‘ಚಿರು ಸರಿಯಾದ ವ್ಯಕ್ತಿ ಕಳುಹಿಸಿದರೆ..’; ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಮೇಘನಾ ರಾಜ್
ಮೇಘನಾ ರಾಜ್ ಅವರು ತಮ್ಮ ಪತಿ ಚಿರಂಜೀವಿ ಅವರ ನಿಧನದ ನಂತರದ ಜೀವನ ಮತ್ತು ಎರಡನೇ ಮದುವೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ರಾಯನ್‌ನ ಬೆಳವಣಿಗೆಯ ಬಗ್ಗೆ ಹಾಗೂ ಅವರ ಜೀವನದಲ್ಲಿನ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅವರು ಎರಡನೇ ಮದುವೆಯ ಬಗ್ಗೆ ಇರುವ ವದಂತಿಗಳನ್ನು ಒಪ್ಪಿಕೊಂಡಿದ್ದಾರೆ.

ಚಿರಂಜೀವಿ (Chiranjeevi) ಹಾಗೂ ಮೇಘನಾ ರಾಜ್ ಪ್ರೀತಿಸಿ ಮದುವೆ ಆದವರು. ವಿವಾಹ ಆದ ಕೆಲವೇ ವರ್ಷಗಳಲ್ಲಿ ಚಿರು ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಚಿರು ಸಾಯುವಾಗ ಮೇಘನಾ ಪ್ರೇಗ್ನೆಂಟ್ ಆಗಿದ್ದರು. ಆ ಬಳಿಕ ಮೇಘನಾ ರಾಜ್ಗೆ ಗಂಡು ಮಗು ಜನಿಸಿತು. ಈತನಿಗೆ ರಾಯನ್ ಎಂದು ನಾಮಕರಣ ಮಾಡಲಾಗಿದೆ. ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಆಗಾಗ ವದಂತಿಗಳು ಹುಟ್ಟಿಕೊಳ್ಳುತ್ತವೆ. ಈ ಬಗ್ಗೆ ‘ಗೋಲ್ಡ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.
‘ರಾಯನ್ ಬಂದಮೇಲೆ ಸಾಕಷ್ಟು ಬದಲಾವಣೆ ಆಯ್ತು. ನಮ್ಮ ಕುಟುಂಬದವರು ಮತ್ತಷ್ಟು ಆಪ್ತರಾದೆವು. ಕೆಲವು ಗೊಂದಲ ಇತ್ತು. ಅದೆಲ್ಲವೂ ಬಗೆಹರಿಯಿತು. ರಾಯನ್ ಹಾಗೂ ಚಿರು ಮಧ್ಯೆ ಹೋಲಿಕೆ ಇದೆ. ಈತ ಕೂಡ ಚಿರು ರೀತಿಯೇ ಜೋನ್ಔಟ್ ಆಗ್ತಾನೆ. ಚಿರು ಕೂಡ ಹಾಗೆಯೇ ಮಾಡ್ತಾ ಇದ್ದ. ಸ್ನಾನಕ್ಕೆ ಕರೆದುಕೊಂಡು ಹೋಗ್ತೀನಿ ಎಂದರೆ ಐದು ನಿಮಿಷ ಎನ್ನುತ್ತಾನೆ. ಚಿರು ಕೂಡ ಏನೇ ಆದರೂ ಐದು ನಿಮಿಷ ಎಂದು ಹೇಳುತ್ತಾ ಇದ್ದ’ ಎಂದಿದ್ದಾರೆ ಅವರು.
ಎರಡನೇ ಮದುವೆ ಬಗ್ಗೆ ಮಾತನಾಡಿರೋ ಮೇಘನಾ, ‘ಜನ ಹೀಗೆ ಮಾತಾಡ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕು. ನನಗೆ ಹೆಚ್ಚು ನೋವು ಕೊಡಬೇಕೋ ಅಥವಾ ನನಗೆ ಖುಷಿ ಆಗಲಿ ಎಂದು ಹಾಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಯನ್ಗೆ ಫಿಸಿಕಲ್ ಫಾದರ್ ಬೇಕಿತ್ತು ಎಂಬ ಆಲೋಚನೆ ಬಂದಿಲ್ಲ ಎಂದರೆ ತಪ್ಪಾಗುತ್ತದೆ. ನಿತ್ಯ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪನ ಸಾಂಗ್ ನೋಡ್ತಾನೆ. ನೀನು ಅಪ್ಪನ ತರ ಮಾಡ್ತೀಯಾ ಅಂತೀನಿ. ಇದು ನಿತ್ಯ ಆಗುವ ಸಂಭಾಷಣೆ. ಚಿರು ನಮ್ಮ ಜೊತೆ ಇದಾನೆ. ಆದರೆ, ಫಿಸಿಕಲ್ ಆಗಿ ರಾಯನ್ಗೆ ಓರ್ವ ಅಪ್ಪ ಬೇಕು ಎಂಬ ಆಲೋಚನೆ ಹಾದು ಹೋಗಿದೆ’ ಎಂದಿದ್ದಾರೆ ಮೇಘನಾ ರಾಜ್.
View this post on Instagram
‘ಎರಡನೇ ಮದುವೆ ಬಗ್ಗೆ ಜನರು ಏನು ಆಲೋಚಿಸುತ್ತಾರೆ ಎಂದು ನಾನು ಯೋಚಿಸಲ್ಲ. ಅಭಿಮಾನಿಗಳು ಸೇರಿಕೊಂಡು ನನಗೆ ಒಂದು ಇಮೇಜ್ ಕ್ರಿಯೆಟ್ ಮಾಡಿದ್ದಾರೆ. ಇದು ನನಗೆ ಒತ್ತಡ ತರಿಸುತ್ತಿದೆ. ನಾನು ಏನು ಮಾಡಬೇಕು ಎಂದುಕೊಳ್ಳುತ್ತೇನೆ ಅದು ಆಗುತ್ತಿಲ್ಲ. ನಾನು ಕೂಡ ಸಾಮಾನ್ಯ ವ್ಯಕ್ತಿ’ ಎಂದಿದ್ದಾರೆ ಮೇಘನಾ ರಾಜ್.
ಇದನ್ನೂ ಓದಿ: ಮೇಘನಾ ರಾಜ್ ಮನೆಯಲ್ಲಿ ಕ್ರಿಸ್ಮಸ್ ಸಡಗರ; ರಾಯನ್ ಖುಷಿ ನೋಡಿ..
‘ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾನೋ ಗೊತ್ತಿಲ್ಲ. ಚಿರುಗೆ ಈ ವ್ಯಕ್ತಿ ಸರಿ ಎನಿಸಿದರೆ ಆತ ಅದನ್ನು ಮಾಡಿಸುತ್ತಾನೆ. ಯಾವ ವ್ಯಕ್ತಿಯೂ ಸರಿ ಇಲ್ಲ ಎನಿಸಿದರೆ ಚಿರು ಕಳಿಸಲ್ಲ. ಆಗ ನಾನು ಹೀಗೆಯೇ ಇದ್ದು ಬಿಡುತ್ತೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:15 pm, Thu, 10 April 25