ಸಾಮಾನ್ಯವಾಗಿ ಸಂದರ್ಶನಗಳಲ್ಲಿ ಕಲಾವಿದರು ಹಾಗೂ ತಂತ್ರಜ್ಞರು ಪ್ರೊಫೆಷನಲ್ ಆಗಿ ಉತ್ತರ ನೀಡುತ್ತಾರೆ. ಹಾಸ್ಯ ರೀತಿಯ ಉತ್ತರಗಳಿಂದ ಟ್ರೋಲ್ ಆಗಿ ಸಿನಿಮಾಗಳಿಗೆ ಹಿನ್ನಡೆ ಆಗಿಬಿಟ್ಟರೆ ಎನ್ನುವ ಭಯ ಇರುತ್ತದೆ. ಆದರೆ, ಮಲಯಾಳಂ ನಟ ಮೋಹನ್ಲಾಲ್ (Mohan Lal) ಅವರು ಆ ರೀತಿ ಅಲ್ಲವೇ ಅಲ್ಲ. ಅವರು ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಸಾಕಷ್ಟು ಫನ್ ಆಗಿ ಉತ್ತರಿಸಿದ್ದಾರೆ. ಮೋಹನ್ಲಾಲ್ ಉತ್ತರಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಸಂದರ್ಶಕನೂ ಒಮ್ಮೆ ಶಾಕ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಲುಸಿಫರ್’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಮೋಹನ್ಲಾಲ್ ನಟಿಸಿದ್ದರು. ಈಗ ಚಿತ್ರಕ್ಕೆ ಸೀಕ್ವೆಲ್ ಬಂದಿದೆ. ಈ ಚಿತ್ರವನ್ನು ಪೃಥ್ವಿರಾಜ್ ಅವರೇ ನಿರ್ದೇಶನ ಮಾಡಿದ್ದಾರೆ. ಮತ್ತಷ್ಟು ರಗಡ್ ಆಗಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕಾಗಿ ಪೃಥ್ವಿರಾಜ್ ಹಾಗೂ ಮೋಹನ್ಲಾಲ್ ಸಂದರ್ಶನ ನೀಡುತ್ತಾ ಇದ್ದಾರೆ. ಈ ವೇಳೆ ಕೆಲವು ಫನ್ನಿ ಘಟನೆ ನಡೆದಿದೆ.
ಮೋಹನ್ಲಾಲ್ ಅವರಿಗೆ ‘ತಮಿಳಿನ ಯಾವ ಹೀರೋ ಅಥವಾ ಹೀರೋಯಿನ್ ಇಷ್ಟ’ ಎಂದು ಕೇಳಲಾಯಿತು. ಇದಕ್ಕೆ ಮೋಹನ್ಲಾಲ್ ಅವರು ಹೀರೋಯಿನ್ ಇಷ್ಟ ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಂದರ್ಶನ ಮಾಡುತ್ತಿರುವ ವ್ಯಕ್ತಿ ಕೂಡ ಒಮ್ಮೆ ದಂಗಾದರು. ಆ ಬಳಿಕ ಇದು ಕಾಮಿಡಿಗೆ ಹೇಳಿದ್ದು ಎನ್ನುವ ವಿಚಾರ ತಿಳಿದು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ‘ಬೇರೆ ಲೆವೆಲ್ ಉತ್ತರ’ ಎಂದರು ಸಂದರ್ಶಕ.
ಇದನ್ನೂ ಓದಿ: ಮೋಹನ್ಲಾಲ್ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್
‘ನಿಮ್ಮ ಇಷ್ಟದ ಹಾಬಿ’- ‘ಈ ರೀತಿ ಸಂದರ್ಶನ ನೀಡೋದು ’ ಎಂದು ಮೋಹನ್ಲಾಲ್ ಹೇಳಿದ್ದಾರೆ. ‘ಮುಂದಿನ ಪ್ರಶ್ನೆ’ ಎಂದು ಹೇಳಿದಾಗ ‘ಇದು ಪ್ರಶ್ನೆಯೇ’ ಮೋಹನ್ಲಾಲ್ ಮರು ಪ್ರಶ್ನೆ ಮಾಡಿದ್ದಾರೆ. ‘ನಿಮ್ಮ ಸಿನಿಮಾದಲ್ಲಿ ಶಾರುಖ್ ಖಾನ್ನಲ್ಲಿ ನಟಿಸಿದ್ದಾರಂತೆ ಹೌದೇ’ ಎಂದು ಕೇಳಲಾಯಿತು. ‘ಹೌದು ಶಾರುಖ್ ಖಾನ್ ಅವರು ನಟಿಸಿದ್ದರು. ಆದರೆ, ಪೃಥ್ವಿರಾಜ್ ಆ ದೃಶ್ಯವನ್ನು ಕತ್ತರಿಸಿದ್ದಾರೆ’ ಎಂದು ಫನ್ ಆಗಿ ಉತ್ತರ ನೀಡಿದ್ದಾರೆ. ಈ ವಿಡಿಯೋನ ಫ್ಯಾನ್ ಪೇಜ್ಗಳಲ್ಲಿ ವೈರಲ್ ಮಾಡಲಾಗುತ್ತಿದೆ. ‘ಲುಸಿಫರ್ 2’ ಚಿತ್ರ ಮಾರ್ಚ್ 27ರಂದು ಥಿಯೇಟರ್ನಲ್ಲಿ ಬಿಡುಗಡೆ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Wed, 26 March 25