‘ಮೂಕುತ್ತಿ ಅಮ್ಮನ್ 2’ ನಟಿ ನಯನತಾರಾ 60 ಅಡಿ ಕಟೌಟ್
ದಕ್ಷಿಣದ ಸ್ಟಾರ್ ನಟರುಗಳಿಗೆ ಇರುವಂತೆಯೇ ಪಕ್ಕಾ ಫ್ಯಾನ್ ಫಾಲೋವಿಂಗ್ ನಟಿ ನಯನತಾರಾ ಅವರಿಗೆ ಇದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಸ್ಟಾರ್ ನಟ ಕಟೌಟ್ ಹಾಕುವುದು ಸಾಮಾನ್ಯ. ಆದರೆ ನಟಿಯರಿಗೆ ಹೀಗೆ ಕಟೌಟ್ ಹಾಕುವ ಸಂಪ್ರದಾಯ ಬಹಳ ಕಡಿಮೆ ಆದರೆ ಇದೀಗ ನಯನತಾರಾ ಅವರಿಗೂ ಸಹ ಭಾರಿ ದೊಡ್ಡ ಕಟೌಟ್ ಅನ್ನು ಅಭಿಮಾನಿಗಳು ಹಾಕಿದ್ದಾರೆ.

ನಯನತಾರಾ ಅವರನ್ನು ‘ಲೇಡಿ ಸೂಪರ್ ಸ್ಟಾರ್’ ಎಂದೇ ಕರೆಯಲಾಗುತ್ತದೆ. ದಕ್ಷಿಣದಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ದಕ್ಷಿಣದ ಸ್ಟಾರ್ ನಟರುಗಳಿಗೆ ಇರುವಂತೆಯೇ ಪಕ್ಕಾ ಫ್ಯಾನ್ ಫಾಲೋವಿಂಗ್ ನಟಿ ನಯನತಾರಾ ಅವರಿಗೆ ಇದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಸ್ಟಾರ್ ನಟ ಕಟೌಟ್ ಹಾಕುವುದು ಸಾಮಾನ್ಯ. ಆದರೆ ನಟಿಯರಿಗೆ ಹೀಗೆ ಕಟೌಟ್ ಹಾಕುವ ಸಂಪ್ರದಾಯ ಬಹಳ ಕಡಿಮೆ ಆದರೆ ಇದೀಗ ನಯನತಾರಾ ಅವರಿಗೂ ಸಹ ಭಾರಿ ದೊಡ್ಡ ಕಟೌಟ್ ಅನ್ನು ಅಭಿಮಾನಿಗಳು ಹಾಕಿದ್ದಾರೆ.
ನಯನತಾರಾ ಪ್ರಸ್ತುತ ‘ಮೂಕುತಿ ಅಮ್ಮನ್ 2’ ಹೆಸರಿನ ಸಿನಿಮಾನಲ್ಲಿ ನಟನೆ ಮಾಡಿದ್ದು, ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳಿವೆ. ಇದೀಗ ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದ್ದು, ಚಿತ್ರದ ಬಿಡುಗಡೆಗೆ ಮುನ್ನ ಚೆನ್ನೈನ ವೆಲ್ಸ್ ಥಿಯೇಟರ್ ಬಳಿ ನಯನತಾರಾ ಅವರ 60 ಅಡಿ ಎತ್ತರದ ಬೃಹತ್ ಕಟೌಟ್ ಅನ್ನು ನಿರ್ಮಿಸಲಾಗಿದೆ. ನಯನತಾರಾ ಅವರು ತ್ರಿಶೂಲ ಹಿಡಿದು ದೇವಿಯ ರೂಪದಲ್ಲಿರುವ ಈ ದೈತ್ಯ ಕಟೌಟ್ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ನಟಿಯೊಬ್ಬರಿಗೆ ಹೀಗೆ ಕಟೌಟ್ ಹಾಕುವುದು ಅಪರೂಪದಲ್ಲೇ ಅಪರೂಪ. ಈಗ ನಯನತಾರಾ ಅವರಿಗೆ ಈ ‘ಗೌರವ’ ನೀಡಿರುವ ಬಗ್ಗೆ ಸಾಕಷ್ಟು ಧನಾತ್ಮಕ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹನಟಿ ರೆಜಿನಾ ಕ್ಯಾಸಂದ್ರ ಟ್ವೀಟ್ ಮಾಡಿದ್ದು, ನಯನತಾರಾ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ಈ ಮಟ್ಟದ ಬೃಹತ್ ಕಟೌಟ್ ಪಡೆದ ಮೊದಲ ನಟಿ ನಯನತಾರಾ ಎಂದು ತಮಗೆ ತಿಳಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಯನತಾರಾ-ವಿಘ್ನೇಶ್ ಶಿವನ್ ಮಕ್ಕಳ ಜನ್ಮದಿನಕ್ಕೆ ಬಂತು ಜಿರಾಫೆ, ಆನೆ, ಜಿಂಕೆ
ಸುಂದರ್ ಸಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಮೂಕುತಿ ಅಮ್ಮನ್ 2’ ಚಿತ್ರವು 2020ರಲ್ಲಿ ಬಿಡುಗಡೆಯಾದ ‘ಮೂಕುತಿ ಅಮ್ಮನ್’ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಹೊಸ ಚಿತ್ರದಲ್ಲಿ ನಯನತಾರಾ ಅವರು ದೇವಿಯ ಪಾತ್ರದ ಜೊತೆಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾನಲ್ಲಿ ಕನ್ನಡದ ನಟ ದುನಿಯಾ ವಿಜಯ್ ಅವರು ಸಹ ನಟಿಸಿರುವುದು ವಿಶೇಷ. ಜೊತೆಗೆ ರೆಜಿನಾ ಕ್ಯಾಸಂದ್ರ, ಊರ್ವಶಿ ಮತ್ತು ಯೋಗಿ ಬಾಬು ಮುಂತಾದ ಪ್ರಮುಖ ತಾರಾಗಣವಿದೆ. ಈ ಬಹುನಿರೀಕ್ಷಿತ ಚಿತ್ರವು ನವೆಂಬರ್ 6 ರಂದು ಬಿಡುಗಡೆಯಾಗಲಿದೆ.
ನಯನತಾರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಸ್ತುತ ಅವರು ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮಲಯಾಳಂನ ‘ಡಿಯರ್ ಸ್ಟೂಡೆಂಟ್ಸ್’, ತಮಿಳಿನ ‘ಮನ್ನಾಂಗಟ್ಟಿ ಸಿನ್ಸ್ 1960’, ‘ರಕ್ಕಾಯಿ’ ಸಿನಿಮಾಗಳಲ್ಲಿಯೂ ಸಹ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




