ ಟು ಮೀಟ್​ ಯೂ’ ಸಂದರ್ಶನದಲ್ಲಿ ಅವರು ಮೀಟೂ ವಿಚಾರದ ಬಗ್ಗೆ ಬಾಯಿಬಿಟ್ಟಿದ್ದಾರೆ. ಮೂರು ವರ್ಷದ ಹಿಂದೆ ಅವರೊಂದು ಆಡಿಷನ್​ ನೀಡಿದ್ದರು. ಮಂಜು ವಾರಿಯರ್​ ಮಗಳ ಪಾತ್ರಕ್ಕಾಗಿ ಆಡಿಷನ್​ ಕರೆಯಲಾಗಿತ್ತು. ಆಗ ಅವರಿಗೆ ಕಾಸ್ಟಿಂಗ್​ ಕೌಚ್​ ಅನುಭವ ಆಗಿತ್ತು. ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ

ಇದನ್ನೂ ಓದಿ
Image
Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
Image
Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
Image
ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
Image
ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್​; ಭಯಾನಕ ಸತ್ಯ ಬಿಚ್ಚಿಟ್ಟ ನಟಿ

‘ಕೌಸ್ಟಿಂಗ್​ ಕೌಚ್​ ಎಂಬುದು ರಿಯಾಲಿಟಿ. ನಾನು ಅದರ ಸಂತ್ರಸ್ತೆ. ಈ ಬಗ್ಗೆ ನಾನು ಬಹಿರಂಗವಾಗಿ ಎಲ್ಲಿಯೂ ಹೇಳಿರಲಿಲ್ಲ. ಈಗ ನನಗೆ ಚಿತ್ರರಂಗದಲ್ಲಿ ಒಂದು ಸ್ಥಾನ ಸಿಕ್ಕಿದೆ. ಹಾಗಾಗಿ ಇದನ್ನು ಹೇಳಲು ಧೈರ್ಯ ತೋರಿಸುತ್ತೇನೆ’ ಎಂದು ಮಾಳವಿಕಾ ಶ್ರೀನಾಥ್​ ಹೇಳಿದ್ದಾರೆ. ‘ಮಂಜು ವಾರಿಯರ್​ ಮಗಳ ಪಾತ್ರ ಎಂದಾಗ ಎಂಥವರೂ ಆಕರ್ಷಣೆಗೆ ಒಳಗಾಗುತ್ತಾರೆ. ಚಿತ್ರರಂಗದಲ್ಲಿ ನನಗೆ ಯಾರ ಸಂಪರ್ಕವೂ ಇರಲಿಲ್ಲ. ನಾನು ಕೂಡ ಆಡಿಷನ್​ಗೆ ಹೋದೆ. ಅದು ನಿಜವಾದ ಆಡಿಷನ್​ ಹೌದೋ ಅಲ್ಲವೋ ಎಂಬುದು ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ ಮಾಳವಿಕಾ.

ಇದನ್ನೂ ಓದಿ: ‘ಪರಮೇಶ ಪಾನ್​ವಾಲ’ ನಟಿ ಸುರ್ವೀನ್​ ಚಾವ್ಲಾಗೆ ಹಲವು ಬಾರಿ ಕಾಸ್ಟಿಂಗ್​ ಕೌಚ್​ ಕಾಟ; ಕೆಟ್ಟ ಅನುಭವ ತೆರೆದಿಟ್ಟಿದ್ದ ನಟಿ

‘ತ್ರಿಶುರ್​ನಲ್ಲಿ ಆಡಿಷನ್​ ಇತ್ತು. ತಾಯಿ ಮತ್ತು ಸಹೋದರಿ ಜೊತೆ ನಾನು ಅಲ್ಲಿಗೆ ಹೋದೆ. ಆಡಿಷನ್​ ಬಳಿಕ ನನ್ನ ಕೂದಲು ಕೆದರಿದ್ದರಿಂದ ಡ್ರೆಸಿಂಗ್​ ರೂಮ್​ಗೆ ತೆರಳಿ ಸರಿಮಾಡಿಕೊಳ್ಳುವಂತೆ ಆತ ಸೂಚಿಸಿದ. ನಾನು ಡ್ರೆಸಿಂಗ್​ ರೂಮ್​ನಲ್ಲಿ ಇದ್ದಾಗ ಆತ ಹಿಂದಿನಿಂದ ಬಂದು ತಬ್ಬಿಕೊಂಡ’ ಎಂದು ಆ ಕರಾಳ ದಿನವನ್ನು ಮಾಳವಿಕಾ ನೆನಪು ಮಾಡಿಕೊಂಡಿದ್ದಾರೆ.

‘ನಾನು ಆಗ ಚಿಕ್ಕವಳಾಗಿದ್ದೆ. ಭಯದಿಂದ ನಡುಗಿಹೋದೆ. ಆತನನ್ನು ದೂರ ತಳ್ಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅಳಲು ಆರಂಭಿಸಿದೆ. ಆತನ ಕ್ಯಾಮೆರಾವನ್ನು ಕೆಡಗಲು ಯತ್ನಿಸಿದೆ. ಅವನ ಗಮನವನ್ನು ಬೇರೆ ಕಡೆಗೆ ಸೆಳೆದು ಅಲ್ಲಿಂದ ತಪ್ಪಿಸಿಕೊಂಡು ಬಂದೆ’ ಎಂದು ಮಾಳವಿಕಾ ಶ್ರೀನಾಥ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ