AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ ವೀಕೆಂಡ್​ಗಳನ್ನು ಮತ್ತಷ್ಟು ಸುಂದರ ಮಾಡುತ್ತಿದ್ದಾರೆ ಶೋಭಿತಾ

ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರ ವಿವಾಹಿತ ಜೀವನದ ಬಗ್ಗೆ ಈ ಲೇಖನ ತಿಳಿಸುತ್ತದೆ. ಅವರು ದೇಶ-ವಿದೇಶಗಳಿಗೆ ಪ್ರವಾಸ ಹೋಗುವುದು, ಸಿನಿಮಾ ನೋಡುವುದು ಮತ್ತು ಫ್ಯಾಮಿಲಿ ಟೈಮ್ ಕಳೆಯುವುದು ಇವರ ವಾರಾಂತ್ಯದ ಚಟುವಟಿಕೆಗಳು ಎಂದು ತಿಳಿದುಬಂದಿದೆ. ಅವರ ಸಂಬಂಧದ ಬೆಳವಣಿಗೆ, ವಿವಾಹದ ಬಗ್ಗೆ ಮಾಹಿತಿ ಮತ್ತು ಗರ್ಭಧಾರಣೆಯ ವದಂತಿಗಳನ್ನು ಈ ಲೇಖನ ಚರ್ಚಿಸುತ್ತದೆ.

ನಾಗ ಚೈತನ್ಯ ವೀಕೆಂಡ್​ಗಳನ್ನು ಮತ್ತಷ್ಟು ಸುಂದರ ಮಾಡುತ್ತಿದ್ದಾರೆ ಶೋಭಿತಾ
Shobita Naga
 ಶ್ರೀಲಕ್ಷ್ಮೀ ಎಚ್
| Edited By: |

Updated on:Jun 30, 2025 | 11:06 AM

Share

ತೆಲುಗು ನಟ ನಾಗ ಚೈತನ್ಯ (Naga Chaithanya) ಹಾಗೂ ಶೋಭಿತಾ ಧುಲಿಪಾಲ್ ಇಬ್ಬರೂ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಆಗಾಗ ದೇಶ-ವಿದೇಶದಲ್ಲಿ ಸುತ್ತಾಟ ನಡೆಸೋದನ್ನು ನೀವು ಕಾಣಬಹುದು. ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಸಿಕ್ಕಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. ಭಾನುವಾರ ಸಿನಿಮಾ ನೋಡುತ್ತಾರೆ, ಸುತ್ತಾಟ ನಡೆಸುತ್ತಾರೆ ಹಾಗೂ ಫೇರವರಿಟ್ ಫುಡ್​ಗಳನ್ನು ಆರ್ಡರ್ ಮಾಡಿ ತಿನ್ನುತ್ತಾರೆ. ಆದರೆ, ಮೊದಲು ಈ ರೀತಿ ಇರಲಿಲ್ಲ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

‘ಅವಳಿಗೆ ಓದುವುದರಲ್ಲಿ ಆಸಕ್ತಿ ಇದೆ. ನನಗೆ ರೇಸಿಂಗ್‌ನಲ್ಲಿ ಆಸಕ್ತಿ ಇದೆ. ಆದರೆ ನಾವಿಬ್ಬರೂ ಸೃಜನಶೀಲ ವ್ಯಕ್ತಿಗಳು. ನಾವು ರಜಾದಿನಗಳನ್ನು ಯೋಜಿಸುವ ಸರದಿ ಮಾಡಿಕೊಳ್ಳುತ್ತೇವೆ. ಒಂದು ಬಾರಿ ಅದು ಅವಳ ನಾಯಕತ್ವ, ಮುಂದಿನ ಬಾರಿ ಅದು ನನ್ನದು’ ಎಂದು ಅವರು ಹೇಳಿದ್ದಾರೆ.

ಶೋಭಿತಾಗೆ ರೇಸ್‌ಟ್ರಾಕ್‌ನಲ್ಲಿ ಕಾರು ಡ್ರೈವ್ ಮಾಡುವುದು ಹೇಗೆಂದು ಕಲಿಸಿದ ಸಮಯವನ್ನು ನಾಗ ಚೈತನ್ಯ ನೆನಪಿಸಿಕೊಂಡರು. ‘ಒಮ್ಮೆ ಕಾರು ಡ್ರೈವ್ ಮಾಡಲು ಆರಂಭಿಸಿದರೆ ಅವರು ನಿಲ್ಲಿಸಲು ಬಯಸುವುದಿಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ:ಮತ್ತೆ ನಾಗ ಚೈತನ್ಯ ಜತೆ ಕಾಣಿಸಿಕೊಳ್ಳಲ್ಲ: ಸಮಂತಾ ಖಡಕ್ ನಿರ್ಧಾರ

‘ನನ್ನ ತಂದೆ, ನನ್ನ ತಾಯಿ ಮತ್ತು ನನ್ನ ಪತ್ನಿಯನ್ನು ನಾನು ಹೆಚ್ಚು ಮೆಚ್ಚಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ನಾಗ ಚೈತನ್ಯ ಅವರು ನಾಗಾರ್ಜುನ ಹಾಗೂ ಲಕ್ಷ್ಮಿ ದಗ್ಗುಬಾಟಿ ಮಗಳು. ಈ ದಂಪತಿ ಈಗಾಗಲೇ ವಿಚ್ಛೇದನ ಪಡೆದು ದೂರ ಆಗಿದ್ದಾರೆ.

ಕಳೆದ ತಿಂಗಳು ಶೋಭಿತಾ ಅವರು ಪ್ರೆಗ್ನೆಂಟ್ ಎಂಬ ವಿಚಾರವು ವೈರಲ್ ಆಗಿತ್ತು. ಅವರು ವೇವ್​ 2025ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ಹೊಟ್ಟೆ ಮುಂದೆ ಬಂದಂತೆ ಕಂಡಿತ್ತು. ಹೀಗಾಗಿ, ಎಲ್ಲರೂ ಅವರು ಪ್ರೇಗ್ನೆಂಟ್ ಎಂದು ಭಾವಿಸಿದ್ದರು. ಅವರು ಹೊಟ್ಟೆಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದನ್ನು ನೀವು ಕಾಣಬಹುದು.

ನಾಗ ಚೈತನ್ಯ ಹಾಗು ಶೋಭಿತಾ ಪ್ರೀತಿ ಶುರುವಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಈ ಮೊದಲು ಶೋಭಿತಾ ಅವರು ಉತ್ತರಿಸಿದ್ದರು. ನಾಗ ಚೈತನ್ಯ ಅವರು ಶೋಭಿತಾನ ಫಾಲೋ ಮಾಡುತ್ತಿದ್ದರಂತೆ. ಆ ಬಳಿಕ ಇಬ್ಬರ ಮಧ್ಯೆ ಸಂದೇಶಗಳು ರವಾನೆ ಆಗುತ್ತಿದ್ದವು.  ಆ ಬಳಿಕ ದಂಪತಿ 2024ರ ಆಗಸ್ಟ್​ 8ರಂದು ನಿಶ್ಚಿತಾರ್ಥ ಹಾಗೂ ಅದೇ ವರ್ಷ ಡಿಸೆಂಬರ್ 4ರಂದು ವಿವಾಹ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Sun, 29 June 25