ಟೀಕೆ, ವಿಮರ್ಶೆಗಳ ನಡುವೆಯೂ 100 ಕೋಟಿ ದಾಟಿದ ನಾನಿಯ ‘ಪ್ಯಾರಡೈಸ್’
ನಾನಿಯ ‘ದಿ ಪ್ಯಾರಡೈಸ್’ ಸಿನಿಮಾ ಬಿಡುಗಡೆ ಆದಾಗಿನಿಂತಲೂ ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳೇ ಹರಿದಾಡುತ್ತಿದೆ. ಸಿನಿಮಾದ ಕತೆ, ಚಿತ್ರಕತೆ, ನಿರೂಪಣೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಜೊತೆಗೆ ಸಿನಿಮಾನಲ್ಲಿ ತೋರಿಸಲಾಗಿರುವ ಅತಿಯಾದ ಹಿಂಸೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಇವೆಲ್ಲವುಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಕೆ.

ಮುಖ್ಯಾಂಶಗಳು
- ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾ
- ‘ದಿ ಪ್ಯಾರಡೈಸ್’ ಸಿನಿಮಾದ ಗಳಿಕೆ
- 100 ಕೋಟಿ ದಾಟಿದ ‘ದಿ ಪ್ಯಾರಡೈಸ್’ ಸಿನಿಮಾ ಗಳಿಕೆ
ತೆಲುಗಿನ ಸ್ಟಾರ್ ನಟ ನಾನಿ ನಟಿಸಿರುವ ‘ದಿ ಪ್ಯಾರಡೈಸ್’ ಸಿನಿಮಾ ಕಳೆದ ವಾರವಷ್ಟೆ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆ ಆದಾಗಿನಿಂತಲೂ ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳೇ ಹರಿದಾಡುತ್ತಿದೆ. ಸಿನಿಮಾದ ಕತೆ, ಚಿತ್ರಕತೆ, ನಿರೂಪಣೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಜೊತೆಗೆ ಸಿನಿಮಾನಲ್ಲಿ ತೋರಿಸಲಾಗಿರುವ ಅತಿಯಾದ ಹಿಂಸೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಇವೆಲ್ಲವುಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಕೆ.
ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ಸಿನಿಮಾ ‘ದಿ ಪ್ಯಾರಡೈಸ್’ ಬಿಡುಗಡೆಯಾದ 6ನೇ ದಿನಕ್ಕೆ ಭಾರತದಲ್ಲಿ 100 ಕೋಟಿ ರೂ. ನಿವ್ವಳ ಗಳಿಕೆ ಗಡಿಯನ್ನು ಯಶಸ್ವಿಯಾಗಿ ದಾಟಿದೆ. ಆರಂಭದಲ್ಲಿ ಸಿನಿಮಾಕ್ಕೆ ಬಂದ ನೆಗೆಟಿವ್ ವಿಮರ್ಶೆಗಳಿಂದಾಗಿ ಈ ಸಿನಿಮಾ 100 ಕೋಟಿ ಗಡಿ ದಾಟಲಿದೆಯೇ ಇಲ್ಲವೇ ಎಂಬ ಅನುಮಾನ ಮೂಡಿತ್ತು. ಆದರೆ ಪ್ರೇಕ್ಷಕರು ನಾನಿಯ ಕೈಬಿಟ್ಟಿಲ್ಲ.
ರಿಲೀಸ್ಗೆ ಮುಂಚೆ ಸಿನಿಮಾಕ್ಕೆ ಭಾರಿ ಹೈಪ್ ಸೃಷ್ಟಿ ಆಗಿತ್ತು. ನಾನಿ ಸಹ ಸಿನಿಮಾದ ಬಗ್ಗೆ ಸಾಕಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದರು. ಪ್ರಚಾರವನ್ನೂ ಜೋರಾಗಿ ಮಾಡಿದ್ದರು. ಟ್ರೈಲರ್ ಸಹ ರಿಲೀಸ್ ಮಾಡದೆ ಕುತೂಹಲ ಮೂಡಿಸುವಲ್ಲಿ ಯಶಸ್ವಿ ಆಗಿದ್ದರು. ಸೆಪ್ಟೆಂಬರ್ 24 ರಂದು ತೆರೆಕಂಡ ಈ ಚಿತ್ರವು ಆರಂಭದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ನಾನಿ ವೃತ್ತಿಜೀವನದಲ್ಲೇ ಅತ್ಯಧಿಕ ಓಪನಿಂಗ್ ಗಳಿಸಿದ ಸಿನಿಮಾಗಳಲ್ಲಿ ಒಂದಾಗಿ ಇದು ಹೊರಹೊಮ್ಮಿತು. ಆದರೆ ಆರಂಭದಲ್ಲೇ ಎದುರಾದ ನೆಗೆಟಿವ್ ವಿಮರ್ಶೆಗಳಿಂದಾಗಿ ಸಿನಿಮಾದ ಗಳಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ.
ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾಕ್ಕೆ ತೀವ್ರ ಟೀಕೆ: ನಟ ನಾನಿ ಹೇಳಿದ್ದೇನು?
ಚಿತ್ರದಲ್ಲಿ ನಾನಿಯವರ ಜೊತೆಗೆ ಖಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಮೋಹನ್ಬಾಬು ಮತ್ತು ಬಾಲಿವುಡ್ ಯುವನಟ ರಾಘವ್ ಜುಯಲ್ ವಿಲನ್ ಪಾತ್ರಗಳಲ್ಲಿ ಖಡಕ್ ಆಗಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಉದ್ದನೆಯ ಜಡೆಗಳನ್ನು ಬಿಟ್ಟುಕೊಂಡು ಬಲು ವಿಭಿನ್ನವಾದ ಮತ್ತು ಸಂಪೂರ್ಣ ಆಕ್ಷನ್ ಕೇಂದ್ರಿತ ಮಾಸ್ ಮಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ ನಟ ನಾನಿ.
ತೆಲುಗು ಜೊತೆಗೆ ಹಿಂದಿ ಮತ್ತು ತಮಿಳು ಭಷೆಗಳಲ್ಲೂ ‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಿದೆ. ಮೂಲ ಭಾಷೆಯಾದ ತೆಲುಗಿನಲ್ಲಿ ಅತ್ಯಧಿಕ ಕಲೆಕ್ಷನ್ ಮಾಡುತ್ತಿದೆ. ಭಾರತ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ. ಗಳಿಸಿರುವ ಈ ಸಿನಿಮಾ, ವಿಶ್ವಾದ್ಯಂತ ಒಟ್ಟು ಗಳಿಕೆ ಸುಮಾರು 145 ರಿಂದ 150 ಕೋಟಿ ರೂಪಾಯಿಗಳಿಗೂ ಅಧಿಕವಾಗಿ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




