ಅರ್ಧ ಗಂಟೆಯ ದೃಶ್ಯಕ್ಕೆ 50 ಕೋಟಿ ರೂಪಾಯಿ ಸುರಿದ ‘ಪುಷ್ಪ 2’ ನಿರ್ಮಾಪಕರು

Allu Arjun: ಕೆಲವು ವರದಿಗಳ ಪ್ರಕಾರ ‘ಪುಷ್ಪ 2’ ಚಿತ್ರದಲ್ಲಿ ಇಂಟರ್​ವಲ್​ಗೂ ಮೊದಲು 30 ನಿಮಿಷಗಳ ದೃಶ್ಯವೊಂದು ಬರಲಿದೆ. ಇದಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈ ದೃಶ್ಯ ಸೆರೆಹಿಡಿಯಲು ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಅರ್ಧ ಗಂಟೆಯ ದೃಶ್ಯಕ್ಕೆ 50 ಕೋಟಿ ರೂಪಾಯಿ ಸುರಿದ ‘ಪುಷ್ಪ 2’ ನಿರ್ಮಾಪಕರು
ಅಲ್ಲು ಅರ್ಜುನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Feb 29, 2024 | 1:02 PM

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾನ ಅಂದುಕೊಂಡ ದಿನಾಂಕದಂದು ರಿಲೀಸ್ ಮಾಡಬೇಕು ಎಂಬ ನಿಟ್ಟಿನಲ್ಲಿ ನಿರ್ದೇಶಕ ಸುಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಈಗ ಸಿನಿಮಾ ಬಗ್ಗೆ ಭರ್ಜರಿ ಅಪ್​​ಡೇಟ್ ಒಂದು ಸಿಕ್ಕಿದೆ. ಈ ಚಿತ್ರದ ಒಂದು ಪ್ರಮುಖ ದೃಶ್ಯಕ್ಕೆ ತಂಡ ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

‘ಪುಷ್ಪ’ ಸಿನಿಮಾ 2021ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿ ಬರೋಬ್ಬರಿ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಹಿನ್ನೆಲೆಯಲ್ಲಿ ಎರಡನೇ ಪಾರ್ಟ್ ಬಗ್ಗೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಕೂಡ ಒಳ್ಳೆಯ ಬಿಸ್ನೆಸ್ ಮಾಡುವ ಬಗ್ಗೆ ತಂಡಕ್ಕೆ ನಿರೀಕ್ಷೆ ಇದೆ. ಬಜೆಟ್ ವಿಚಾರದಲ್ಲಿ ಮೈತ್ರಿ ಮೂವೀ ಮೇಕರ್ಸ್ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ನಿರ್ದೇಶಕರು ಕೇಳಿದಷ್ಟು ಹಣವನ್ನು ಚೆಲ್ಲುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ.

ಕೆಲವು ವರದಿಗಳ ಪ್ರಕಾರ ‘ಪುಷ್ಪ 2’ ಸಿನಿಮಾದಲ್ಲಿ ಇಂಟರ್​ವಲ್​ಗೂ ಮೊದಲು 30 ನಿಮಿಷಗಳ ದೃಶ್ಯವೊಂದು ಬರಲಿದೆ. ಇದಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈ ದೃಶ್ಯ ಸೆರೆಹಿಡಿಯಲು ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ 30 ನಿಮಿಷಗಳು ಕಥೆಗೆ ಪ್ರಮುಖ ಟ್ವಿಸ್ಟ್ ನೀಡಲಿವೆಯಂತೆ.

ಇದನ್ನೂ ಓದಿ: ‘ಖಂಡಿತವಾಗಿ ನೀವು ‘ಪುಷ್ಪ 3’ ನಿರೀಕ್ಷಿಸಬಹುದು’: ಗುಡ್​ ನ್ಯೂಸ್​ ನೀಡಿದ ಅಲ್ಲು ಅರ್ಜುನ್​

‘ಪುಷ್ಪ’ ಕಥೆ ತಿರುಪತಿಯಲ್ಲಿ ಸಾಗಿತ್ತು. ಈ ಕಾಡಿನಲ್ಲಿ ಸಿಗುವ ರಕ್ತಚಂದನದ ಕಳ್ಳ ಸಾಗಣೆ ಬಗ್ಗೆ ಹೇಳಲಾಗಿತ್ತು. ಎರಡನೇ ಭಾಗದಲ್ಲಿ ತಿರುಪತಿಯ ಗಂಗಮ್ಮ ಜಾತ್ರೆಯೂ ಇರಲಿದೆಯಂತೆ. ಮಧ್ಯಂತರಕ್ಕೂ ಮೊದಲ 30 ನಿಮಿಷಗಳ ಕಥೆ ಇದೇ ಜಾತ್ರೆಯಲ್ಲಿ ಸಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ದೊಡ್ಡ ದೊಡ್ಡ ಸೆಟ್​ಗಳನ್ನು ಹಾಕಲಾಗಿದೆ.

ಏನೆಲ್ಲ ಇರಲಿದೆ?

30 ನಿಮಿಷಗಳಲ್ಲಿ ಒಂದು ಸಾಂಗ್, ಫೈಟ್ ಹಾಗೂ ಭಾವನಾತ್ಮಕ ದೃಶ್ಯಗಳು ಇರಲಿವೆ. ಈ ಚಿತ್ರದ ಬಜೆಟ್ 500 ಕೋಟಿ ರೂಪಾಯಿ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಇವೆಲ್ಲವೂ ಅಂತೆ-ಕಂತೆ ಹಂತದಲ್ಲಿದೆ. ಸಿನಿಮಾ ನೋಡಿದ ಬಳಿಕವೇ ಇದಕ್ಕೆ ಉತ್ತರ ಸಿಗಲಿದೆ.

ಮೊದಲ ಭಾಗದಲ್ಲಿ

ಸಾಮಾನ್ಯ ಕೂಲಿಯವನಾಗಿದ್ದ ಪುಷ್ಪರಾಜ್ (ಅಲ್ಲು ಅರ್ಜುನ್) ರಕ್ತಚಂದನದ ಕಳ್ಳ ಸಾಗಣೆ ದಂಧೆ ಸೇರಿಕೊಳ್ಳುತ್ತಾನೆ. ಅಲ್ಲಿಂದ ಆತ ಬೆಳೆಯುತ್ತಾ ಹೋಗುತ್ತಾನೆ. ಮೊದಲ ಭಾಗದ ಕೊನೆಯಲ್ಲಿ ಆತ ಡಾನ್ ಆಗಿ ನಿಲ್ಲುತ್ತಾನೆ. ಸಂಪೂರ್ಣ ದಂಧೆಯನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಎರಡನೇ ಭಾಗದಲ್ಲಿ ಆತ ಏನು ಮಾಡುತ್ತಾನೇ ಅನ್ನೋದೆ ಕಥೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ