‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಸ್ಪೆಷಲ್ ಅಪ್ಡೇಟ್ ಕೊಟ್ಟ ನಿರ್ಮಾಪಕ ನಾಗ ವಂಶಿ
‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಹಲವು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಇನ್ನೂ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ, ಡಬ್ಬಿಂಗ್ ಮುಗಿದಿಲ್ಲ ಎಂಬಿತ್ಯಾದಿ ವಿಚಾರಗಳು ಚರ್ಚೆಯಲ್ಲಿವೆ.

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ (Guntur Kaaram Movie) ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ರಿಲೀಸ್ಗೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಈ ಸಂದರ್ಭದಲ್ಲಿ ನಿರ್ಮಾಪಕ ನಾಗ ವಂಶಿ ಅವರು ಫ್ಯಾನ್ಸ್ಗೆ ಖುಷಿ ಆಗುವಂಥ ವಿಚಾರ ರಿವೀಲ್ ಮಾಡಿದ್ದಾರೆ.
‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಹಲವು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಇನ್ನೂ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ, ಡಬ್ಬಿಂಗ್ ಮುಗಿದಿಲ್ಲ ಎಂಬಿತ್ಯಾದಿ ವಿಚಾರಗಳು ಚರ್ಚೆಯಲ್ಲಿವೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಈ ಮಧ್ಯೆ ನಿರ್ಮಾಪಕ ನಾಗ ವಂಶಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.
‘ಗುಂಟೂರು ಖಾರಂ ಸಿನಿಮಾದ ಮೊದಲಾರ್ಧದಲ್ಲಿ ಒಂದು ಫೈಟ್ ಇದೆ. ನಿಮಗೆ ಎರಡೆರಡು ಸೂಪರ್ಸ್ಟಾರ್ಗಳ ಕಾಣಲಿದ್ದಾರೆ. ಮೊದಲಾರ್ಧದಲ್ಲಿ ಸೂಪರ್ಸ್ಟಾರ್ ಕೃಷ್ಣ ಅವರ ರೆಫರೆನ್ಸ್ ಇದೆ. ಅಭಿಮಾನಿಗಳಿಗೆ ಈ ಸಂಕ್ರಾಂತಿ ಹೆಚ್ಚು ವಿಶೇಷ ಆಗಲಿದೆ. ಕೊನೆಯ 45 ನಿಮಿಷ ಸಿನಿಮಾದ ವಿಶೇಷ ಹೈಲೈಟ್’ ಎಂದು ನಾಗ ವಂಶಿ ಬರೆದುಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
Producer #NagaVamsi latest updates on #GunturKaaram#MaheshBabu @TBO_Updates pic.twitter.com/PJ2939H39M
— TollywoodBoxoffice.IN (@TBO_Updates) January 2, 2024
ಇದನ್ನೂ ಓದಿ: ಇನ್ನೂ ಪೂರ್ಣಗೊಂಡಿಲ್ಲ ‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್; ಅಭಿಮಾನಿಗಳಿಗೆ ಆಗಿದೆ ಚಿಂತೆ
‘ಗುಂಟೂರು ಖಾರಂ’ ಸಿನಿಮಾ ಜನವರಿ 12ರಂದು ರಿಲೀಸ್ ಆಗಲಿದೆ. ಸಿನಿಮಾದ ಸಾಂಗ್ಗಳು ಮಾತ್ರ ರಿಲೀಸ್ ಆಗಿವೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡಲು ತಂಡದ ಬಳಿ ಸಮಯ ಇಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಈಗ ನಿರ್ಮಾಪಕರಿಂದ ಭರವಸೆ ಸಿಕ್ಕಿದ್ದರಿಂದ ಅಭಿಮಾನಗಳು ಕೊಂಚ ನಿರಾಳ ಆಗಿದ್ದರು. ಈ ಚಿತ್ರದ ಟ್ರೇಲರ್ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ಜನವರಿ 6ರಂದು ಟ್ರೇಲರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ